January 18, 2025
BV 2

ಬಿಸಿ ಗಾಳಿಯ ಪ್ರಭಾವದಿಂದ ದೇಹದಲ್ಲಿ ನಿರ್ಜಲೀಕರಣವುಂಟಾಗಿ ಹೀಟ್‌ ಸ್ಟ್ರೋಕ್‌ ಅಟ್ಯಾಕ್‌ ಆಗುತ್ತದೆ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು, ಯಾರು ಹೆಚ್ಚು ಜಾಗೃತರಾಗಿರಬೇಕು.

ಬದಲಾಗುತ್ತಿರುವ ಹವಾಮಾನ, ಅಧಿಕ ಬಿಸಿ ಗಾಳಿಯ ಕಾರಣದಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹವಾಮಾನದಲ್ಲಿನ ಉಷ್ಣ ಗಾಳಿಯು ಮಾರಣಾಂತಿಕ ಸಮಸ್ಯೆಗೆ ಎಡೆ ಮಾಡಿಕೊಡುತ್ತವೆ.
ಹೀಗಾಗಿ ಅಂತಹ ಸಂದರ್ಭದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.

ದೀರ್ಘಕಾಲದವರೆಗೆ ದೇಹದ ಉಷ್ಣತೆಯ ಹೆಚ್ಚಳವು ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು, ಅದನ್ನು ಹೈಪರ್ಥರ್ಮಿಯಾ ಅಥವಾ ಹೀಟ್‌ ಸ್ಟ್ರೋಕ್‌ ಎನ್ನಲಾಗುತ್ತದೆ. ಹೆಚ್ಚು ಬಿಸಿ ವಾತಾವರಣ ಇದ್ದರೆ ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆಗ ನೀರಿನ ಸೇವನೆ ಮತ್ತು ವಿಶ್ರಾಂತಿ ಅಗತ್ಯವಾಗಿರುತ್ತದೆ.

ಹೀಟ್‌ ಸ್ಟ್ರೋಕ್‌ನ ಲಕ್ಷಣ, ಮುನ್ನೆಚ್ಚರಿಕಾ ಕ್ರಮ.

ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಉಂಟಾಗುವ ಬದಲಾವಣೆಗಳು

  • ಹೈಪರ್ಥರ್ಮಿಯಾ ದಿಂದ ಹೊಟ್ಟೆ, ತೋಳುಗಳು ಅಥವಾ ಕಾಲುಗಳಲ್ಲಿನ ಸ್ನಾಯುಗಳನ್ನು ನೋವಿನಿಂದ ಬಿಗಿಯಾದ ಅನುಭವವಾಗುತ್ತದೆ.
  • ಶಾಖದ ಸೆಳೆತದ ಸಮಯದಲ್ಲಿ ದೇಹದ ಉಷ್ಣತೆ ಮತ್ತು ನಾಡಿ ಸಾಮಾನ್ಯವಾಗಿದ್ದರೂ, ನಿಮ್ಮ ಚರ್ಮವು ತೇವಯುಕ್ತವಾಗಿ ಮತ್ತು ತಂಪಾಗಿರುತ್ತದೆ.
  • ಹೀಗಾಗಿ ದೇಹವನ್ನು ತಂಪಾಗಿಸಲು ನೆರಳಿನಲ್ಲಿ ಅಥವಾ ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯಿರಿ. ಸಾಕಷ್ಟು ದ್ರವ ಪದಾರ್ಥಗಳನ್ನು ಕುಡಿಯಿರಿ, ಆದರೆ ಆಲ್ಕೋಹಾಲ್ ಅಥವಾ ಕೆಫೀನ್‌ಯುಕ್ತ ಆಹಾರಗಳು ಬೇಡ.
  • ಹೈಪರ್ಥರ್ಮಿಯಾದಿಂದ ಹೆಚ್ಚು ಬೆವರುವುದು, ಬಾಯಾರಿಕೆ, ತಲೆತಿರುಗುವಿಕೆ, ದುರ್ಬಲ ಎನಿಸುವ ದೇಹ, ವಾಕರಿಕೆಯನ್ನು ಅನುಭವಿಸಬಹುದು.

ಹೀಟ್ ಸ್ಟ್ರೋಕ್‌ನ ಲಕ್ಷಣಗಳು

  • ಹೀಟ್‌ಸ್ಟ್ರೋಕ್‌ಗೆ ಒಳಗಾದವರಲ್ಲಿ ಮೊದಲು ಕಾಣಿಸಿಕೊಳ್ಳುವ ಲಕ್ಷಣವೆಂದರೆ ಮೂರ್ಛೆ ಹೋಗುವುದು ಅಥವಾ ಪ್ರಜ್ಞಾಹೀನರಾಗುವುದು,
  • ನಡವಳಿಕೆಯಲ್ಲಿ ಬದಲಾವಣೆ-ಗೊಂದಲ, ದಿಗ್ಭ್ರಮೆಗೊಳಿಸುವಿಕೆ, ಜಿಗುಪ್ಸೆ, ಅಥವಾ ವಿಚಿತ್ರವಾಗಿ ವರ್ತಿಸುವುದನ್ನು ಕಾಣಬಹುದು.
  • ದೇಹದ ಉಷ್ಣತೆಯು 104 ° F (40 ° C) ಗಿಂತ ಹೆಚ್ಚಾಗುವುದು, ಶುಷ್ಕ, ಕೆಂಪಾಗುವ ಚರ್ಮ, ನಾಡಿ ಬಡಿತದಲ್ಲಿ ವ್ಯತ್ಯಾಸವನ್ನು ಕಾಣಬಹುದು. ದೇಹ ಬಿಸಿಯಾಗಿದ್ದರೂ ಬೆವರದೇ ಇರುವುದನ್ನು ಗಮನಿಸಬಹುದಾಗಿದೆ.

ಹೀಟ್‌ ಸ್ಟ್ರೋಕ್‌ ಯಾರಿಗೆ ಹೆಚ್ಚು ಅಪಾಯ?

  • 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೈಪರ್ಥರ್ಮಿಯಾದಿಂದ ಅಪಾಯ ಹೆಚ್ಚು. ಜೀವಕ್ಕೆ ಕುತ್ತು ತರಬಹುದು.
  • ಹೃದಯ ಅಥವಾ ರಕ್ತನಾಳದ ಸಮಸ್ಯೆಗಳು, ಗ್ರಂಥಿಗಳು ಸರಿಯಾಗಿ ಕೆಲಸ ಮಾಡದಿರುವುದು ಅಥವಾ ಹೃದಯ, ಶ್ವಾಸಕೋಶ, ಅಥವಾ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಪಾಯ.
  • ಮೂತ್ರವರ್ಧಕಗಳು, ನಿದ್ರಾಜನಕಗಳು, ಟ್ರ್ಯಾಂಕ್ವಿಲೈಜರ್‌ಗಳು ಮತ್ತು ಕೆಲವು ಹೃದಯ ಮತ್ತು ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಔಷಧ, ಚಿಕಿತ್ಸೆ ಪಡೆದಿದ್ದರೆ ಹೀಟ್‌ ಸ್ಟ್ರೋಕ್‌ ಅಪಾಯ ತರಬಹುದು.
  • ಒಮ್ಮೆ ಹೀಟ್‌ ಸ್ಟ್ರೋಕ್‌ ಅಪಾಯ ಎದುರಿಸಿದರೆ ದೇಹದಲ್ಲಿ ಆಂತರಿಕವಾಗಿ ಅನೇಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಹೀಟ್‌ ಸ್ಟ್ರೋಕ್‌ ಕುರಿತು ಅಗತ್ಯವಾಗಿ ನೆನಪಿಡಬೇಕಾದ ಅಂಶಗಳು

  • ವಯಸ್ಸಾದ ಜನರು, ಶಾಖ ಮತ್ತು ತೇವಾಂಶವನ್ನು ತಡೆಯಲು ಸಾಧ್ಯವಿಲ್ಲದವರು ಆದಷ್ಟು 38 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಿಂದ ದೂರವಿರುವುದು ಒಳಿತು.
  • ತಲೆನೋವು, ಗೊಂದಲ, ತಲೆತಿರುಗುವಿಕೆ ಅಥವಾ ವಾಕರಿಕೆ ಕಾಣಿಸಿಕೊಂಡರೆ ಅಗತ್ಯವಾಗಿ ವೈದ್ಯರನ್ನು ಸಂಪರ್ಕಿಸಬೇಕು.
  • ನೀರು, ಹಣ್ಣು ಅಥವಾ ತರಕಾರಿ ಜ್ಯೂಸ್‌ಗಳಂತಹ ದ್ರವ ಪದಾರ್ಥ ಹೆಚ್ಚು ಸೇವಿಸಿ. ಆಲ್ಕೋಹಾಲ್‌ ಮತ್ತು ಕೆಫಿನ್‌ ಅಂಶಗಳಿಂದ ದೂರವಿರಿ.
  • ಸ್ನಾನ ಮಾಡಿ ಅಥವಾ ತಂಪಾದ ನೀರಿನಿಂದ ಸ್ಪಾಂಜ್ ಮಾಡಿ, ತಂಪಾದ ಸ್ಥಳದಲ್ಲಿ ಮಲಗಿಕೊಳ್ಳಿ ಮತ್ತು ವಿಶ್ರಾಂತಿ ಪಡೆಯಿರಿ,
  • ಹೀಟ್‌ ಸ್ಟ್ರೋಕ್‌ ಒಳಗಾದಾಗ ದೇಹ ತಣ್ಣಗಾಗದಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಅಥವಾ ತುರ್ತು ಚಿಕಿತ್ಸೆ ಪಡೆದುಕೊಳ್ಳಿ.
ಸಂಗ್ರಹ : ಶ್ರೀಪಾಲ್ ಭಂಡಾರಿ ನೆಲ್ಯಾಡಿ 
ಮೂಲ: ವಿ ಕೆ

1 thought on “ಹೀಟ್‌ ಸ್ಟ್ರೋಕ್‌ನ ಅಪಾಯ ಯಾರಿಗೆ ಹೆಚ್ಚು, ಪಾರಾಗಲು ಏನು ಮಾಡಬೇಕು?

Leave a Reply

Your email address will not be published. Required fields are marked *