ಟೊಮೆಟೋ ರೈಸ್
ರುಚಿಕರವಾದ ಟೊಮೆಟೋ ರೈಸ್ ಮಾಡುವ ವಿಧಾನ..
ಬೇಕಾಗುವ ಪದಾರ್ಥಗಳು
- ಎಣ್ಣೆ-4-5 ಚಮಚ
- ಚಕ್ಕೆ- 2
- ಲವಂಗ-4
- ಏಲಕ್ಕಿ-2
- ಪಲಾವ್ ಎಲೆ- 2-3
- ತುಪ್ಪ-ಸ್ವಲ್ಪ
- ಈರುಳ್ಳಿ-1
- ಪುದೀನಾ-ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ಟೊಮೆಟೋ- 2-3
- ಬಟಾಣಿ- ಒಂದು ಸಣ್ಣ ಬಟ್ಟಲು
- ಖಾರದ ಪುಡಿ- 1 ಚಮಚ
- ಅರಿಶಿನದ ಪುಡಿ- ಸ್ವಲ್ಪ
- ಗರಂ ಮಸಾಲಾ- ಅರ್ಧ ಚಮಚ
- ಅಕ್ಕಿ- 1 ಬಟ್ಟಲು
- ನೀರು- ಒಂದೂವರೆ ಬಟ್ಟಲು
ಮಾಡುವ ವಿಧಾನ…
- ಮೊದಲು ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ, ತುಪ್ಪ ಹಾಕಿ ಕಾಯಲು ಬಿಡಿ.
- ನಂತರ ಇದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಈರುಳ್ಳಿ, ಬಟಾಣಿ, ಟೊಮೆಟೋ, ಪುದೀನಾ ಹಾಕಿ ಕೆಂಪಗೆ ಹುರಿದುಕೊಳ್ಳಿ.
- ಕೆಂಪಗಾದ ಬಳಿಕ ಉಪ್ಪು, ಖಾರದ ಪುಡಿ, ಅರಿಶಿಣದ ಪುಡಿಸ, ಗರಂ ಮಸಾಲಾ, ಅಕ್ಕಿ ಹಾಗೂ ಅಳತೆ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮೂರು ಕೂಗು ಕೂಗಿಸಿಕೊಂಡರೆ ರುಚಿಕರವಾದ ಟೊಮೆಟೋ ರೈಸ್ ಸವಿಯಲು ಸಿದ್ಧ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ:ಕೆ ಪಿ