January 19, 2025
poithaje

ಪೊಯ್ತಾಜೆ ಕಲ್ಯಾರ್ ನ ಶ್ರೀ ಪದ್ಮನಾಭ ಭಂಡಾರಿಯವರ ಮಗ ಶ್ರೀ ಮೋಹನ್ ಭಂಡಾರಿ ಮತ್ತು ಶ್ರೀಮತಿ ಸಾವಿತ್ರಿ ಮೋಹನ್ ಭಂಡಾರಿ ಇವರ ಸುಪುತ್ರ ಕುಶಾಂತ್ ಕುಮಾರ್ ಇವರುಗಳು ಕಲ್ಯಾರ್ ನಲ್ಲಿ ನೂತನವಾಗಿ ನಿರ್ಮಿಸಿದ ಮನೆ “ಐಕ್ಯ” ದ ಗೃಹಪ್ರವೇಶವನ್ನು ಡಿಸೆಂಬರ್ 7 ರ ಗುರುವಾರ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿದರು.


ಗೃಹಪ್ರವೇಶ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕುಟುಂಬಸ್ಥರು, ಬಂಧುಬಳಗದವರು,ಹಿತೈಷಿಗಳು ಶುಭ ಹಾರೈಸಿ, ಯಥೋಚಿತ ಸತ್ಕಾರವನ್ನು ಸ್ವೀಕರಿಸಿದರು.

ಈ ಶುಭಸಂದರ್ಭದಲ್ಲಿ ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಬಂಧುಗಳಿಗೆ ಶುಭ ಕೋರುತ್ತ,ನೂತನ ಗೃಹ ನಿಮ್ಮ ಬಾಳಿಗೆ ಸಕಲಷ್ಟೈಶ್ವರ್ಯ ಭಾಗ್ಯವನ್ನು ಕರುಣಿಸಲಿ ಎಂದು ಮನದುಂಬಿ ಹಾರೈಸುತ್ತದೆ.
“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *