
ಮಂಗಳೂರು ಕೈರಂಗಳ ವಿದ್ಯಾನಗರದ ದಿವಂಗತ ಆನಂದ ಭಂಡಾರಿ ಮತ್ತು ದೇವಕಿ ಆನಂದ ಭಂಡಾರಿ ದಂಪತಿಗಳ ಪುತ್ರ ಶ್ರೀ ತೀರ್ಥಪ್ರಸಾದ್ ಭಂಡಾರಿಯವರು ನಿರ್ಮಿಸಿದ ನೂತನ ಗೃಹ

“ವಿಶ್ರಾಂತಿ”

ನಿಲಯದ ಗೃಹಪ್ರವೇಶ ಕಾರ್ಯಕ್ರಮವು ಏಪ್ರಿಲ್ 16,2019 ರ ಮಂಗಳವಾರ ಶ್ರೀ ಲಕ್ಷ್ಮೀ ಪೂಜೆ ಶ್ರೀ ಗಣಪತಿ ಹೋಮ ಮುಂತಾದ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು. ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅದೇ ದಿನ ರಾತ್ರಿ ನಡೆದ ಶ್ರೀ ಕೊರಗಜ್ಜನ ಜೋಡುಕೋಲ ಮತ್ತು ಅನ್ನಪ್ರಸಾದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.



ನೂತನ ಗೃಹಪ್ರವೇಶದ ಈ ಶುಭ ಸಂದರ್ಭದಲ್ಲಿ ಶ್ರೀ ತೀರ್ಥಪ್ರಸಾದ್ ಭಂಡಾರಿಯವರಿಗೆ ಅವರ ತಾಯಿ, ಅಣ್ಣ ಶ್ರೀ ಹೇಮಚಂದ್ರ ಭಂಡಾರಿ ಮತ್ತು ತಂಗಿಯಂದಿರಾದ ಶ್ರೀಮತಿ ಹೇಮಾವತಿ ಭಂಡಾರಿ, ಶ್ರೀಮತಿ ಶೀಲಾವತಿ ಭಂಡಾರಿ ಮತ್ತು ಮಕ್ಕಳು, ಕುಟುಂಬಸ್ಥರು, ಹಿತೈಷಿಗಳು ಶುಭ ಹಾರೈಸಿದರು.


ನೂತನ ಗೃಹಪ್ರವೇಶದ ಸಂಭ್ರಮದಲ್ಲಿರುವ ಶ್ರೀ ತೀರ್ಥಪ್ರಸಾದ್ ಭಂಡಾರಿಯವರು ಮತ್ತು ಕುಟುಂಬಸ್ಥರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”