
ಮಂಗಳೂರು ತಾಲೂಕು ಸುರತ್ಕಲ್ ಚೊಕ್ಕಬೆಟ್ಟು ಭಂಡಾರಿ ಹೌಸ್ ನ ಶ್ರೀಮತಿ ಅಪ್ಪಿ ಭಂಡಾರಿ ಮತ್ತು ದಿವಂಗತ ಅಪ್ಪು ಭಂಡಾರಿ ದಂಪತಿಯ ಪುತ್ರ,ಸುರತ್ಕಲ್ ಕ್ರಿಸ್ಟಲ್ ವಾಚ್ ವರ್ಲ್ಡ್ ಮಾಲಿಕರಾದ ಶ್ರೀ ಸತೀಶ್ ಬಿ.ಕೆ. ಮತ್ತು ಕಾರ್ಕಳ ತಾಲೂಕು ಕಾಬೆಟ್ಟು ಶ್ರೀ ಕೆ.ಸುಂದರ್ ಭಂಡಾರಿ ಮತ್ತು ಶ್ರೀಮತಿ ಲಕ್ಷಿ ಸುಂದರ್ ಭಂಡಾರಿ ದಂಪತಿಯ ಪುತ್ರಿ ಶ್ರೀಮತಿ ಚಂದ್ರಿಕಾ. ಇವರು ಸುರತ್ಕಲ್ ಇಡ್ಯಾ ಗ್ರಾಮದ ಭರತ್ ನಗರದಲ್ಲಿ ನೂತನವಾಗಿ ಕಟ್ಟಿಸಿದ ಮನೆ…

“ಸಾಕ್ಷ.”




ಇದರ ಗೃಹ ಪ್ರವೇಶ ಫೆಬ್ರವರಿ 23,2019 ರ ಶನಿವಾರ ಗಣಹೋಮ, ಶನಿಪೂಜೆ, ಸತ್ಯನಾರಾಯಣ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪುತ್ರಿಯರಾದ ಕು॥ ಸಾತ್ವಿಕ ಮತ್ತು ಕು॥ ದಕ್ಷ ಹಾಗೂ ಬಂದು ಮಿತ್ರರು, ಕುಟುಂಬಸ್ಥರು, ಹಿತೈಷಿಗಳ ಸಮ್ಮುಖದಲ್ಲಿ,ಅವರುಗಳ ಶುಭ ಹಾರೈಕೆಯೊಂದಿಗೆ ನೆರವೇರಿತು.


ನೂತನ ಮನೆಯಲ್ಲಿ ಭಗವಂತನ ಅನುಗ್ರಹದಿಂದ ಸಂಸಾರವು ಸುಖ, ಶಾಂತಿ,ನೆಮ್ಮದಿ, ಆರೋಗ್ಯ ಆಯುಷ್ಯ ಸಕಲ ಐಶ್ವರ್ಯ ವನ್ನು ಕರುಣಿಸಿ, ಬದಕು ಮುನ್ನಡೆಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ವರದಿ : ಶ್ರೀಕಾಂತ್ ಭಂಡಾರಿ ಪಾಣೆಮಂಗಳೂರು.