
ಜನವರಿ 24 ರ ಬುಧವಾರ ನವೀ ಮುಂಬಯಿಯ ನೆರುಲ್ ನಲ್ಲಿ ಗುಜರನ್ ಶ್ರೀ ಹೇಮಂತ್ ಕುಮಾರ್ ಭಂಡಾರಿ ಮತ್ತು ಶ್ರೀಮತಿ ವಸುಂದರಾ ಹೇಮಂತ್ ಕುಮಾರ್ ಭಂಡಾರಿ ದಂಪತಿಗಳು ತಮ್ಮ ವೈವಾಹಿಕ ಜೀವನದ ಬೆಳ್ಳಿಹಬ್ಬದ ಸಂಭ್ರಮವನ್ನು ಆಚರಿಸಿಕೊಂಡರು.
ಈ ಶುಭ ಸಂದರ್ಭದಲ್ಲಿ ಅವರ ತಂದೆ ಶ್ರೀ ಮಧು ಗುಜರನ್,ತಾಯಿ ಶ್ರೀಮತಿ ಲಲಿತಾ ಮಧು ಗುಜರನ್,ಮಗ ಶ್ರೀ ಧನುಷ್ ರಾಜ್,ಮಗಳು ಕು.ಯಾಮಿನಿ ಹಾಗೂ ಅಪಾರ ಬಂಧು ಮಿತ್ರರು ಶುಭ ಕೋರಿದರು.
ವೈವಾಹಿಕ ಜೀವನದ ಬೆಳ್ಳಿಹಬ್ಬದ ಸಂಭ್ರಮವನ್ನಾಚರಿಸಿಕೊಂಡ ದಂಪತಿಗಳಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಶಾಂತಿ ನೆಮ್ಮದಿಯಿಂದ ಬಾಳುವಂತೆ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.
— ಭಂಡಾರಿವಾರ್ತೆ