
ಆವಕಾಡೊ ಹಣ್ಣನ್ನು ಹೆಚ್ಚು ದಿನ ತಾಜಾ ಆಗಿ ಇಡುವುದು ಹೇಗೆ?
ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಹಣ್ಣುಗಳ ಪಾತ್ರ ಬಲು ದೊಡ್ಡದು. ಅದಕ್ಕಾಗಿ ಮಾರುಕಟ್ಟೆಯಲ್ಲಿ ಹಣ್ಣುಗಳ ಬೇಡಿಕೆ ಅತಿ ಹೆಚ್ಚಿದೆ. ದೇಶಿಯ ಹಣ್ಣುಗಳಲ್ಲದೆ ಅದೆಷ್ಟು ವಿದೇಶಿ ಹಣ್ಣುಗಳು ಲಗ್ಗೆ ಇಟ್ಟಿವೆಯೋ ಲೆಕ್ಕವಿಲ್ಲ. ಆರೋಗ್ಯಕ್ಕಾಗಿ ವಿಶೇಷ ಹಾಗೂ ನಿರ್ದಿಷ್ಟ ಲಾಭ ದೊರಕಿಸಿಕೊಳ್ಳುವ ಸಲುವಾಗಿ ಹಣ್ಣುಗಳನ್ನು ಆಯ್ಕೆ ಮಾಡುತ್ತಾರೆ. ಅತಿ ಲಾಭದಾಯಕವಾದಲ್ಲಿ ಏಕಾಗಬಾರದು? ಅಂತಹ ಒಂದು ಹಣ್ಣಿಂದರೆ ಆವಕಾಡೊ
ತುಂಬಾ ರುಚಿಕರ,ಪುಷ್ಟಿಕರಅನೇಕ ಪಾಕ ವಿಧಾನಗಳಲ್ಲಿ ಹೊಂದಿಕೊಂಡು ಅಡುಗೆಯ ಸ್ವಾದಿಷ್ಟತೆಯನ್ನು ಹೆಚ್ಚಿಸಬಹುದಾದ ಆರೋಗ್ಯಕರ ಹಣ್ಣಿದು. ಪ್ರಪಂಚದಾದ್ಯಂತ ಜನ ಇದಕ್ಕೆ ಮುಗಿಲು ಬಿದ್ದಿದ್ದಾರೆ.
ಅಂತವುದೇನಿದೆ ಇದರಲ್ಲಿ ಎಂದು ನೀವೇ ನೋಡಿ ಅದರ ಲಾಭ ಮತ್ತು ಬಳಸುವ ಬಗೆಯನ್ನೂ ಓದಿ.
1. ಈರುಳ್ಳಿ ತುಂಡುಗಳುಂದಿಗೆ ಆವಕಾಡೊ!!!! ಏನಿದು?
ರೆಸಿಪಿಗೆ ಆವಕಾಡೊ ಬಳಸುವಾಗ ಅರ್ಧ ಮಾತ್ರ ಬೇಕೆನಿಸಿದಲ್ಲಿ ಮಿಕ್ಕಿದ ಅರ್ಧ ಕಂದು ಬಣ್ಣಕ್ಕೆ ತಿರುಗುತ್ತದೆ ಎಂದು ಚಿಂತಿಸಬೇಕಾಗಿಲ್ಲ. ಹಾಗೆ ತಿಂದರೂ ಅದರಿಂದ ತೊಂದರೆ ಇಲ್ಲ. ಆದರೆ ಅದನ್ನು ಈರುಳ್ಳಿಯ ತುಂಡುಗಳೊಂದಿಗೆ ಡಬ್ಬಿಯಲ್ಲಿಟ್ಟರೆ ಆ ತೊಂದರೆಯೂ ಇರುವುದಿಲ್ಲ. ಈರುಳ್ಳಿಯಿಂದ ಬಿಡುಗಡೆಯಾಗುವ ಸಲ್ಫರ್ ನಿಂದ ಅವಕಾಡೊ ಗಾಳಿಯೊಡಗೂಡಿ ಪ್ರತಿಕ್ರಿಯಿಸುವುದಿಲ್ಲ. ಹಾಗಾಗಿ ಬಹಳ ದಿನಗಳ ಕಾಲ ಹಸಿರಾಗಿ, ತಾಜಾ ವಾಗಿರುತ್ತದೆ. ಈರುಳ್ಳಿ ಜೊತೆಗಿಟ್ಟ ಮಾತ್ರದಲ್ಲಿ ಅದರಿಂದ ಆವಕಾಡೊ ರುಚಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ನೀವೇನಾದರೂ ಬ್ರೌನಿ ಮಾಡುವ ಪ್ಲಾನ್ ಇದ್ದರೆ ಮಾತ್ರ ಉಪಯೋಗಿಸುವ ಮುಂಚೆ ಒಂದು ತುಂಡು ತಿಂದು ನೋಡಿ ಖಚಿತಪಡಿಸಿಕೊಳ್ಳಿ.
2. ಸುಲಭವಾಗಿ ಹೆಚ್ಚಿ
ಬೆಳಗಿನ ಪೌಷ್ಟಿಕ ತಿಂಡಿಗಾಗಿ ಆವಕಾಡೊ ಬ್ರೆಡ್ ಟೋಸ್ಟ್ ಸೂಕ್ತ. ಕನ್ನಡದಲ್ಲಿ ಆವಕಾಡೊಗೆ ಬೆಣ್ಣೆ ಹಣ್ಣು ಅನ್ನೋದು ಇದಕ್ಕೇ ಇರಬಹುದು. ಅತಿ ಮೃದು ಇದು. ಹೆಚ್ಚುವಾಗ ಸಿಪ್ಪೆ ಮತ್ತು ತಿರುಳನ್ನು ಬೇರೆ ಮಾಡಲು ಕೈಯಿಂದ ಬೆಣ್ಣೆಯಂತೆ ನುಣುಚಿಕೊಳ್ಳುತ್ತದೆ. ಅದಕ್ಕೆ ಈ ಉಪಾಯ ಅನುಸರಿಸಿ. ಆವಕಾಡೊವನ್ನು ಮಧ್ಯಕ್ಕೆ ಸೀಳಿ. ಬೀಜದಿಂದ ಬೇರ್ಪಟ್ಟ, ಹಳ್ಳ ಹೊಂದಿದ ಭಾಗವನ್ನು, ಅಡುಗೆ ಮನೆಯಲ್ಲಿ ಇದೀಗ ನಾವೆಲ್ಲ ಸಾಮಾನ್ಯವಾಗಿ ಇಟ್ಟುಕೊಳ್ಳುವ ವೆಜಿಟೇಬಲ್ ಕಟರ್ ಮೇಲೆ ಸಿಪ್ಪೆ ಮೇಲ್ಮುಖವಾಗಿ ಬರುವಂತೆ ಇಟ್ಟು ಒತ್ತಿ. ಸುಲಭವಾಗಿ ಹೋಳುಗಳಾಗುತ್ತದೆ. ಇಲ್ಲದಿದ್ದಲ್ಲಿ ಚಾಕುನೇ ಸಾಕು. ಅಂದಹಾಗೆ, ಬೀಜವನ್ನು ಸ್ಪೂನ್ ನಿಂದಲೋ ಅಥವಾ ಕೈಯಿಂದಲೋ ಸುಲಭವಾಗಿ ತೆಗೆಯಬಹುದು. ತುಂಬಾ ಹಣ್ಣಾಗಿದ್ದರಂತೂ ಸುಲಭವಾಗಿ ಅದೇ ಕಳಚಿಕೊಳ್ಳುತ್ತದೆ.
3. ಆಹಾ! ಇಷ್ಟೊಂದು ವಿಟಮಿನ್ಸ್ ಇದೆ ಇದರಲ್ಲಿ
ಆವಕಾಡೊನಲ್ಲಿ ವಿಟಮಿನ್ ಸಿ,ಈ, ಕೆ ಮತ್ತು ಬಿ 6 ಯಥೇಚ್ಛವಾಗಿದೆ. ಇದು ಹೃದಯ, ಮೂಳೆ ಮತ್ತು ದೃಷ್ಟಿಯ ಆರೋಗ್ಯಕ್ಕೆ ಸಹಕಾರಿ. ಖಿನ್ನತೆಯಿಂದ ದೂರವಿರಿಸುತ್ತದೆ ಹಾಗೂ ಪಚನ ಶಕ್ತಿಯನ್ನು ಹೆಚ್ಚಿಸುತ್ತದೆ.
4. ಎಲ್ಲರ ಅಚ್ಚುಮೆಚ್ಚಾದ ಬ್ರೌನಿ ಯ ಜೊತೆಗೂಡಿಸಿ
ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲವೆಂದು ತಿಳಿದಿದ್ದರೂ ನಾಲಿಗೆ ಕೇಳಬೇಕಲ್ಲ. ಬ್ರೌನಿಯ ಮೋಡಿ ಹಾಗಿದೆ. ಅದರ ಜೊತೆ ಆವಕಾಡೊ ಸೇರಿಸಿ. ಮೈದಾ ಬದಲು ಗೋಧಿಹಿಟ್ಟು, ಸಕ್ಕರೆ ಬದಲು ಬೆಲ್ಲ ಸೇರಿಸಿ ಬ್ರೌನಿ ತಯಾರಿಸಿ. ಯಾವುದೇ ಗಿಲ್ಟ್ ಇಲ್ಲದೆ ಆರೋಗ್ಯಕರ ಬ್ರೌನಿಯನ್ನು ಸವಿಯಿರಿ.
ಇನ್ನೂ ಒಂದು ಬೋನಸ್ ಪಾಯಿಂಟ್ ಇಲ್ಲಿದೆ ನೋಡಿ. ಬ್ರೌನಿ ತಯಾರಿಸುವಾಗ ಅರ್ಧ ಕಪ್ ಎಣ್ಣೆ ಹಾಕುತ್ತಿದ್ದಲ್ಲಿ ಆ ಜಾಗದಲ್ಲಿ ಒಂದು ಆವಕಾಡೊವನ್ನು ನುಣ್ಣಗೆ ಮಾಡಿ ಹಾಕಿ. ಎಣ್ಣೆಯ ಅವಶ್ಯಕತೆಯೇ ಇಲ್ಲ. ವಾವ್! ಸೂಪರ್ ಸಬ್ಸ್ಟಿಟ್ಯೂಟ್ ಅಲ್ವಾ? ಕ್ಯಾಲೋರಿಯುಕ್ತ, ಅಡ್ಡ ಪರಿಣಾಮಗಳುಳ್ಳ ಎಣ್ಣೆಯಿಂದ ತಪ್ಪಿಸಿಕೊಳ್ಳಿ.
5. ಆವಕಾಡೊ ಸಲಾಡ್ ಗೂ ಸೈ
ಸಲಾಡ್ ನ ರುಚಿ ಹೆಚ್ಚಿಸುವುದಷ್ಟೇ ಅಲ್ಲದೆ ಕ್ಯಾಲೋರಿ ಯುಕ್ತ,ಪ್ರಿಸರ್ವೇಟಿವ್ ಉಳ್ಳ ಮಯೋನೈಸ್ ಸಲಾಡ್ ನ ರುಚಿ ಹೆಚ್ಚಿಸುವ ಸಲುವಾಗಿ ಹಾಕುವ ಅವಶ್ಯಕತೆ ಇಲ್ಲ. ಯಾವ ಸಲಾಡ್ ಜೊತೆ ಬೇಕಾದರೂ ಆವಕಾಡೊ ಹಾಕಿದರೆ ಅಷ್ಟೇ ಸಾಕು.
6. ಕೆಟ್ಟ ಕೊಲೆಸ್ಟ್ರಾಲ್ ನಿಂದ ಮುಕ್ತಿ
ಹೊಂದಿ ದಿನಕ್ಕೊಂದು ಆಪಲ್ ಡಾಕ್ಟರ್ ನಿಂದ ದೂರವಿರಿಸುತ್ತದೆ ಎಂಬಂತೆ ದಿನಕ್ಕೊಂದು ಆವಕಾಡೊ ಹೃದಯದ ತೊಂದರೆಯಿಂದ ದೂರವಿರಿಸುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಅಧ್ಯಯನಗಳಿಂದ ಇದನ್ನು ದೃಢೀಕರಿಸಿದೆ.
ಅಬ್ಬಬ್ಬಾ!!!! ಒಟ್ಟಿನಲ್ಲಿ ಈ ಆವಕಾಡೊ ಮಹಿಮೆ ಹೇಳುತೀರದು. ನೀವು ಇದರ ಲಾಭಗಳನ್ನು ಮಿಸ್ ಮಾಡಿಕೊಳ್ಳದೆ ಇದನ್ನು ಬಳಸಿ ಆರೋಗ್ಯ ಹೆಚ್ಚಿಸಿಕೊಳ್ಳಿ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ಬಿ ಸ್