January 18, 2025

ಕಾರ್ಕಳ: ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ (65) ಅವರು 4. 7. 2019 ಗುರುವಾರ ನಿಧನ ಹೊಂದಿದ್ದಾರೆ.

ಬೆಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬರುತ್ತಿದ್ದಾಗ ಹೃದಯಾಘಾತವಾಗಿದ್ದು, ಬಸ್ ಮಂಗಳೂರಿನ ನಿಲ್ದಾಣಕ್ಕೆ ತಲುಪಿದಾಗ ನಿಧನರಾಗಿದ್ದರು. ನಿದ್ದೆ ಮಾಡಿದ್ದಾರೆಂದು ಬಸ್ ಕಂಡಕ್ಟರ್ ಕರೆಯುವ ವೇಳೆ ಅವರು ಮೃತಪಟ್ಟಿದ್ದರು.

ಕಾರ್ಕಳ ತಾಲೂಕಿನ ಹೆಬ್ರಿಯ ಚಾರಾ ಗ್ರಾಮ ಹುತ್ತುರ್ಕೆ ಮನೆಯ ನಂದ್ಯಪ್ಪ ಭಂಡಾರಿಯವರ ಪುತ್ರನಾಗಿ ಜನನ. ವೃತ್ತಿಯಲ್ಲಿ ಕೃಷಿಕನಾಗಿದ್ದು ಕೃಷಿಕ ಹಿನ್ನಲೆಯುಳ್ಳ ಗೇಣಿದಾರ ಕುಟುಂಬಕ್ಕೆ ಸೇರಿದವರಾಗಿದ್ದು ರಾಜಕೀಯ ಹಿನ್ನಲೆಯಿಲ್ಲದೆ ರಾಜಕಾರಣಿಯಾದರು. 

ಒಕ್ಕಲು ಗೇಣಿದಾರರ ಹೋರಾಟಕ್ಕೆ ಹೊಸ ಭಾಷ್ಯ ಬರೆದ ನಾಯಕ. 22000 ಗೇಣಿದಾರ ಕುಟುಂಬಗಳಿಗೆ ಭೂಮಿ ಒದಗಿಸುವಲ್ಲಿ ಶ್ರಮಿಸಿದ ನೇತಾರ. 1999 ರಲ್ಲಿ ಮೊದಲ ಬಾರಿಗೆ ಕಾರ್ಕಳ ವಿಧಾನಸಭೆ ಚುನಾವಣೆಯಲ್ಲಿ ಕೆ ಪಿ ಶೆಣೈಯವರನ್ನು ಬಹು ಅಂತರದಿಂದ ಸೋಲಿಸಿ ಶಾಸಕರಾದರು. 2008 ರಲ್ಲಿ ಎರಡನೇ ಬಾರಿ ಮತ್ತೊಮ್ಮೆ ಕಾರ್ಕಳ ವಿಧಾನಸಭೆಗೆ ಸ್ಪರ್ಧಿಸಿ ಶಾಸಕರಾದರು.

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಇವರು ಜನರ ಕಷ್ಟ ಕಾರ್ಪಣ್ಯಗಳಿಗೆ ತ್ವರಿತವಾಗಿ ಸ್ಪಂದಿಸುವ ಗುಣದ ಕಾರಣಕ್ಕಾಗಿ ಕಾರ್ಕಳದಾದ್ಯಂತ ತನ್ನ ವರ್ಚಸ್ಸು ಹೊಂದಿದ್ದರು. ಹಿಂದುಳಿದ ವರ್ಗಗಳ ನಾಯಕರಾಗಿದ್ದರು.

ಭಂಡಾರಿ ವಾತೆ೯

Leave a Reply

Your email address will not be published. Required fields are marked *