
ಶ್ರೀ ರಮೇಶ್ ಭಂಡಾರಿ ಮತ್ತು ಶ್ರೀಮತಿ ರಜನಿ ರಮೇಶ್ ಭಂಡಾರಿಯವರು ಚಿಕ್ಕಮಗಳೂರು ಆದಿಶಕ್ತಿನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿದ “ಮಂದಹಾಸ” ನಿಲಯದ
ಗೃಹ ಪ್ರವೇಶ ಮೇ 10 ರ ಗುರುವಾರದ ಶುಭ ಮುಹೂರ್ತದಲ್ಲಿ ಶ್ರೀ ವೈಭವ ಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಪೂಜಾ ವಿಧಿವಿಧಾನದೊಂದಿಗೆ ರಮೇಶ್ ಭಂಡಾರಿಯವರ ಮಕ್ಕಳಾದ ರಮ್ಯಾ ಮತ್ತು ರಾಕೇಶ್ ಭಂಡಾರಿ ಮತ್ತು ಸಮಾಜದ ಬಂದುಗಳು, ಗುರು ಹಿರಿಯರು ಜನ ಪ್ರತಿನಿಧಿಗಳು, ಹಿತೈಷಿಗಳು, ಸಹೋದ್ಯೋಗಿಗಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತು. ಆಗಮಿಸಿದ ಅತಿಥಿಗಳು ಶುಭ ಕೋರಿ ಹರಸಿದರು.
ಇವರ ನೂತನ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಆರೋಗ್ಯ ಆಯುಷ್ಯ ಸಮೃದ್ಧವಾಗಿರಲಿ. ಭಗವಂತನು ಇವರ ಸಕಲ ಇಷ್ಟಾರ್ಥಗಳನ್ನೂ ಈಡೇರಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭಹಾರೈಸು

ವರದಿ :ಪುನೀತ್ ಭಂಡಾರಿ ಉಜಿರೆ