January 18, 2025
bv 1

ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡೋದು ಹೇಗೆ?


ಮಹಿಳೆಯರಿಗೆ ಆರೋಗ್ಯಕರ ಋತುಚಕ್ರ ಬಹಳ ಮುಖ್ಯ. ಇದು ಇವರ ಉತ್ತಮ ಆರೋಗ್ಯದ ಸಂಕೇತವಾಗಿದೆ. ಆದ್ರೆ, ಅದರಿಂದ ಉಂಟಾಗುವ ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಟ್ಯಾಂಪೂನ್‌ಗಳಂತಹ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವುದು ಸವಾಲಿನ ವಿಚಾರವಾಗಿದೆ. ಏಕೆಂದರೆ ಈ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡದೇ ಇದ್ದರೆ, ಆರೋಗ್ಯಕ್ಕೆ ಜೊತೆಗೆ ಪರಿಸರಕ್ಕೂ ಹಾನಿಕಾರಕ. ಹಾಗಾದ್ರೆ, ಬಳಸಿದ ಪ್ಯಾಡ್‌ ಅಥವಾ ಟ್ಯಾಂಪೂನ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಬಳಸಿದ ಪ್ಯಾಡ್‌ ಅಥವಾ ಟ್ಯಾಂಪೂನ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಬಳಸಿದ ಪ್ಯಾಡ್, ಟ್ಯಾಂಪೂನ್‌ಗಳ ಸುರಕ್ಷಿತ ವಿಲೇವಾರಿ ಏಕೆ ಮುಖ್ಯ?:

ಸುರಕ್ಷಿತ ವಿಲೇವಾರಿ ತಂತ್ರಗಳನ್ನುಪಾಲಿಸುವುದು ನಮ್ಮ ಆರೋಗ್ಯ ಮತ್ತು ನಮ್ಮ ಪರಿಸರ ವ್ಯವಸ್ಥೆಗೆ ಮುಖ್ಯವಾಗಿದೆ, ಏಕೆಂದರೆ ಈ ಉತ್ಪನ್ನಗಳಲ್ಲಿ ಹೆಚ್ಚಿನವುಗಳನ್ನ ಮರುಬಳಕೆ ಮಾಡಲಾಗುವುದಿಲ್ಲ. ಅದರಲ್ಲೂ, ಸ್ವಚ್ಛತೆಯ ಬಗ್ಗೆ ಅರಿವಿನ ಕೊರೆತೆಯಿರುವ ಕೆಲವು ಹಳ್ಳಿಗಳಲ್ಲಿ, ಪ್ಯಾಡ್‌ಗಳನ್ನು ಬಳಸಿ, ಶೌಚಾಲಯದ ಮೂಲೆಯಲ್ಲಿ ಅಥವಾ ಅದರ ಗುಂಡಿಯಲ್ಲಿ ಎಸೆದು ಬಿಡುತ್ತಾರೆ. ಇದು ಕೊನೆಯದಾಗಿ ನಮ್ಮ ಒಳಚರಂಡಿ ವ್ಯವಸ್ಥೆಯನ್ನ ಹಾಳು ಮಾಡುವುದು. ಅದಕ್ಕಾಗಿ, ಇದನ್ನು ತಡೆದು ಸರಿಯಾದ ವಿಲೇವಾರಿ ಮಾಡುವುದು ಮುಖ್ಯ.

ಅದಲ್ಲದೇ, ಪ್ಯಾಡ್‌ನಲ್ಲಿರುವ ರಕ್ತವು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಬೆಳೆಸುವುದರಿಂದ ಡಸ್ಟ್‌ಬಿನ್ ಮುಚ್ಚಿರಬೇಕು. ಈ ರೋಗಕಾರಕಗಳು ನಮ್ಮ ಸಂಪರ್ಕಕ್ಕೆ ಬಂದರೆ ಅಥವಾ ಅವು ಜಲಮೂಲಗಳನ್ನು ಕಲುಷಿತಗೊಳಿಸಿದರೆ ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟೇ ಅಲ್ಲ, ಬಾತ್‌ರೂಮ್‌ನಲ್ಲಿ ಸಂಗ್ರಹಿಸಿಟ್ಟರೆ, ಅದನ್ನು ಪ್ರತಿದಿನ ವಿಲೇವಾರಿ ಮಾಡದಿದ್ದರೆ, ಅವು ಸೋಂಕುಗಳು ಮತ್ತು ವಾಯು ಮಾಲಿನ್ಯವನ್ನು ಉಂಟುಮಾಡಬಹುದು.

ಬಳಸಿದ ಸ್ಯಾನಿಟರಿ ನ್ಯಾಪ್ಕಿನ್ ಅನ್ನುವಿಲೇವಾರಿ ಮಾಡುವುದು ಹೇಗೆ?

ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ವಿಲೇವಾರಿ ಮಾಡುವ ಸರಿಯಾದ ವಿಧಾನವೆಂದರೆ ಬಳಸಿದ ಪ್ಯಾಡ್ ಅಥವಾ ಟ್ಯಾಂಪೂನ್ ಅನ್ನು ಕಾಗದ ಅಥವಾ ಟಿಶ್ಯು ಪೇಪರ್‌ನಲ್ಲಿ ಸುತ್ತಿ ಅದನ್ನು ಡಸ್ಟ್‌ಬಿನ್‌ಗೆ ಎಸೆಯುವುದು. ಆದರೆ, ಡಸ್ಟ್‌ಬಿನ್ ಬಾಯಿ ಮುಚ್ಚಿರಬೇಕು ಎಂಬುದನ್ನು ನೆನಪಿಡಿ.

ಪ್ಯಾಡ್‌ಗಳನ್ನು ವಿಲೇವಾರಿ ಮಾಡುವ ಮೊದಲು ಬ್ಯಾಗ್‌ಗಳು ಮತ್ತು ಪ್ಲಾಸ್ಟಿಕ್ ಬ್ಯಾಗ್ ಬಳಸುವುದನ್ನು ತಪ್ಪಿಸಿ.

ಬಳಸಿದ ಪ್ಯಾಡ್‌ಗಳನ್ನು ಕಾಗದದಲ್ಲಿ ಚೆನ್ನಾಗಿ ಸುತ್ತಿ, ಡಸ್ಟ್‌ಬಿನ್‌ಗೆ ಎಸೆಯಿರಿ. ಆದರೆ ನೆನಪಿಡಿ, ಆ ಡಸ್ಟ್‌ಬಿನ್ ವಾರಕ್ಕೊಮೆಯಾದರೂ ವಿಲೇವಾರಿ ಮಾಡುವಂತಿರಬೇಕು. ಇಲ್ಲವಾದಲ್ಲಿ ಪ್ಯಾಡ್‌ಗಳಲ್ಲಿ ರಕ್ತ ಹಾಗೂ ರಾಸಾಯನಿಕ ತುಂಬಿರುವುದರಿಂದ, ಅವು ಅಪಾಯಕಾರಿಯಾಗುವ ಸಂಭವವಿರುತ್ತದೆ. ಹಳ್ಳಿಗಳಲ್ಲಿ, ಮಹಿಳೆಯರು ಪ್ಯಾಡ್‌ಗಳನ್ನು ಹೂಳುವ ಅಭ್ಯಾಸ ಹೊಂದಿದ್ದಾರೆ. ಆದರೆ ಇದು ಕೊನೆಯ ಪರಿಹಾರವಲ್ಲ. ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ. ಆದ್ದರಿಂದ ಪ್ಯಾಡ್‌ಗಳನ್ನು ಕಸ ವಿಲೇವಾರಿ ಸ್ಥಳಕ್ಕೆ ತಲುಪುವಂತೆ ಮಾಡಬೇಕು. ಅಲ್ಲಿ ಮಾತ್ರ ಸರಿಯಾದ ವಿಲೇವಾರಿ ಸಾಧ್ಯ.

ಮಾಲಿನ್ಯ ಮತ್ತು ಸೋಂಕಿನ ಅಪಾಯಗಳನ್ನು ಕಡಿಮೆ ಮಾಡಲು ಏನು ಮಾಡಬಹುದು?

ಸಾಮಾನ್ಯವಾಗಿ ಒಂದು ಸಮುದಾಯ ಒಟ್ಟಿಗೆ ಬದುಕುವಾಗ ಬಳಸಿದ ಪ್ಯಾಡ್‌ ಅಥವಾ ಟ್ಯಾಂಪೂನ್‌ಗಳನ್ನು ಒಂದು ದೊಡ್ಡ ದಹನಕಾರಕಗಳಲ್ಲಿ ಸುಡುವುದು ಉತ್ತಮ ಆಯ್ಕೆಯಾಗಿದೆ. ಆದರೆ ಸದ್ಯ ಹದಗೆಟ್ಟಿರುವ ವ್ಯವಸ್ಥೆಯಲ್ಲಿ ಇದು ಅಸಾಧ್ಯ. ಆದ್ದರಿಂದ ಈ ವಸ್ತುಗಳಿಗಿಂತ ಪರ್ಯಾಯವಾಗಿರುವ ಜೊತೆಗೆ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸಬಹುದು. ಅದಕ್ಕಾಗಿ ಈಗಾಗಲೇ ಮಾರುಕಟ್ಟೆಯಲ್ಲಿ ಕಪ್‌ಗಳು ಬಂದಿದ್ದು, ಇದು ಮರುಬಳಕೆಮಾಡಬಹುದಾದ ಉತ್ಪನ್ನವಾಗಿದೆ. ಇಂತಹ ವಸ್ತುಗಳನ್ನು ಹೆಚ್ಚೆಚ್ಚು ಆಯ್ಕೆ ಮಾಡುವುದು ಉತ್ತಮವಾಗಿದೆ.

ಪ್ಯಾಡ್‌ ಅಥವಾ ಟ್ಯಾಂಪೂನ್‌ಗಳನ್ನು ಸುಡುವುದು ಉತ್ತಮ ಆಯ್ಕೆ

ಸಾಮಾನ್ಯವಾಗಿ ಒಂದು ಸಮುದಾಯ ಒಟ್ಟಿಗೆ ಬದುಕುವಾಗ ಬಳಸಿದ ಪ್ಯಾಡ್‌ ಅಥವಾ ಟ್ಯಾಂಪೂನ್‌ಗಳನ್ನು ಒಂದು ದೊಡ್ಡ ದಹನಕಾರಕಗಳಲ್ಲಿ ಸುಡುವುದು ಉತ್ತಮ ಆಯ್ಕೆಯಾಗಿದೆ. ಆದರೆ ಸದ್ಯ ಹದಗೆಟ್ಟಿರುವ ವ್ಯವಸ್ಥೆಯಲ್ಲಿ ಇದು ಅಸಾಧ್ಯ. ಆದ್ದರಿಂದ ಈ ವಸ್ತುಗಳಿಗಿಂತ ಪರ್ಯಾಯವಾಗಿರುವ ಜೊತೆಗೆ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸಬಹುದು. ಅದಕ್ಕಾಗಿ ಈಗಾಗಲೇ ಮಾರುಕಟ್ಟೆಯಲ್ಲಿ ಕಪ್‌ಗಳು ಬಂದಿದ್ದು, ಇದು ಮರುಬಳಕೆಮಾಡಬಹುದಾದ ಉತ್ಪನ್ನವಾಗಿದೆ. ಇಂತಹ ವಸ್ತುಗಳನ್ನು ಹೆಚ್ಚೆಚ್ಚು ಆಯ್ಕೆ ಮಾಡುವುದು ಉತ್ತಮವಾಗಿದೆ.

ಸಂಗ್ರಹ : SB

ಮೂಲ: BS

Leave a Reply

Your email address will not be published. Required fields are marked *