
ಮೂಡಬಿದಿರೆ ನೆಲ್ಲಿಕಾರಿನ ಬೋರುಗುಡ್ಡೆ ಎಂಬಲ್ಲಿ ಶ್ರೀಮತಿ ರತ್ನ ಭಂಡಾರಿ ಇವರು ನೂತನವಾಗಿ ನಿರ್ಮಿಸಿರುವ ಗೃಹ
ಗುರುಕೃಪಾ
ನಿವಾಸದ ಗೃಹ ಪ್ರವೇಶವು ದಿನಾಂಕ 29ನೇ ಏಪ್ರಿಲ್ 2019 ರಂದು ಸೋಮವಾರ ಸಡಗರ ಸಂಭ್ರಮದಿಂದ ಜರಗಿತು. ಗೃಹ ಪ್ರವೇಶದ ಪ್ರಯುಕ್ತ ವಾಸ್ತುಹೋಮ, ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಮುಂತಾದ ಧಾರ್ಮಿಕ ವಿಧಿವಿಧಾನಗಳು ನಡೆದವು.

ಸಮಾರಂಭಕ್ಕೆ ಆಗಮಿಸಿದ ಅತಿಥಿ ಗಣ್ಯರು, ಬಂಧು ಮಿತ್ರರು ಆದರಾತಿಥ್ಯವನ್ನು ಸ್ವೀಕರಿಸಿ ಶುಭಹಾರೈಸಿದರು.
ಈ ಶುಭಸಂದರ್ಭದಲ್ಲಿ ಶ್ರೀಮತಿ ರತ್ನ ಭಂಡಾರಿ ಮತ್ತು ಕುಟುಂಬಸ್ಥರಿಗೆ ನೂತನ ಮನೆ ಹೊಸತನ್ನು ತರಲಿ ಮತ್ತು ಆಯುರಾರೋಗ್ಯ , ಐಶ್ಚರ್ಯ ಮತ್ತು ಸುಖಶಾಂತಿ ನೆಲೆಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರೈಸುತ್ತದೆ.
ಭಂಡಾರಿ ವಾರ್ತೆ