
ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಿರಿಯ ಸಂಶೋಧನಾ ಅಧಿಕಾರಿ ಹಾಗೂ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ನವೀನ್ ಚಂದ್ರ ಭಂಡಾರಿಯವರ ತಂದೆ ಶ್ರೀ ಎನ್.ಹಿರಿಯಣ್ಣ ಭಂಡಾರಿಯವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಣಿಪಾಲದ ಹುಡ್ಕೋ ಕಾಲೋನಿಯ ಓಂಕಾರ ಪ್ರಸನ್ನ ದಲ್ಲಿ ಡಿಸೆಂಬರ್ 17 ರ ಸಂಜೆ ನಿಧನ ಹೊಂದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಸುಲೋಚನ ಭಂಡಾರಿ ಹಾಗೂ ಇಬ್ಬರು ಗಂಡು ಮಕ್ಕಳಾದ ಶ್ರೀ ನವೀನ್ ಚಂದ್ರ ಭಂಡಾರಿ ಮತ್ತು ಶ್ರೀ ಪ್ರವೀಣ್ ಚಂದ್ರ ಭಂಡಾರಿ ಮತ್ತು ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.
ಪ್ರಸ್ತುತ ದುಬೈಯಲ್ಲಿ ನೆಲೆಸಿರುವ ಅವರ ದ್ವಿತೀಯ ಪುತ್ರ ಶ್ರೀ ಪ್ರವೀಣ್ ಚಂದ್ರ ಭಂಡಾರಿಯವರು ಆಗಮಿಸಿದ ನಂತರ ಡಿಸೆಂಬರ್ 18 ರ ಬೆಳಗ್ಗೆ 10:30ಕ್ಕೆ ಉಡುಪಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ದುಃಖತಪ್ತರಾದ ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ದಯಪಾಲಿಸಲಿ ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಭಗವಂತನಲ್ಲಿ ಪ್ರಾರ್ಥಿಸುತ್ತದೆ.
—ಭಂಡಾರಿವಾರ್ತೆ
Hari Om