January 19, 2025
Ajith Ambalapady 1
ಶ್ರೀ ಅಜಿತ್ ಕುಮಾರ್ ಮತ್ತು ಶ್ರೀಮತಿ ಕೃಪಾ ಅಜಿತ್ ಕುಮಾರ್ ದಂಪತಿಯು ಬೆಂಗಳೂರಿನ ಚಿಕ್ಕನಾಗಮಂಗಲದಲ್ಲಿರುವ ಟಿ.ಜಿ ಡೆವೆಲಪರ್ಸ್ ನ ಎಪಿಟೋಮ್ ಅಪಾರ್ಟ್ಮೆಂಟ್ಸ್ ನ ಮೂರನೇ ಮಹಡಿಯ “ಬಿ” ಬ್ಲಾಕ್ ನಲ್ಲಿ B304 ನ ಮನೆಯನ್ನು ತಮ್ಮದಾಗಿಸಿಕೊಂಡಿದ್ದು ಅದರ ಗೃಹಪ್ರವೇಶ ಕಾರ್ಯಕ್ರಮವನ್ನು ಜೂನ್ 20 ರ ಬುಧವಾರ ಬೆಳಿಗ್ಗೆ 9 ರಿಂದ 11 ರ ನಡುವಿನ ಶುಭ ಮುಹೂರ್ತದಲ್ಲಿ “ಶ್ರೀ ಸತ್ಯನಾರಾಯಣ ಪೂಜೆ” ಯೊಂದಿಗೆ ನೆರವೇರಿಸಿದ್ದಾರೆ .
ನೂತನ ಫ್ಲ್ಯಾಟ್ ನ ಗೃಹಪ್ರವೇಶದ ಸಂಭ್ರಮದಲ್ಲಿರುವ ದಂಪತಿಗೆ ತಂದೆ ಶ್ರೀ ನಾರಾಯಣ ಭಂಡಾರಿ,ತಾಯಿ ಶ್ರೀಮತಿ ಕಮಲಾ ನಾರಾಯಣ ಭಂಡಾರಿ,ಸಹೋದರಿ ಶ್ರೀಮತಿ ಸೌಮ್ಯ ಅಜಿತ್ ಅಮ್ಮೆಂಬಳ,ಭಾವ ಶ್ರೀ ಅಜಿತ್ ಅಮ್ಮೆಂಬಳ,ಪುಟಾಣಿ ಪರಿಧಿ,ಸಹೋದರಿ ಶ್ರೀಮತಿ ಸ್ವಾತಿ ಅವಿನಾಶ್ ಭಂಡಾರಿ,ಭಾವ ಶ್ರೀ ಅವಿನಾಶ್ ಭಂಡಾರಿ ಮರ್ಲಾಡಿ ,ಮಂಗಳೂರು ಮತ್ತು ಭಂಡಾರಿ ಬಂಧು ಬಾಂಧವರು ಶುಭ ಹಾರೈಸುತ್ತಿದ್ದಾರೆ.
ನೂತನ ಮನೆಯು ನಿಮಗೆ ಸಕಲಷ್ಠೈಶ್ವರ್ಯಗಳನ್ನೂ ಕರುಣಿಸಲಿ,ಸುಖ ಶಾಂತಿ ನೆಮ್ಮದಿ ನಿಮ್ಮ ಮನೆಯಲ್ಲಿ ಸದಾ ನೆಲೆಸಿರುವಂತೆ ಶ್ರೀ ದೇವರು ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
ವರದಿ :ಅವಿನಾಶ್ ಭಂಡಾರಿ ಮರ್ಲಾಡಿ ,ಮಂಗಳೂರು

Leave a Reply

Your email address will not be published. Required fields are marked *