ಸರ್ಕಾರದ ನಿಯಮದಂತೆ ಆಧಾರ್ ನಂಬರ್ ಜೋಡನೆ ಕಡ್ಡಾಯವಾಗಿದ್ದು ಮೊಬೈಲ್ ಸಿಮ್ ಗೆ ಆಧಾರ್ ಸಂಖ್ಯೆ ಜೋಡಿಸಿ ಮರು ದೃಢೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮೊಬೈಲ್ ಗ್ರಾಹಕರಿಗೆ ಆಧಾರ್ ಜೋಡನೆ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದೊಂದಿಗೆ ಸುಲಭವಾಗಿ ಮೊಬೈಲ್ ಕರೆ (IVR) ಮಾಡುವ ಮೂಲಕ ಯಾವುದೇ ಅಡಚಣೆಯಿಲ್ಲದೆ ಆಧಾರ್ ಸಂಖ್ಯೆಯೊಂದಿಗೆ ದೃಢೀಕರಿಸಬಹುದು. ಹಿಂದೆ ಮೊಬೈಲ್ ಸಿಮ್ ಕಚೇರಿ ಅಥವಾ ಮೊಬೈಲ್ ಸಿಮ್ ಅಂಗಡಿಗಳಲ್ಲಿ ಮಾತ್ರ ಆಧಾರ್ ಸಂಖ್ಯೆ ಜೋಡನೆ ಮತ್ತು ಮೊಬೈಲ್ ಸಂಖ್ಯೆ ದೃಢೀಕರಣಕ್ಕೆ ಅವಕಾಶವಿತ್ತು. ಈಗ ಹೊಸ ವಿಧಾನ ಜಾರಿಗೆ ಬಂದಿರುವುದರಿಂದ ಗ್ರಾಹಕರು ನಿರಾಳರಾಗಬಹುದು. ಈ ಪ್ರಕ್ರಿಯೆ ಪೆಬ್ರವರಿ 6 ರವರೆಗೆ ಚಾಲ್ತಿಯಲ್ಲಿರುತ್ತದೆ.
ನೀವು ಆಧಾರ್ ಸಂಖ್ಯೆ ಜೋಡಿಸಿ ಮೊಬೈಲ್ ನಂಬರ್ ಮರು ದೃಢೀಕರಣ ಮಾಡುವ ವಿಧಾನ ಬಹಳ ಸರಳವಾಗಿದೆ. ನಿಮ್ಮ ಹತ್ತಿರ ಆಧಾರ್ ನಂಬರ್ ಇದ್ದರೆ ಸಾಕು. ನೀವು Airtel, Idea, Jio, Vodafone ಅಥವಾ ಇತರ ಯಾವುದೇ ಸಂಸ್ಥೆಯ ಮೊಬೈಲ್ ಗ್ರಾಹಕರಾಗಿದ್ದರೂ 14546 ಈ ಟೋಲ್ ಪ್ರೀ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಈ ಕೆಳಗಿನಂತೆ IVR ಸೂಚನೆಯಂತೆ ಆಧಾರ್ ನಂಬರ್ ಜೋಡಿಸಿ ನಿಮ್ಮ ಸಿಮ್ ನಂಬರನ್ನು ಮರು ದೃಢೀಕರಿಸಬಹುದು.
OTP ಬರಬೇಕಾದ ಮೊಬೈಲ್ ನಿಮ್ಮ ಬಳಿಯೇ ಇರಬೇಕಾಗುವುದು. OTP 30 ನಿಮಿಷಗಳವರೆಗೆ ಮರುದೃಢೀಕರಣಕ್ಕೆ ಯೋಗ್ಯವಾಗಿರುತ್ತದೆ. ಒಂದು ವೇಳೆ ದೂರವಾಣಿ ನೆಟ್ ವರ್ಕ್ ಸಮಸ್ಯೆಯಿಂದ ಕರೆ ಸ್ಥಗಿತವಾದರೂ ಅದೇ OTP ಬಳಸಿ ಪ್ರಕ್ರಿಯೆ ಮುಂದುವರೆಸಬಹುದು. ಕಾರ್ಪೋರೇಟ್ ಗ್ರಾಹಕರು ಆಧಾರ್ ಜೋಡನೆ ಮಾಡುವ ಅವಶ್ಯಕತೆ ಇಲ್ಲ ಎಂಬುದನ್ನು ಟೆಲಿಕಾಂ ಸಂಸ್ಥೆಗಳು ಹೇಳಿವೆ.
Note: To use the IVR verification option, your mobile number has to be registered with the UIDAI database and your Aadhaar card and mobile number should be from the same state. For mobile users who haven’t registered their mobile numbers with the UIDAI database, can only complete the process by visiting the service provider’s store.
ಕರೆ ಮಾಡಿದರೆ Not Valid ಎಂದು ಬರುತ್ತದೆ….
Idea ,Airtel ,Vodafone working ide