January 18, 2025
How is the Josh

ಬೆಳ್ತಂಗಡಿಯಲ್ಲಿ ನಡೆದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಶಾಸಕ ಶ್ರೀ ಹರೀಶ್ ಪೂಂಜ ಮತ್ತು ತಹಸೀಲ್ದಾರ್ ಶ್ರೀ ಗಣಪತಿ ಶಾಸ್ತ್ರೀಯವರ ಅಮೃತ ಹಸ್ತದಲ್ಲಿ ದೀಕ್ಷಿತ್ ಭಂಡಾರಿ ಉಜಿರೆ  ನಿರ್ದೇಶನದ ದೇಶಭಕ್ತಿಯುಳ್ಳ ಕಿರುಚಿತ್ರ ‘ How is the Josh??” ದಿನಾಂಕ ಆಗಸ್ಟ್15, 2019ರಂದು ಬಿಡುಗಡೆಗೊಂಡಿತು.

ಅದು ಫೆಬ್ರವರಿ 14, 2019. ಭಾರತದ ಪಾಲಿಗೆ ಕರಾಳ ದಿನವದು. ಜೈಶ್ ಉಗ್ರರ ದಾಳಿಗೆ ನಮ್ಮ ಹೆಮ್ಮೆಯ 49 ಯೋಧರು ಹುತಾತ್ಮರಾದರು. ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಅವರ ತಾಣಗಳನ್ನು ಧ್ವಂಸ ಮಾಡಿರುವುದು ದೇಶದೆಲ್ಲೆಡೆ ಪ್ರಶಂಸೆಗೆ ಪಾತ್ರವಾಯಿತು. ಈ ಬಗ್ಗೆ ದೇಶದೆಲ್ಲೆಡೆ ಪರ, ವಿರೋಧಗಳ ಚರ್ಚೆಯೂ ಆಯಿತು. ಆದರೆ  ನಮ್ಮ ಹೆಮ್ಮೆಯ ಯೋಧರು ಎಷ್ಟು ಕಠಿಣ ಪರಿಸ್ಥಿತಿಯಲ್ಲಿ ದೇಶವನ್ನು, ನಮ್ಮನ್ನು ಕಾಯುತಿದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿರದ ಸಂಗತಿ. ಒಬ್ಬ ಯೋಧನ ಮನದಾಳದ ಮಾತನ್ನು how`s the josh ಎಂಬ ಕಿರುಚಿತ್ರದ ಮೂಲಕ ಸಮಾಜದ ಮುಂದಿಡುವ ಪ್ರಯತ್ನವನ್ನು ನಮ್ಮ ಭಂಡಾರಿ ಸಮಾಜದ ಯುವ ಪ್ರತಿಭೆ ದೀಕ್ಷಿತ್ ಭಂಡಾರಿಯವರು ಮಾಡಿದ್ದಾರೆ.

 

ಹೌದು ಯಶಸ್ವಿ ‘ನೀತಿ’ ಕಿರುಚಿತ್ರದ ಬಳಿಕ ದೀಕ್ಷಿತ್ ಭಂಡಾರಿಯವರು ನೂತನ ಕಿರುಚಿತ್ರವನ್ನು ನಿರ್ದೇಶಿಸಿದ್ದು, ಪುಲ್ವಾಮಾ ದಾಳಿಯ ವಿಚಾರವನ್ನು ಮುಂದಿಟ್ಟುಕೊಂಡು ಕಿರುಚಿತ್ರವನ್ನು ತಯಾರಿಸಿದ್ದಾರೆ. ನಮ್ಮ ಯೋಧರ ಮೇಲೆ ದಾಳಿ ನಡೆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ, ಮನೆ ಮನೆಗಳಲ್ಲಿ ಯುದ್ಧ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಆದರೆ ನಮ್ಮ ಜನರಿಗೆ ದೇಶದ ಬಗ್ಗೆ ಎಷ್ಟು ಗೊತ್ತು ಅನ್ನೋದೆ ವಿಚಾರ. ಹೀಗೆ ತಮಗೆ ಮನಬಂದಂತೆ ಮಾತನಾಡುವ ಜನರ ಮನಸ್ಸನ್ನು ಓರ್ವ ಯೋಧ ಹೇಗೆ ಬದಲಾಯಿಸುತ್ತಾನೆ ಅನ್ನೋದೇ ಚಿತ್ರದ ಕಥೆ.


ಚಿತ್ರದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಸ್ಮಿತೇಶ್ ಬಾರ್ಯ, ನಿರ್ಮಾಪಕರಾದ ವಿನೋದ್ ಸಾಲ್ಯಾನ್, ಸಹ ನಟರಾಗಿ ರಕ್ಷಣ್, ಸಂತೋಷ್ ಕುಮಾರ್ ಜೈನ ನಟಿಸಿದ್ದಾರೆ . ದೀಕ್ಷಿತ್ ಭಂಡಾರಿ ಉಜಿರೆಯವರ ನಿರ್ದೇಶನ ಮತ್ತು ಛಾಯಾಗ್ರಹಣ ಚಿತ್ರಕ್ಕಿದೆ. ಕ್ಯಾಮೆರಾ ಸಹಾಯಕರಾಗಿ ಕಿಶೋರ್ ಓಡದ ಕರಿಯ ಕಾರ್ಯ ನಿರ್ವಹಿಸಿದ್ದಾರೆ. ಆಗಸ್ಟ್ 15, 2019ರ ಸ್ವಾತಂತ್ರೋತ್ಸವದ ಈ ಪುಣ್ಯ ದಿನದಂದು “ಹೌ ಇಸ್ ದಿ ಜೋಶ್??” ಯೂಟ್ಯೂಬ್ ಚಾನಲ್ ನಲ್ಲಿ  ಬಿಡುಗಡೆಯಾಗಿದ್ದು  ಕೆಳಗೆ ವೀಕ್ಷಿಸಬಹುದು. ಎಲ್ಲರೂ ವೀಕ್ಷಿಸಿ , ಮತ್ತು Subscribe ಬಟನ್ ಮೇಲೆ ಕ್ಲಿಕ್ ಮಾಡಿ ಜೊತೆಗೆ ಕಮೆಂಟ್ ಮಾಡಿ. 

Subscribe ಮಾಡಲು ಇಲ್ಲಿ ಕ್ಲಿಕ್ ಮಾಡಿ.

 

-ಚಿತ್ರತಂಡ

1 thought on “‘ಹೌ ಇಸ್ ದಿ ಜೋಶ್??’ ಕನ್ನಡ ಕಿರು ಚಿತ್ರ ಬಿಡುಗಡೆ

Leave a Reply

Your email address will not be published. Required fields are marked *