January 18, 2025
8

ಕಟ್ಟಿದ ಮೂಗಿನ ಸಮಸ್ಯೆಯನ್ನು ಹೋಗಲಾಡಿಸಲು ಇಲ್ಲಿದೆ ಮನೆಮದ್ದು

ಕಟ್ಟಿದ ಮೂಗು ಅಥವಾ ಮೂಗಿನ ದಟ್ಟನೆಯನ್ನು ಹೋಗಲಾಡಿಸಲು ಇಲ್ಲಿದೆ ಸುಲಭ ಮನೆಮದ್ದು. ಇದನ್ನು ಅನುಸರಿಸಿದರೆ ಸರಾಗವಾಗಿ ಉಸಿರಾಡಲು ಸಹಾಯವಾಗುತ್ತದೆ.

ಕಟ್ಟಿದ ಮೂಗು ಎಷ್ಟು ಹಿಂಸೆ ನೀಡುತ್ತದೆ ಎನ್ನುವುದು ನಮಗೆಲ್ಲಾ ತಿಳಿದೇ ಇದೆ. ಶೀತ, ನೆಗಡಿ ಆಗದಿದ್ದರೂ ಕೆಲವೊಮ್ಮೆ ಮೂಗು ಕಟ್ಟುತ್ತದೆ. ಇದರಿಂದಾಗಿ ಸರಿಯಾಗಿ ಉಸಿರಾಡಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಕಟ್ಟಿದ ಮೂಗಿನ ಸಮಸ್ಯೆಯನ್ನು ನಿವಾರಿಸಬಹುದು.

ಸಾಕಷ್ಟು ದ್ರವಾಹಾರಗಳನ್ನು ಸೇವಿಸಿರಿ

ಮೂಗು ಕಟ್ಟಿದ ಸಂದರ್ಭಗಳಲ್ಲಿ ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸೂಪ್ ಮತ್ತು ಇತರ ಬೆಚ್ಚಗಿನ ಪಾನೀಯಗಳನ್ನು ನೀಡಬಹುದು. ಕೆಮ್ಮುಇದ್ದರೆ ಒಂದು ಟೀ ಚಮಚ ಜೇನುತುಪ್ಪವನ್ನು ನೀಡಬಹುದು.

3 ತಿಂಗಳ ಮೇಲ್ಪಟ್ಟ ಶಿಶುಗಳಿಗೆ ಸೇಬಿನ ರಸ, ನೀರು ಅಥವಾ ಹೈಡ್ರೇಟಿಂಗ್ ದ್ರಾವಣವನ್ನು ನೀಡಬಹುದು. ನೀರು ಯಾವುದೇ ಜ್ಯೂಸ್‌ ಅಥವಾ ನೀರನ್ನು ನೀಡುವುದಾದರೂ ಅದು ಸಕ್ಕರೆ ಮುಕ್ತವಾಗಿರಬೇಕು

ಬಿಸಿ ನೀರಿನ ಹಬೆ

ದಿನಕ್ಕೆ 2 ರಿಂದ 4 ಬಾರಿ ಬಿಸಿ ನೀರಿನ ಹಬೆಯನ್ನು ಉಸಿರಾಡುವುದು ಮೂಗಿನ ದಟ್ಟಣೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ತಕ್ಷಣಕ್ಕೆ ನಿಮ್ಮ ಕಟ್ಟಿರುವ ಮೂಗಿನ ಮಾರ್ಗಗಳನ್ನು ತೆರೆಯುತ್ತದೆ. ನೀವು ಹಬೆ ತಗೆದುಕೊಳ್ಳುವಾಗ ಗ್ಯಾಸ್‌ ಮೇಲೆ ಕುದಿಯುತ್ತಿರುವ ನೀರಿನಿಂದ ಬಿಸಿ ಹಬೆಯನ್ನು ಉಸಿರಾಡಬಾರದು.

ನೀರಿಗೆ ನೀಲಗಿರಿ ಎಣ್ಣೆ , ತುಳಸಿ ಎಲೆ ಅಥವಾ ಮೆಂತೆಯನ್ನು ಸೇರಿಸಬಹುದು. ಉಸಿರಾಟವನ್ನು ಸರಾಗಗೊಳಿಸುವ ಸಲುವಾಗಿ ಕೆಲವರು ವಿಕ್ಸ್‌, ಮೆಂತಾಲ್‌ನ್ನು ನೀರಿಗೆ ಸೇರಿಸಿ ಹಬೆ ತೆಗೆದುಕೊಳ್ಳುತ್ತಾರೆ.

ಅಕ್ಯುಪಂಕ್ಚರ್

ಅಲರ್ಜಿಕ್ ರಿನಿಟಿಸ್ ಅನ್ನು ಅಕ್ಯುಪಂಕ್ಚರ್ ಮೂಲಕ ಚಿಕಿತ್ಸೆ ನೀಡಬಹುದು. ಅಕ್ಯುಪಂಕ್ಚರ್‌ನ ಪ್ರಯೋಜನಕಾರಿ ಪರಿಣಾಮವನ್ನುಪಡೆಯಬೇಕಾದರೆ ಸರಿಯಾದ ವಿಧಾನದಲ್ಲಿ ಸರಿಯಾದ ಪಾಯಿಂಟ್‌ಗೆ ಚಿಕಿತ್ಸೆ ನೀಡಬೇಕು. ಅಕ್ಯುಪೆಂಕ್ಚರ್‌ ತಿಳಿದಿರುವ ವ್ಯಕ್ತಿಯಿಂದಲೇ ಈ ಚಿಕಿತ್ಸೆ ಪಡೆಯುವುದು ಮುಖ್ಯ

ತಲೆಕೆಳಗೆ ದಿಂಬು ಬಳಸಿ

ಮಕ್ಕಳಿಗೆ ಮೂಗು ಕಟ್ಟಿದ ಸಂದರ್ಭದಲ್ಲಿ, ಮಗುವಿನ ತಲೆಯನ್ನು ದಿಂಬಿನ ಮೇಲಿಡಿ ಇದು ಮೂಗಿನಲ್ಲಿನ ದಟ್ಟಣೆಯ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮೂಗು ಕಟ್ಟಿದಾಗ, ಮಲಗಿರುವಾಗ ಅಥವಾ ರಾತ್ರಿ ಮಲಗುವಾಗ ಉಸಿರಾಡಲು ಕಷ್ಟವಾಗುತ್ತದೆ.

ವಯಸ್ಕರು ಮತ್ತು ಮಕ್ಕಳನ್ನು ದಿಂಬಿನ ಮೇಲೆ ತಲೆಇಟ್ಟು ಮಲಗಿಸುವುದರಿಂದ ಕಟ್ಟಿದ ಮೂಗಿನ ಉಸಿರಾಟದ ತೊಂದರೆಯನ್ನು ನಿವಾರಿಸಬಹುದು.

​ಮೂಗಿನ ಲೋಳೆ ತೆಗೆಯುವಿಕೆ

ನಿಯಮಿತವಾಗಿ ಮೂಗಿನ ಹೊಳ್ಳೆಗಳಲ್ಲಿರುವ ಲೋಳೆಯನ್ನು ತೆಗೆಯಬೇಕು. ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ಮೂಗನ್ನು ಶುಚಿಯಾಗಿಟ್ಟುಕೊಳ್ಳಬೇಕು. ಸ್ನಾನ ಮಾಡುವ ಸಮಯದಲ್ಲಿ ಮೂಗಿನ ಹೊಳ್ಳೆಗಳಲ್ಲಿರುವ ಲೋಳೆಯನ್ನು ತೆಗೆಯಬೇಕು. ಶಿಶುಗಳಿಗೆ ಆಸ್ಪಿರೇಟರ್ ಅನ್ನು ಬಳಸಬೇಕು

ಸಲೈನ್ ಸ್ಪ್ರೇಗಳು: ಮೂಗಿನ ದಟ್ಟಣೆಯನ್ನು ನಿವಾರಿಸಲು ಮೂಗಿನ ಸಲೈನ್ ಸ್ಪ್ರೇ ಉಪಯುಕ್ತವಾಗಿದೆ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

 

Leave a Reply

Your email address will not be published. Required fields are marked *