ಬರಡು -ನೀರಸ ತುಂಬಿದ
ನನ್ನ ಬದುಕಿಗೊಂದು
ಅರ್ಥ ನೀಡಿದವ ನೀ…
ನನ್ನೆಲ್ಲಾ ಮೌನದ
ಪ್ರಶ್ನೆಗಳಿಗೆ ಉತ್ತರವ
ಕಂಡುಕೊಂಡವ ನೀ…
ಹೇಳು ನಾ ಹೇಗೆ ಮರೆಯಲಿ ನಿನ್ನ…
ಹೃದಯ ಘಾಸಿಗೊಂಡು
ಮೂಕವಾದಾಗ
ಪ್ರೀತಿಯ ನುಡಿಗಳಲ್ಲಿ
ಸ್ವಾಂತನ ಧೈರ್ಯವ
ತುಂಬಿದವ ನೀ….
ಏಕಾಂತ ಬದುಕಿನ
ಸಂಜೆಯಲ್ಲಿ ಮಂಕು
ಕವಿದ ಈ ಜೀವಕೆ
ಹೊಸ ಉತ್ಸಾಹ ಚೈತನ್ಯ ವ
ಹುರಿದುಂಬಿಸಿದವ ನೀ….
ಹೇಳು ನಾ ಹೇಗೆ ಮರೆಯಲಿ ನಿನ್ನ…
ಗೊಂದಲದ ಗೂಡಾಗಿದ್ದ
ನನ್ನ ತಲೆಯೊಳಗೆ ಭವಿಷ್ಯತ್ತಿನ
ಬೀಜ ಬಿತ್ತಿ ಮುಂದಿನ
ಕನಸುಗಳಿಗೆ ಜೀವ
ನೀಡಿದವ ನೀ….
ನೋವು ಸಂಕಟಗಳೇ
ನನ್ನ ಜೀವನದಲ್ಲಿ ತುಂಬಿದಾಗ
ನೋವಿನಲ್ಲೂ ನಗುವುದನ್ನ
ಕಲಿಸಿದವ ನೀ…
ಹೇಳು ನಾ ಹೇಗೆ ಮರೆಯಲಿ ನಿನ್ನ…
✍ಸುಪ್ರೀತ ಭಂಡಾರಿ, ಸೂರಿಂಜೆ