September 20, 2024

ಸತ್ಯ ಕತೆ

————–
   ದಿನದಿಂದ ದಿನಕ್ಕೆ ನನ್ನ ನೆನಪಿನ ಬುತ್ತಿ ತುಂಬುತ್ತಲೇ ಇರುತ್ತದೆ. ಅನುಭವ, ಘಟನೆಗಳು ಹರಿದು ಬುತ್ತಿಯಲ್ಲಿ ತುಂಬುತ್ತದೆ. ಅಕ್ಷಯ ಪಾತ್ರೆಯಿಂದ ತೆಗೆದಷ್ಟು ಪುನಃ ಪುನಃ ಬಂದು ಸೇರುತ್ತದೆ.
  ಬಾಲ್ಯದಲ್ಲಿ ನನಗೆ ನನ್ನ ಗುರುಗಳು ಮತ್ತು ನನ್ನ ತಾಯಿಯವರು “ನೀನು ತುಂಬಾ ಓದಬೇಕು ಮತ್ತು
ತುಂಬಾ ಬರೆಯಬೇಕು”ಎಂದಿದ್ದರು. ಅವರ ಆಶೀರ್ವಾದ ಫಲವಾಗಿ ನನ್ನ ಮಟ್ಟಿಗೆ ನಾನು ತುಂಬಾ ಓದಿದ್ದೇನೆ. ಓದುತ್ತಲೇ ಇದ್ದೇನೆ. ಅದರಂತೆ ತುಂಬಾ ತುಂಬಾ ಬರೆದಿದ್ದೇನೆ. ಉದ್ಯೋಗದ ಸಮಯದಲ್ಲಿ ಬರೆದಿರುವುದಕ್ಕೆ ಲೆಕ್ಕವೇ ಇಲ್ಲ. ಈಗಲೂ ಏನಾದರೊಂದು ಬರೆಯುತ್ತಲೇ ಇದ್ದೇನೆ.
   
 
ನಿವೃತ್ತಿ ಬಳಿಕ ಹೇಗೆ ಕಾಲಾಹರಣ ಮಾಡಲಿ ಎಂಬ ಕೊರಗು ನನ್ನಲ್ಲಿತ್ತು.ಈ ಕೊರಗು ನಿವಾರಿಸಲು ಗುರು
ಗಳ ಮತ್ತು ತಾಯಿಯವರ ಆಶೀರ್ವಾದ ಎದುರಾಗಿ ಆ ಕೊರಗನ್ನು ನಿವಾರಿಸಿತ್ತು. ಬರೆದಷ್ಟು ಮುಗಿಯದ
ಪ್ರೇರಣೆ ನನಗೆ ಅವರ ಆಶೀರ್ವಾದದ ಬಲದಿಂದ ಬರುತ್ತಲೇ ಇರುತ್ತದೆ.ಇದರಿಂದ ನಾನೊಬ್ಬ ನನ್ನಮಟ್ಟಿಗೆ ಕಿರು ಬರಹಗಾರನು ಎಂದು ನಾನೇ ಹೇಳಿ ಕೊಳ್ಳುತ್ತೇನೆ. ಈ ರೀತಿಯಲ್ಲಿ ಹೇಳಿಕೊಳ್ಳಲು ಕೆಲವರು ಅಸಹಕಾರ ನೀಡಿದ್ದರೂ ಬಹಳಷ್ಟು ಮಂದಿ ನನಗೆ ಬಹಳಷ್ಟು ಸಹಕಾರ ನೀಡಿದ್ದಾರೆ.
 
 
   ಬರೆಯುವ ಗೀಳು ನನಗೆ ಪ್ರಥಮವಾಗಿ ಬಂದಿರುವುದು ಕಾಲೇಜು ದಿನಗಳಲ್ಲಿ. ಡಿಗ್ರಿ ಕಲಿಯುತ್ತಿರುವಾ
ಗ ಮೂರು ವರ್ಷಗಳಲ್ಲೂ  ಪ್ರತಿಷ್ಟಿತ ಭುವನೇಂದ್ರ ಕಾಲೇಜಿನ ಮೆಗೆಸಿನ್ನಲ್ಲಿ ನನ್ನ ಒಂದು ಲೇಖನ ಬರುತ್ತಿತ್ತು. ನನ್ನ ಲೇಖನದ ಕೆಳಗೆ “ಗೋವಿಂದ ಇರ್ವತ್ತೂರು’ ಎಂದು ನನ್ನ ಹೆಸರು ನೋಡಿ ಸಂತೋಷ ಪಟ್ಟಿದ್ದೆ.ಈ ಕಾಲದಲ್ಲಿ ಉದಯವಾಣಿ ಪತ್ರಿಕೆಯ ‘ದೂರು ಗಂಟೆ’ ವಿಭಾಗಕ್ಕೆ ಪತ್ರ ಬರೆಯುವ ಹವ್ಯಾಸ ಇತ್ತು.
 
   ಡಿಗ್ರಿ ಮುಗಿಸಿದ ನಾನು “ವನಿತಾ” ಮೇಡಮ್ ಕೃಪೆಯಿಂದ ಬ್ಯಾಂಕ್ ಸೇರಿದೆ.ಗುರು ಮತ್ತು ತಾಯಿ ಆಶೀರ್ವಾದದ ಬಲದಿಂದ ಬ್ಯಾಂಕಲ್ಲಿರುವ ಓದು ಬರಹ ಸಾಲದುದಕ್ಕೆ ಪುನಃ ಕಾಲೇಜು ಒಂದಕ್ಕೆ ಸೇರಿದೆ.
ಅಲ್ಲೂ ಮೂರು ವರ್ಷ ಲಂಗು ಲಗಾಮು ಇಲ್ಲದೆ ಓದು ಮತ್ತು ಬರವಣಿಗೆ ಮುಂದುವರಿಯಿತು. ಇದಾದ ಬಳಿಕ ಬ್ಯಾಂಕ್ ಡಿಪ್ಲೋಮಾಕ್ಕಾಗಿ ಓದುವುದು ಬರೆಯುವುದು ನಿರಂತರ ನಡೆಯಿತು.
 
    ಮಂಗಳೂರು ನಗರಕ್ಕೆ ಬಂದಾಗ ‘ತುಲು ರಾಜ್ಯ’ ಪತ್ರಿಕೆಯ ಸಂಪಾದಕರ ಪರಿಚಯವಾಗಿ ಬರಹಗಳನ್ನು ಬರೆದು ಕಳುಹಿಸಲು ಆರಂಭಿಸಿದೆ.ಹಲವು ಕತೆ ಲೇಖನಗಳು ಧಾರವಾಹಿ ಆಗಿ ಪ್ರಕಟವಾಗುತ್ತಿತ್ತು.
ನಂತರದಲ್ಲಿ “ಕಚ್ಚೂರು ವಾಣಿ” ಪತ್ರಿಕೆಗೆ ಕತೆ ಲೇಖನ ಕಳುಹಿಸಲು ಪ್ರಾರಂಭಿಸಿದೆ. ಈ ಪತ್ರಿಕೆಯ ಎಲ್ಲಾ ಸಂಪಾದಕರು ನನಗೆ ಬರೆಯುವಂತೆ ಬಹಳಷ್ಟು ಪ್ರೋತ್ಸಾಹ ಕೊಟ್ಟರು. ಅದರಲ್ಲೂ ಇದರ ಒರ್ವ
ಸಂಪಾದಕರು ನನಗೆ ಬರೆಯಲು ಪ್ರತೀ ಸಾರಿ ಫೋನ್ ಮಾಡಿ ಹೇಳುತ್ತಿದ್ದರು.”ಗೋವಿಂದಣ್ಣ ಲೇಖನ ಬಂದಿಲ್ಲವಲ್ಲ” ಎಂದು ನೆನಪು ಮಾಡಿಸುತ್ತಿದ್ದರು.  ಈ ಸಮಯದಲ್ಲಿ ನಾನು ಬ್ಯಾಂಕಲ್ಲಿ ಮ್ಯಾನೇಜರ್ ಆಗಿದ್ದೆ. ಆಫೀಸಿನಲ್ಲಿ ಕೆಲಸ ಇದ್ದರೂಈ ಕಚ್ಚೂರು ವಾಣಿಯ ಸಂಪಾದಕರು ಫೋನ್ ಮಾಡಿ “ಬಂದಿಲ್ಲ”ಎಂದು ಚೊರೆ ಮಾಡುತ್ತಿದ್ದರು. ರಾತ್ರಿಯಲ್ಲೂ ನನಗೆ ಫೋನ್ ಮಾಡಿ “ಬರೆದು ಕಳಿಸಿ” ಎಂದು ಜೋರು ಮಾಡಿ ಬರೆಯುವಂತೆ
ಪ್ರೋತ್ಸಾಹ ಕೊಡುತ್ತಿದ್ದರು. ಇಟ್ ಈಸ್ ಅನ್ಫೋರ್ಗೆಟೆಬ್ಲ್. ಪ್ರತಿ ತಿಂಗಳು ಕಚ್ಚೂರು ವಾಣಿಯಲ್ಲಿ ನನ್ನ ಲೇಖನಕ್ಕೆ ಸ್ಥಳ ಇರುತ್ತಿತ್ತು. ಅದರಲ್ಲೂ ನನ್ನ ಲೇಖನ ಓದಿದವರು ಅದಕ್ಕೆ ಪ್ರತಿಕ್ರಿಯೆ ಕೊಡುತ್ತಿದ್ದರು. ಅದಕ್ಕಾಗಿ ಇಟ್ಟಿರುವ ಪುಟದಲ್ಲಿ ನನ್ನ ಲೇಖನದ ಪ್ರತಿಕ್ರಿಯೆ ಪ್ರಕಟವಾಗುತ್ತಿತ್ತು. ಅಲ್ಲೂ ಒಂದಿಷ್ಟು ಖುಷಿ ಆಗುತ್ತಿತ್ತು.
 
 
   ಕಚ್ಚೂರು ವಾಣಿಯಲ್ಲಿ ಬರೆದ ಕೆಲವೇ ಕತೆ ಲೇಖನಗಳನ್ನು ವಿಜಯ ಕರ್ನಾಟಕ ಪತ್ರಿಕೆ ಯವರು
ಪ್ರಕಟಿಸಿದ್ದರು. ನಂತರದಲ್ಲಿ ನಾನು ಕಂಡಿದ್ದು “ಜಯಕಿರಣ” ಪತ್ರಿಕೆಯವರನ್ನು. ನಿತ್ಯವೂ ಅದರಲ್ಲಿ ಪ್ರಸಿದ್ಧ ಬರಹಗಾರರ ಕತೆ ಲೇಖನಗಳು ಪ್ರಕಟವಾಗುತ್ತದೆ. ನನ್ನ ಎಲ್ಲಾ ಬರಹಗಳನ್ನು ಪ್ರಕಟಿಸಿದ್ದಾರೆ. ಪ್ರಕಟಿಸುತ್ತಲೇ ಇದ್ದಾರೆ.
 
 
     ನಂತರ ಹಲವು ಲೇಖನಗಳನ್ನು ನಮ್ಮ ‘ಭಂಡಾರಿವಾರ್ತೆ’ ಯು ಪ್ರಕಟಿಸಿತ್ತು.’ಪೇಪರಿನಲ್ಲಿ ಬರೆದು ಕಳಿಸುವ ಕಾಲ ಇದಲ್ಲ. ನೀವು ಆನ್ಲೈನಲ್ಲಿ ಕಳಿಸಿ’ ಎಂಬ ಮಾಹಿತಿಯನ್ನು ರವಾನಿಸಿತು ಭಂಡಾರಿ ವಾರ್ತೆ.ಮೊಬೈಲ್ನಲ್ಲಿ ಕನ್ನಡ ಫೀಡ್ ಮಾಡಲು ನನಗೆ ಗೊತ್ತಿರಲಿಲ್ಲ. ಪೇಪರಿನಲ್ಲಿ ಬರೆದು ನಂತರ ಸೈಬರಿನಲ್ಲಿ ಟೈಪ್ ಮಾಡಿ ಕಳುಹಿಸಲು ತುಂಬಾ ತೊಂದರೆ ಆಗುತ್ತಿತ್ತು.ಬೇರೆ ಪತ್ರಿಕೆಯವರು ಕೂಡಾ ನೀವು ಆನ್ಲೈನ್ ಮೂಲಕವೇ ಕತೆ ಲೇಖನ ಕಳುಹಿಸ ಬೇಕು ಎಂದು ಹೇಳುತ್ತಾ ಇದ್ದರು. ಪೇಪರಿನಲ್ಲಿ ಬರೆದು ಫೋಟೋ ತೆಗೆದು ಕೆಲವು ತಿಂಗಳು ಕಳುಹಿಸಿದೆ. ನಂತರದಲ್ಲಿ ಅದು ಕೂಡ ನಡೆಯಲಿಲ್ಲ. ಕತೆ ಲೇಖನ ಬರೆಯುವುದನ್ನು ನಿಲ್ಲಿಸುವ ಅಂದಾಜು ಮಾಡಿದ್ದೆ.
   
 ಒಂದು ದಿನ ಭಂಡಾರಿ ವಾರ್ತೆಯಿಂದ ಒಂದು ಮೊಬೈಲ್ ಕಾಲ್ ಬಂದಿತ್ತು. ” ಬರೆಯುವುದನ್ನು ನಿಲ್ಲಿಸ ಬೇಡಿ. ಸ್ವಲ್ಪ ಪ್ರಯತ್ನ ಪಟ್ಟರೆ ಕನ್ನಡ ಫೀಡ್ ಮಾಡಬಹುದು”ಎಂದು ಹುರುಪು ಕೊಟ್ಟರು. ‘ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ಎಂದು ಕನ್ನಡ ಫೀಡ್ ಮಾಡಲು ಪ್ರಯತ್ನಿಸಿದೆ. ಮೊದಲಾಗಿ ವಾಟ್ಸಾಪ್ ಮೆಸೇಜ್ ಮಾಡಲು ಪ್ರಯತ್ನಿಸಿದೆ‌. ನಂತರದಲ್ಲಿ’ಭಂಡಾರಿ ವಾರ್ತೆ’ಗೆ ಲೇಖನ ಕಳುಹಿಸಿದೆ. ಕಷ್ಟ ಜೀವಿ ಯಾವತ್ತೂ ಕಷ್ಟ ಪಡಬೇಕು ಎಂಬ ಪ್ರಿನ್ಸಿಪ್ಲ್  ನನಗೆ ತಿಳಿದಿತ್ತು. ಅಂತು ಭಂಡಾರಿ ವಾರ್ತೆಯ ಮೇರೆಗೆ
ಸಹಕಾರದಿಂದ ಕನ್ನಡ ಫೀಡ್ ಮಾಡುವಷ್ಟು ಉಷಾರು ಆದೆ.ಪೇಪರಿನಲ್ಲಿ ಬರೆಯುವ ಕೆಲಸ ಅಲ್ಲಿಗೆ ಕೊನೆ ಆಯಿತು. ನೇರವಾಗಿ ಮೊಬೈಲೇ ನನ್ನ ಪೇಪರ್ ಆಯಿತು. ಅಷ್ಟು ತಾಕತ್ತನ್ನು ಪಡೆದು ಕೊಂಡೆ. ಹೇಟ್ಸಪ್ ಟು ಭಂಡಾರಿ ವಾರ್ತೆ.
      ನಂತರದಲ್ಲಿ ಭಂಡಾರಿ ವಾರ್ತೆಯು ನನಗೊಂದು App ನ್ನು ಕಳಿಸಿ ಕೊಟ್ಟಿತು. ಇದರಲ್ಲಿ ನನ್ನ ಕತೆ ಲೇಖನಗಳನ್ನು ಹಾಕಬಹುದು. ಅದು ಅಂತರ್ಜಾಲ ತಾಣದಲ್ಲಿ ಎಲ್ಲರಿಗೂ ಓದಲು ಬರುತ್ತದೆ ಎಂಬ ಮಾಹಿತಿ ನೀಡಿದರು. ಸತ್ಯವಾಗಿಯೂ ಇಂತಹ ಒಂದು App ಇದೆ ಎಂದು ನನಗೆ ಗೊತ್ತಿರಲಿಲ್ಲ.
 
Image result for pratilipi kannada
     ಭಂಡಾರಿ ವಾರ್ತೆಯ ಮಾತಿನಂತೆ ನಾನು ನನ್ನಪ್ರಕಟವಾದ ಕತೆ ಲೇಖನಗಳನ್ನು ಒಂದೊಂದಾಗಿ
ಫೀಡ್ ಮಾಡುವ ಕೆಲಸವನ್ನು ಆರಂಭಿಸಿದೆ. ಈಗಾಗಲೇ ನನ್ನ 80 ಕೃತಿಗಳನ್ನು ಪ್ರತಿಲಿಪಿಯ App ನಲ್ಲಿ ಪ್ರಕಟವಾಗಿದೆ. ಇನ್ನಷ್ಟು ಪೂರ್ತಿಗೊಳಿಸುವ ಕೆಲಸವನ್ನು ಮಾಡ ಬೇಕಾಗಿದೆ. ಪ್ರತಿ ಲಿಪಿಯವರು ನನ್ನನ್ನು “ಪ್ರತಿ ಲಿಪಿಯ ಸಾಹಿತಿ’ ಎಂದಿದ್ದಾರೆ. ಅಲ್ಲದೆ 50 ಅಗ್ರಮಾನ್ಯ ಸಾಹಿತಿಗಳ ಪಟ್ಟಿಯಲ್ಲಿ ನನ್ನ ಹೆಸರಿದೆ. ಕಚ್ಚೂರು ವಾಣಿ, ಜಯಕಿರಣ, ಹಾಗೂ ಇತರ ಪತ್ರಿಕೆಯವರಿಗೆ ಧನ್ಯವಾದಗಳನ್ನು ಸಲ್ಲಿಸುವೆನು. ನಮ್ಮ ‘ಭಂಡಾರಿ ವಾರ್ತೆ’ಗೆ ಸೆಲ್ಯೂಟ್ ಕೊಡುವೆನು. ನನ್ನನ್ನು ಪ್ರತಿಲಿಪಿಯ ಸಾಹಿತಿಯನ್ನಾಗಿಸಿದ ನಮ್ಮ’ಭಂಡಾರಿ ವಾರ್ತೆ’ಗೆ
ಶುಭವಾಗಲಿ..

Leave a Reply

Your email address will not be published. Required fields are marked *