
ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಉತ್ಸಾಹಿ ಕಾರ್ಯಕರ್ತರಾದ ಶ್ರೀ ರತ್ನಾಕರ್ ಭಂಡಾರಿಯವರಿಗೆ ಜುಲೈ 19,2019 ರ ಶುಕ್ರವಾರ ಹುಟ್ಟುಹಬ್ಬದ ಸಂಭ್ರಮ.

ದಿವಂಗತ ತಲ್ಲೂರು ಬಚ್ಚು ಭಂಡಾರಿ ಹಾಗೂ ಬಸ್ರೂರು ಪದ್ದು ಭಂಡಾರಿಯವರ ಪುತ್ರರಾದ ರತ್ನಾಕರ್.ಬಿ.ಭಂಡಾರಿಯವರು ಸರಿ ಸುಮಾರು ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು ಅಂದಿನಿಂದಲೂ ಬೆಂಗಳೂರು ಭಂಡಾರಿ ಸಮಾಜ ಸಂಘದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ಮೊದಲು ಬೆಂಗಳೂರಿನ ಸುಖ ಸಾಗರ್ ಗ್ರೂಪ್ಸ್ ಆಫ್ ಹೋಟೆಲ್ಸ್ ನಲ್ಲಿ ಉದ್ಯೋಗದಲ್ಲಿದ್ದ ರತ್ನಾಕರ್ ಭಂಡಾರಿ ಅವರು ಪ್ರಸ್ತುತ ಬೆಂಗಳೂರಿನ ರಾಜಾಜಿನಗರದ ಹೋಟೆಲ್ ಕದಂಬ ಸಸ್ಯಾಹಾರಿ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾರೆ.ಬೆಂಗಳೂರು ವಲಯದ ಭಂಡಾರಿ ಸಮಾಜ ಸಂಘದ ಮಾಸಿಕ ಸಭೆಯು ಪ್ರತಿ ತಿಂಗಳು ಕದಂಬ ಹೋಟೆಲ್ ನ ಸಭಾಂಗಣದಲ್ಲಿ ನೆರವೇರಲು ರತ್ನಾಕರ್ ಭಂಡಾರಿ ಅವರ ಸಹಕಾರ ಕಾರಣ ಎಂಬುದನ್ನು ಇಲ್ಲಿ ನೆನಪಿಸಬಹುದು.

ರತ್ನಾಕರ್ ಭಂಡಾರಿಯವರ ಪತ್ನಿ ಮಂದಾರ್ತಿಯ ದಿವಂಗತ ಪದ್ಮನಾಭ ಭಂಡಾರಿ ಹಾಗೂ ಜಲಜಾ ಭಂಡಾರಿ ದಂಪತಿಯ ಪುತ್ರಿ ಶ್ರೀಮತಿ ಉಮಾ ರತ್ನಾಕರ್ ಭಂಡಾರಿ. ಅವರ ಏಕೈಕ ಪುತ್ರಿ ರಕ್ಷಾ.ಆರ್.ಭಂಡಾರಿ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದು ಅಕ್ಸೆಂಚರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರತ್ನಾಕರ್.ಬಿ.ಭಂಡಾರಿಯವರಿಗೆ ಅವರ ಸ್ನೇಹಿತರು,ಸಹೋದ್ಯೋಗಿಗಳು,ಆತ್ಮೀಯರು, ಬಸ್ರೂರು,ಮಂದಾರ್ತಿ,ಸಾಗರ ಹಾಗೂ ಶಿರಾಳಕೊಪ್ಪದ ಭಂಡಾರಿ ಕುಟುಂಬಸ್ಥರು ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರತ್ನಾಕರ್.ಬಿ.ಭಂಡಾರಿಯವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭಾಶಯಗಳನ್ನು ಕೋರುತ್ತದೆ.
— ಭಂಡಾರಿವಾರ್ತೆ