January 18, 2025
1

ಲಿವರ್ ಮತ್ತು ಕರುಳು ಶುದ್ಧಿಗಾಗಿ ಈ ಟೀ ತುಂಬಾ ಫೇಮಸ್ ಅಂತೆ!

ಆರೋಗ್ಯಕರವಾದ ಆಹಾರ ಸೇವನೆಗೆ ನಾವು ಒತ್ತು ಕೊಟ್ಟಂತೆ ಆಂತರಿಕವಾಗಿ ನಮ್ಮ ದೇಹದ ಅಂಗಾಂಗಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಹಾಗಾದರೆ ಲಿವರ್ ಮತ್ತು ಕರುಳು ಚೆನ್ನಾಗಿರಲು ಏನು ತಿನ್ನಬೇಕು?

ನಮ್ಮ ದೇಹದ ಒಳಗಿರುವ ಪ್ರತಿಯೊಂದು ಅಂಗಾಂಗಗಳ ಬಗ್ಗೆ ನಾವು ಕಾಳಜಿ ಹೊಂದಬೇಕು. ಏಕೆಂದರೆ ಅವುಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ ಮತ್ತು ನಿರಂತರವಾಗಿ ಕಾರ್ಯ ಚಟು ವಟಿಕೆ ನಡೆಸುತ್ತಿರುತ್ತವೆ. ಹಾಗಾಗಿ ಯಾವುದೇ ಸಂದರ್ಭದಲ್ಲಿ ಅವುಗಳಿಗೆ ನಮ್ಮ ಆಹಾರ ಪದ್ಧತಿಯಿಂದ ಅಥವಾ ನಮ್ಮಿಂದಲೇ ತೊಂದರೆ ಎದುರಾಗಬಹುದು.

ಮುಖ್ಯವಾಗಿ ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳು ದೇಹದಿಂದ ಹೊರಹೋಗದೆ ದೇಹದಲ್ಲಿ ಹಾಗೆ ಶೇಖರಣೆ ಆದರೆ ನಮ್ಮ ದೇಹದ ಪ್ರಮುಖ ಅಂಗಾಂಗಗಳಾದ ಲಿವರ್ ಮತ್ತು ಕರುಳು ತೊಂದರೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.

ಆರೋಗ್ಯಕಾರಿ ಆಹಾರ ಪದ್ಧತಿ ಅತ್ಯಗತ್ಯ

ಸಾಧ್ಯವಾದಷ್ಟು ಒಳ್ಳೆಯ ಆಹಾರ ಸೇವನೆ ಮತ್ತು ದೇಹಕ್ಕೆ ವ್ಯಾಯಾಮ ನೀಡುವುದರ ಕಡೆಗೆ ಗಮನ ಕೊಡಬೇಕು. ಈಗ ಲಿವರ್ ಬಗ್ಗೆ ಮಾತನಾಡುವುದಾದರೆ ಇದು ನಮ್ಮ ದೇಹದಲ್ಲಿ ಅನೇಕ ಕೆಲಸಗಳನ್ನು ನಮಗೆ ಗೊತ್ತಿಲ್ಲದೆ ಮಾಡುತ್ತದೆ.

ಉದಾಹರಣೆಗೆ ನಾವು ತಿಂದ ಆಹಾರ ಜೀರ್ಣವಾಗಲು ಅಗತ್ಯವಾಗಿ ಬೇಕಾದ ಜೀರ್ಣ ವ್ಯವಸ್ಥೆಯ ನಿರ್ವಹಣೆ, ಬೈಲ್ ಜ್ಯೂಸ್ ಉತ್ಪತ್ತಿ, ಪ್ರೋಟೀನ್ ಸಂಸ್ಕರಣೆ, ಮೆಟಬಾಲಿಸಂ, ದೇಹದಿಂದ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದು ಇವೆಲ್ಲವನ್ನೂ ಲಿವರ್ ಮಾಡುತ್ತದೆ.

​ಆಯುರ್ವೇದ ಶಾಸ್ತ್ರದ ಪ್ರಕಾರ

ಆಯುರ್ವೇದ ಶಾಸ್ತ್ರದ ಪ್ರಕಾರ ಲಿವರ್ ಉಷ್ಣ ಪ್ರಭಾವದ ಮೇಲೆ ಕೆಲಸ ಮಾಡುವ ಅಂಗವಾಗಿದ್ದು, ಅದನ್ನು ದೀರ್ಘಕಾಲ ಚೆನ್ನಾಗಿ ನೋಡಿಕೊಳ್ಳಲು ತಂಪಾದ ಪ್ರಭಾವ ಹೊಂದಿರುವ ಆಹಾರಗಳ ಸೇವನೆ ಮಾಡಬೇಕು ಎಂದು ಆಯುರ್ವೇದ ತಜ್ಞರಾದ ಡಾ. ಪ್ರ ಚೌ ಹೇಳುತ್ತಾರೆ.

ಅವರ ಪ್ರಕಾರ ಕಹಿ ಇರುವ ಆಹಾರ ಪದಾರ್ಥಗಳು ಮತ್ತು ದೇಹಕ್ಕೆ ತಂಪು ಪ್ರಭಾವ ಬೀರುವ ಗಿಡಮೂಲಿಕೆಗಳು ಲಿವರ್ ಗೆ ಒಳ್ಳೆಯದು.

​ಉದಾಹರಣೆಗೆ ಹೇಳುವುದಾದರೆ….

ಉದಾಹರಣೆಗೆ ಅಲೋವೆರಾ, ಬೇವು, ಹಾಗಲಕಾಯಿ, ಅರಿಶಿನ, ಬೆಟ್ಟದ ನೆಲ್ಲಿಕಾಯಿ ಇವು ಗಳನ್ನು ಆಗಾಗ ತಿನ್ನುತ್ತಿದ್ದರೆ ಲಿವರ್ ಆರೋಗ್ಯಕರವಾಗಿ ಕೂಡಿರುತ್ತದೆ. ಇದರ ಜೊತೆಗೆ ಹಸಿರು ಎಲೆ ತರಕಾರಿಗಳು, ಬೀಟ್ರೂಟ್, ಕ್ಯಾರೆಟ್, ಸೇಬು ಹಣ್ಣು ಇವುಗಳು ಕೂಡ ಲಿವರ್ ಆರೋಗ್ಯವನ್ನು ಕಾಪಾಡುತ್ತವೆ.

ಚಹಾ ತಯಾರು ಮಾಡಿ ಕುಡಿಯಬಹುದು

ಆದರೆ ಕೆಲವರಿಗೆ ಇವುಗಳೆಲ್ಲವನ್ನು ತಂದು ಆಹಾರ ಪದಾರ್ಥಗಳನ್ನು ತಯಾರಿಸಿ ತಿನ್ನಲು ಸಮಯವಿರುವುದಿಲ್ಲ.

ಅಂತಹವರು ಸುಲಭವಾಗಿ ನಮ್ಮ ದೇಹಕ್ಕೆ ಆರೋಗ್ಯವನ್ನು ಒದಗಿಸುವ ಮತ್ತು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡಿ ಲಿವರ್ ಮತ್ತು ಕರುಳಿನ ಭಾಗವನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಇರಿಸುವ ಚಹಾ ತಯಾರು ಮಾಡಿ ಕುಡಿಯಬಹುದು.

ಲಿವರ್ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡುವ ಆರೋಗ್ಯಕರ ಆಹಾರಗಳು

ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ

ಒಂದು ಚಿಟಿಕೆ ಅರಿಶಿನ ತೆಗೆದುಕೊಂಡು ಅದನ್ನು ಒಂದು ಕಪ್ ನೀರಿನಲ್ಲಿ ಹಾಕಿ ಕೆಲವು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು.

ನೀರು ಸ್ವಲ್ಪ ತಣ್ಣಗಾಗುತ್ತಿದ್ದಂತೆ ಅಥವಾ ಉಗುರು ಬೆಚ್ಚಗಿನ ತಾಪಮಾನಕ್ಕೆ ಬಂದಾಗ ಅದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸ ಸೇರಿಸಿ ಕುಡಿಯಬೇಕು.

ಇದಕ್ಕೆ ಒಂದು ಟೀ ಚಮಚ ಜೇನುತುಪ್ಪ ಬೇಕಾದರೂ ಸೇರಿಸಬಹುದು. ಆದರೆ ಯಾವುದೇ ಕಾರಣಕ್ಕೂ ಸಕ್ಕರೆ ಹಾಕಬೇಡಿ. ಇಲ್ಲಿ ನೀವು ಬಳಸುವ ಅರಿಶಿನ ವಾಸಿ ಮಾಡುವ ಗುಣಲಕ್ಷಣಗಳನ್ನು ಹೊಂದಿದ್ದು ಲಿವರ್ ಭಾಗವನ್ನು ಸ್ವಚ್ಛಪಡಿಸುತ್ತದೆ.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *