
ಮೂಡಿಗೆರೆಯ ಭಂಡಾರಿ ಸಮಾಜ ಸಂಘದ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಹೇಮಲತಾ ಉಮೇಶ್ ಭಂಡಾರಿಯವರು ಆಯ್ಕೆಯಾಗಿದ್ದಾರೆ.

ಭಂಡಾರಿ ಸಮಾಜ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಶ್ರೀಮತಿ ಹೇಮಲತಾ ಉಮೇಶ್ ಭಂಡಾರಿಯವರು ಈ ಮೊದಲು ಹೊಟೇಲ್ ಉದ್ಯಮಿಯಾಗಿದ್ದರೂ, ಪ್ರಸ್ತುತ ಮೂಡಿಗೆರೆಯಲ್ಲಿ ಖಾಸಗಿಯಾಗಿ ಪೇಯಿಂಗ್ ಗೆಸ್ಟ್ ವಿದ್ಯಾರ್ಥಿ ನಿಲಯವನ್ನು ನಿರ್ವಹಿಸುತ್ತಿದ್ದಾರೆ.
ಭಂಡಾರಿ ಸಮಾಜ ಸಂಘ ಮೂಡಿಗೆರೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಶ್ರೀಮತಿ ಹೇಮಲತಾ ಉಮೇಶ್ ಭಂಡಾರಿಯವರಿಗೆ ಅವರ ಪತಿ ಉಮೇಶ್ ಭಂಡಾರಿ,ಮಕ್ಕಳಾದ ಭರತ್,ಭಾವನಾ ಮತ್ತು ಮೂಡಿಗೆರೆ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಷಣ್ಮುಖಾನಂದ ಭಂಡಾರಿ, ಕಾರ್ಯದರ್ಶಿಗಳಾದ ಸತೀಶ್ ಭಂಡಾರಿ ಫಲ್ಗುಣಿ, ಶಕುಂತಲಾ ಭಂಡಾರಿ, ವನಿತಾ ಭಂಡಾರಿ, ಸತೀಶ್ ಭಂಡಾರಿ, ರಮೇಶ್ ಭಂಡಾರಿ ( LIC) ಚಿಕ್ಕಮಗಳೂರು, ರಜನಿ ಭಂಡಾರಿ, ಸನತ್ ಭಂಡಾರಿ, ಸಿಂಚನ ಭಂಡಾರಿ, ಸುಜಾತಾ ವಾಸು ಭಂಡಾರಿ ನಿಡುವಾಳೆ,ಚಿಂತನ್ ಭಂಡಾರಿ,ಪ್ರಣಮ್ ಭಂಡಾರಿ ಹಾಗೂ ಅಪಾರ ಬಂಧು ಬಾಂಧವರು ಶುಭ ಹಾರೈಸುತ್ತಿದ್ದಾರೆ.
ನಿಮ್ಮ ಆಡಳಿತಾವಧಿಯಲ್ಲಿ ಭಂಡಾರಿ ಸಮಾಜ ಸಂಘ ಮೂಡಿಗೆರೆ ಮಹಿಳಾ ಘಟಕವು ಸಮಾಜದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಶ್ರೀಮತಿ ಹೇಮಲತಾ ಉಮೇಶ್ ಭಂಡಾರಿಯವರಿಗೆ “ಭಂಡಾರಿ ವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.
“ಭಂಡಾರಿವಾರ್ತೆ.”
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.