
ಉಡುಪಿ ಜಿಲ್ಲೆ ಹಿರಿಯಡ್ಕದ ಬೊಮ್ಮರಬೆಟ್ಟು ಶ್ರೀ ಸುರೇಶ್ ಭಂಡಾರಿಯವರು ಡಿಸೆಂಬರ್ 30,2018 ರ ಭಾನುವಾರ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಅವರಿಗೆ ಸುಮಾರು ಅರುವತ್ತೆಂಟು ವರ್ಷ ವಯಸ್ಸಾಗಿತ್ತು.

ಸುರೇಶ್ ಭಂಡಾರಿಯವರು ಪತ್ನಿ ಸರೋಜಿನಿ ಭಂಡಾರಿ ಮತ್ತು ಮಕ್ಕಳಾದ ರೇಖಾ ಜಗದೀಶ್ ಭಂಡಾರಿ ಉಡುಪಿ, ಶ್ರೀ ರಂಜನ್ ಭಂಡಾರಿ ಹಿರಿಯಡ್ಕ,ದಕ್ಷಿಣ ಆಫ್ರಿಕಾದ ಕೀನ್ಯಾದಲ್ಲಿರುವ ಶ್ರೀಮತಿ ರಮಿತಾ ಪ್ರವೀಣ್ ಭಂಡಾರಿ, ಶ್ರೀಮತಿ ರಕ್ಷಿತಾ ಚೇತನ್ ಭಂಡಾರಿ ಬೆಂಗಳೂರು,ಸೊಸೆ ಶ್ರೀಮತಿ ಸೌಮ್ಯ ರಂಜನ್ ಭಂಡಾರಿ, ಮೊಮ್ಮಕ್ಕಳು ಮತ್ತು ಅಪಾರ ಸಂಖ್ಯೆಯ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ಕೋರಲು “ಉತ್ತರಕ್ರಿಯೆ” ಕಾರ್ಯಕ್ರಮವನ್ನು ಜನವರಿ 11,2019 ರ ಶುಕ್ರವಾರ “ಶ್ರೀ ಲಕ್ಷ್ಮೀ ಕೃಪಾ ಕಲ್ಯಾಣ ಮಂಟಪ” ಓಂತಿಬೆಟ್ಟು, ಹಿರಿಯಡ್ಕದಲ್ಲಿ ಮಧ್ಯಾಹ್ನ 12 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ಸಮಾಜದ ಬಂಧುಗಳು, ಕುಟುಂಬಸ್ಥರು ಆಗಮಿಸಿ ಮೃತರ ಆತ್ಮಕ್ಕೆ ಸಧ್ಗತಿ ಕೋರಬೇಕೆಂದು ಕುಟುಂಬಸ್ಥರು ವಿನಂತಿಸಿಕೊಂಡಿದ್ದಾರೆ.

ಸುರೇಶ್ ಭಂಡಾರಿಯವರ ಅಗಲಿಕೆಯಿಂದ ದುಃಖತಪ್ತರಾದ ಕುಟುಂಬಕ್ಕೆ ಆ ನೋವನ್ನು ಭರಿಸುವ ಶಕ್ತಿಯನ್ನು ಶ್ರೀದೇವರು ದಯಪಾಲಿಸಲಿ,ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
— ಭಂಡಾರಿವಾರ್ತೆ