
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಶ್ರೀ ವಿಪಿನ್ ಪ್ರಕಾಶ್ ಭಂಡಾರಿಯವರು ತಮ್ಮ 34 ನೇ ವರ್ಷದ ಹುಟ್ಟು ಹಬ್ಬವನ್ನು ಮಾರ್ಚ್ 30 ರ ಶುಕ್ರವಾರ ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಅವರಿಗೆ ತಂದೆ ಶ್ರೀ ಪ್ರಕಾಶ್ ಭಂಡಾರಿ ಕಟ್ಲ, ತಾಯಿ ಶ್ರೀಮತಿ ವಿದ್ಯಾ ಪ್ರಕಾಶ್ ಭಂಡಾರಿ, ಪತ್ನಿ ಶ್ರೀಮತಿ ಅರುಣಾ ವಿಪಿನ್ ಭಂಡಾರಿ, ಮುದ್ದಿನ ಮಗಳು “ಬೇಬಿ ಭಾವಿನಿ” , ತಮ್ಮ ಶ್ರೀ ವಿಖ್ಯಾತ್ ಪ್ರಕಾಶ್ ಭಂಡಾರಿ, ಭಂಡಾರಿವಾರ್ತೆ ತಂಡದವರು, ಸ್ನೇಹಿತರು ಮತ್ತು ಅಪಾರ ಬಂಧು ಬಳಗದವರು ಶುಭ ಹಾರೈಸಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶ್ರೀ ವಿಪಿನ್ ಪ್ರಕಾಶ್ ಭಂಡಾರಿಯವರಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ಕರುಣಿಸಿ, ಸುಖ ಶಾಂತಿ ನೆಮ್ಮದಿಯುತ ಜೀವನ ನೀಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಹಾರೈಸುತ್ತಾ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ