January 18, 2025
Antarala

ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ‌ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದಾ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತಿಳಿಯುತ್ತದೆ ಭವಾನಿಗೆ. ಶಮಿಕಾಳ ಗೆಳತಿ ಆರತಿ ಬರುತ್ತೇನೆ ಎಂದು ಹೇಳಿದಾಗ ಅವಳ ಜೀವನದ ತಿರುವುಗಳನ್ನು ಭವಾನಿ ಯೋಚಿಸುತ್ತಾರೆ… ಆರತಿಗೆ ಮದುವೆ ಆಗಿ ಎರಡು ತಿಂಗಳು ಆಗುವಾಗಲೇ ಅಪ್ಪ ಅಮ್ಮ ಅಣ್ಣ ಗಂಡ ಅಪಘಾತದಲ್ಲಿ ತೀರಿಕೊಂಡು.. ಇವಳು ಉಳಿದು ಇವಳಿಗೆ ಒಂದು ಮಗು ಆಗುತ್ತದೆ.ಈಗ ಮಗು ಪ್ರೀತಿಗೆ ಮೂರು ವರ್ಷ…

ಅಂತರಾಳ – ಭಾಗ 17

ಅಂಟಿ ಎಂದು ಕರೆಯುತ್ತಾ ಒಳ ಬಂದಳು ಆರತಿ… ಭವಾನಿಯ ತಲೆಯ ಗಾಯ ಕಂಡು ಏನಾಯಿತು ಎಂದು ಆಶ್ಚರ್ಯ ದಿಂದ ನೋಡುವಾಗ ಭವಾನಿಯೇ ಗಾಬರಿ ಆಗುವಂತಹ ವಿಷಯ ಏನಿಲ್ಲ ಆರತಿ….ಸ್ವಲ್ಪ ಬಿದ್ದು ಗಾಯ ಆಗಿದೆ… ನನಗೇಕೆ ಹೇಳಿಲ್ಲ ಶಮಿಕಾ ಎಂದಾಗ ಶಮಿಕಾ ಒಳಬಂದು ನೀನು ಗಾಬರಿ ಆಗುವುದು ಬೇಡ ಎಂದು ಹೇಳಿಲ್ಲ ಆರತಿ ಕ್ಷಮಿಸು ಎಂದಾಗ ಆರತಿ ಸಿಟ್ಟಿನಿಂದ ನೋಡಿದಳು….

ವಿಷಯ ಎಲ್ಲ ತಿಳಿದ ಮೇಲೆ ಹಾಗಾದರೆ ಈ ಘಟನೆಯಿಂದ ಅಂಟಿಯ ಜೀವದ ಗೆಳತಿ ಸಿಕ್ಕಿದರೂ ಅಲ್ವಾ ಅಂಟಿ ಎಂದು ಆರತಿ ಹೇಳಿದಾಗ ಆರತಿಗೂ ಗೊತ್ತಿಲ್ಲ ತನ್ನ ಜೀವನದ ದಿಕ್ಕು ಕೂಡ ಬದಲಾಗಬಹುದು ಎಂದು!!
“ಆರತಿ ಪ್ರೀತಿಯನ್ನು ಯಾಕೆ ಕರೆದುಕೊಂಡು ಬಂದಿಲ್ಲ” ಎಂದು ಭವಾನಿ ಕೇಳಿದಾಗ ನಾನು ಒಬ್ಬಳೇ ಬಂದೆ ಅಂಟಿ ಎಂದಳು…

ಶಮಿಕಾ ಮೌನವಾಗಿ ಇರುವುದು ಕಂಡು ಆರತಿ “ಯಾವುದಾದರೂ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ನಾವು ಸದಾ ಚಟುವಟಿಕೆಯಿಂದ ಇರಬೇಕು. ಕ್ರಿಯಾಶೀಲ ವ್ಯಕ್ತಿಗೆ ದುಃಖ, ಚಿಂತೆಗೆ ಸಮಯ ಇರದು”
ಶಮಿಕಾ ಎಂದಳು ‌…..ಅಯ್ಯೋ ಅದು ರಾತ್ರಿ ನಿದ್ದೆ ಸರಿಯಾಗಿ ಬಂದಿಲ್ಲ ಆರತಿ ಎಂದು ನಗುತ್ತಾ ಶಮಿಕಾ ಹೇಳಿದಳು……. ಮಾತನಾಡುತ್ತಾ ನಗುತ್ತಾ ಸಮಯ ಕಳೆದುದೇ ಗೊತ್ತಾಗಲಿಲ್ಲ…… ಆರತಿ ಇದ್ದ ಕಡೆ ಮಾತು ನಗುವಿಗೆ ಬರವಿಲ್ಲ……..ಅಬ್ಬಾ ಇಷ್ಟೊಂದು ನಗು…… ನಾನು ಬಂದೇ ಎನ್ನುತ್ತಾ ಒಳಗೆ ಬಂದಾಗಲೇ ಗೊತ್ತು ಪವನ್ ಬಂದಿದ್ದು…ಒಮ್ಮೆಲೇ ಅಲ್ಲಿ ಮೌನ ಆವರಿಸಿತ್ತು……
ಪವನ್ ಮತ್ತು ಆರತಿ ಒಬ್ಬರಿಗೊಬ್ಬರು ನೋಡಿದರು…. ಪವನ್ ಯಾಕೋ ಕಣ್ಣು ಬೇರೆ ಕಡೆ ಹೊರಳಿಸದೆ ಅವಳನ್ನೇ ದಿಟ್ಟಿಸಿ ನೋಡುತ್ತಾ ಇದ್ದ… ಆಗ ಭವಾನಿ ಪವನ್ ಕಡೆ ನೋಡಿ ಇದು ಆರತಿ….ಶಮಿಕಾಳ ಗೆಳತಿ ಎಂದಳು…ಆಗ ಕೂಡ ಪವನ್ ಆರತಿಯನ್ನೇ ನೋಡುತಿದ್ದ…..ಭವಾನಿಯೇ ಇದು ನನ್ನ ಗೆಳತಿ ಪದ್ಮಜಾಳ ಮಗ ಪವನ್ ಎಂದು ಆರತಿಗೆ ಹೇಳಿದಾಗ ಆರತಿ ಓಹೋ ಹೌದ ನಮಸ್ತೆ ಎಂದು ಹೇಳಿದಳು ಅವಳಿಗೂ ಪವನ್ ತನ್ನ ಕಡೆ ಆರಾಧನಾ ದ್ರಷ್ಟಿಯಿಂದ ನೋಡುವಾಗ ಇರಿಸುಮುರಿಸು ಉಂಟಾಯಿತು…. ಆದರೂ ಪವನ್ ನೋಟ ಮೈಮಾಟ ನೋಡಿ ಮನಸ್ಸು ಏಕೋ ತಾಳ ತಪ್ಪಿದ ಹಾಗೆ ಅನಿಸಿತು……….
ಪವನ್ ಗೆ ತಾನು ಇಷ್ಟರ ತನಕ ಹೆಣ್ಣನ್ನು ನೋಡದಾ ಹಾಗೆ ನೋಡುವುದು ಅವನಿಗೂ ಸರಿ ಕಾಣಲಿಲ್ಲ…. ಆದರೆ ಮನಸ್ಸು ಯಾಕೋ ಕೇಳುವುದಿಲ್ಲ….. ಭವಾನಿ ಏನೋ ಮಾತನಾಡುತ್ತಿದ್ದಾರೆ…. ಪವನ್ ಮನಸ್ಸು ಎಲ್ಲೊ ಇದೆ…..”ಮೊದಲ ನೋಟವೆ ನನ್ನ ಸೆಳೆದಿತ್ತು ನಿನ್ನೆಡೆಗೆ…… ತಂದಿತ್ತು ದೇಗುಲದ ಮದನಿಕೆಯ ನೆನಪು….. ನಿನ್ನ ಕಂಡಿಹ ಘಳಿಗೆ ಏನೋ ಮೃದು ಕಂಪನವು…. ಕಣ್ಣ ಕಟ್ಟಿತು ನಗು ಪಲ್ಲವಿಸಿದ ಪಾರಿಜಾತದ ರೂಪು…..”
ಭವಾನಿ “ಪವನ್ ನಿನ್ನ ಮೊಬೈಲ್ ರಿಂಗ್ ಆಗುತ್ತದೆ” ಎಂದು ಕರೆದಾಗ ಪವನ್ ಆರತಿಯ ಬಗ್ಗೆ ಮನಸ್ಸಲ್ಲಿ ಬರೆಯುತ್ತಿದ್ದ ಕವನಕ್ಕೆ ವಿರಾಮ ನೀಡಿ ಮೊಬೈಲ್ ತೆಗೆದು ಹೊರಗೆ ಬಂದ…. ಶಮಿಕಾ ಮಾತ್ರ ಪವನ್ ಮತ್ತು ಆರತಿಯನ್ನು ನೋಡಿ ಇವರಿಬ್ಬರೂ ಒಂದಾದರೆ ಎಷ್ಟು ಒಳ್ಳೆಯದು ಹಾಗೆ ಆಗಲಿ ಎಂದು ಮನಸಲ್ಲೇ ಹಾರೈಸಿದಳು….ಪವನ್ ಹಾಗೆ ಎವೆಯಿಕ್ಕದೆ ನೋಡಿದ ಮೇಲೆ ಆರತಿಗೆ ಅಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ….. ಪವನ್ ಪೋನ್ ಮಾತನಾಡಲು ಹೊರಗೆ ಹೋದ ತಕ್ಷಣ ಶಮಿಕಾ ಮತ್ತು ಭವಾನಿಯಲ್ಲಿ ನನಗೆ ಬೇರೆ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ಎದ್ದು ತನ್ನ ಮನೆಗೆ ಹೋದಳು…….ಪವನ್ ಪುನಃ ಒಳಗೆ ಬಂದಾಗ ಆರತಿ ಇಲ್ಲದ್ದು ನೋಡಿ ಮುಖ ಪೆಚ್ಚು ಆಯಿತು ಪವನ್ ಗೆ.. ಅಂಟಿ ಎಂದು ಅವರನ್ನು ನೋಡಿದ…ಭವಾನಿಗೂ ಪವನ್ ಬಾಡಿದ ಮುಖ ನೋಡಿ ಅಯ್ಯೋ ಪಾಪ ಎನಿಸಿತು…ಅಂಟಿ ಅಮ್ಮಾ ರಾತ್ರಿ ಅಡುಗೆ ಮಾಡಬೇಡಿ ಎಂದು ಇದನ್ನು ಕೊಟ್ಟು ಕಳಿಸಿದ್ದಾರೆ ಎಂದು ಪದ್ಮಜಾ ನೀಡಿದ ಚೀಲ ಭವಾನಿ ಯಲ್ಲಿ ನೀಡಿ ನಾನು ಮನೆಗೆ ಹೋಗುತ್ತೇನೆ ನೀವು ಜಾಗ್ರತೆ ಇರಿ…. ಶಮಿಕಾ ಬೈ ಎಂದು ಹೇಳಿ ಪವನ್ ಹೊರಟೇ ಬಿಟ್ಟ…..

ಶಮಿಕಾಳಿಗೆ ಪವನ್ ನ ಮನಸ್ಸು ಯಾಕೆ ಹೀಗಾಯಿತು ಆರತಿಯ ಪೂರ್ತಿ ಜೀವನ ಗೊತ್ತಾದರೆ ಏನು ಮಾಡಬಹುದು…. ಮೂರು ವರ್ಷದ ಮಗು ಪ್ರೀತಿ ಇದ್ದಾಳೆ ಅಂದರೆ ಪವನ್ ಮನಸ್ಸು ಹೇಗಿರಬಹುದು. ನಾನು ನಿನ್ನೆಯಿಂದ ಇವನನ್ನು ನೋಡಿದ್ದರು ಚೆಲ್ಲು ಚೆಲ್ಲಾಗಿ ವರ್ತಿಸುವ ಗಂಡು ಇವನಲ್ಲ…… ನಾನು ಅವನ ಜೊತೆ ಕುಳಿತಾಗ ಕೂಡ ಏನೊಂದೂ ಅಸಭ್ಯ ವರ್ತನೆ ಅಶ್ಲೀಲ ಮಾತು ಆಡಿಲ್ಲ……… ಮತ್ತೇ ಯಾಕೆ ಹೀಗೆ…… ಬಹುಶಃ ಆರತಿಯ ಸ್ವಚ್ಚ ನಿರ್ಮಲ ಮನಸ್ಸು ಇವನ ಮನಸ್ಸಿಗೂ ತಿಳಿದಿರಬಹುದು…… ಆರತಿ ಎನು ತಿಳಿದಿರಬಹುದು ಎಂದು ಗೊಂದಲ ಉಂಟಾಯಿತು ಶಮಿಕಾಳಿಗೆ…….ಎನೇ ಆಗಿರಲಿ ಯಾರಿಗೂ ಕೆಟ್ಟದು ಆಗದೆ ಇರಲಿ ಎಂದು ಮನಸಲ್ಲೇ ಹಾರೈಸಿದಳು ಶಮಿಕಾ ……..ಭವಾನಿ ತಮ್ಮ ಬಾಲ್ಯದ ಗೆಳತಿ ಸಿಕ್ಕಿದ ಆನಂದದಲ್ಲಿ ಇದ್ದರು……..
ಮನೆಗೆ ಬಂದಾಗ ಪವನ್ ಗಹನವಾದ ವಿಚಾರ ಇದ್ದ ಹಾಗೆ ಇರುವುದು ಕಂಡು ಪದ್ಮಜಾ ಎನು ಪವನ್ ಯಾಕೆ ಒಂಥರಾ ಇದ್ದಿ ಎಂದಾಗ ಹೌದು ಅಮ್ಮ ಭವಾನಿ ಆಂಟಿಯ ಮನೆಗೆ ಹೋದ ಮೇಲೆ ಹೀಗಾಯಿತು ಎಂದಾಗ ಪದ್ಮಜಾಳಿಗೆ ಆಶ್ಚರ್ಯ ವಾಯಿತು ….. ಏನಾಯಿತು ಭವಾನಿ ಅಥವಾ ಶಮಿಕಾ ಎನಾದರೂ ನಿನಗೆ ಬೇಡದ ಮಾತನಾಡಿದರಾ……. ಎಂದು ಭಯದಿಂದ ಕೇಳಿದಾಗ ಇಲ್ಲ ಅಮ್ಮ ಅವರಿಬ್ಬರೂ ಎನೂ ಅಂದಿಲ್ಲ ಆದರೆ ನನಗೇಕೋ ಮನಸ್ಸು ತುಂಬಾನೇ ಬಡಿದು ಕೊಳ್ಳುತ್ತಿದ್ದೆ…… ಅವರಲ್ಲಿ ಎನು ಕೇಳಬೇಡಿ ಹಾಗೂ ಹೇಳಬೇಡಿ…..ಆ ವಿಷಯ ನಾನೇ ನಿಮಗೆ ಸಮಯ ಬಂದಾಗ ಹೇಳುತ್ತೇನೆ ಅಲ್ಲಿ ವರೆಗೆ ಏನನ್ನು ಕೇಳಬೇಡಿ ಎಂದಾಗ ಪದ್ಮಜಾಳಿಗೆ ಪೇಚಾಟ ವಾಯಿತು…… ಯಾಕೆ ಹೀಗೆ ಹೋಗುವಾಗ ಸರಿ ಇದ್ದ ಅವರ ಪರಿಚಯ ಆಗಿದ್ದು ಒಳ್ಳೆದು ಆಯಿತು …
ನಮಗೆ ಎಂದು ಇಲ್ಲಿ ಯಾರೂ ಇರಲಿಲ್ಲ ಎಂದು ಹೇಳಿದವನು ಅವನೇ ಮತ್ತೆ ಈಗ ಈ ರೀತಿ ಮಾತನಾಡುತ್ತಾನೆ…. ಭವಾನಿ ಅಂತಹ ಹೆಣ್ಣು ಅಲ್ಲ ಶಮಿಕಾ ಕೂಡ ನೇರ ನಡೆ ನುಡಿಯ ಹೆಣ್ಣು ಮಗಳಾಗಿ ಕಾಣುತ್ತಾಳೆ…. ಏನಾಯಿತು? ಪವನ್ ಇಲ್ಲಿತನಕ ಎನೂ ವಿಷಯ ಮುಚ್ಚಿಟ್ಟವನು ಅಲ್ಲ…..ಅವನ ಶಾಲೆ, ಕಾಲೇಜು, ಕೆಲಸ ಎಲ್ಲಾ ವಿಷಯಗಳು ಬಂದು ಹೇಳುತಿದ್ದ…. ಅವನಿಗೆ ನೋವು, ಬೇಸರ, ಸಿಟ್ಟು ,ಸಂತೋಷ ಎನೂ ಆದರೂ ಹೇಳುವ ಹುಡುಗ ಇವತ್ತು ಯಾಕೆ ಹೀಗೆ ಎಂದು ತುಂಬಾ ಯೋಚನೆ ಮಾಡಿದರು ಪದ್ಮಜಾ……
ಪವನ್ ಸ್ನಾನ ಮಾಡಿ ಊಟ ಬೇಡ ಅಮ್ಮ ಎಂದು ಬೇಗನೇ ಮಲಗಲು ಹೋದಾಗ ಸ್ವಲ್ಪ ಊಟ ಮಾಡಿ ಮಲಗು ಪವನ್ ಎಂದು ಅಮ್ಮ ನ ಮಾತಿಗೆ ಅವರು ಬೇಸರ ಮಾಡುತ್ತಾರೆ ಎಂದು ಸ್ವಲ್ಪ ಊಟ ಮಾಡಿ ಬಂದು ಮಲಗಿದ…… ಹೆಸರಿಗೆ ಮಲಗಿದ ಅಷ್ಟೆ! ಕಣ್ಣು ಮುಚ್ಚಿ ಆರತಿಯ ಮುಖ ಕಣ್ಣು ನಗು ನೆನಪಿಗೆ ತಂದುಕೊಂಡು ಯೋಚನೆ ಮಾಡಲು ಶುರು ಮಾಡಿದ…ಕಾಲೇಜಿನ ಜೀವನ ಇರಬಹುದು ಪೋಲೀಸ್ ಇಲಾಖೆಯಲ್ಲಿ ಕೆಲಸ ಸಿಕ್ಕಿದ ಸಮಯ ಇರಬಹುದು ಎಲ್ಲಿಯೂ ಹೆಣ್ಣನ್ನು ನೋಡಿದಾಗ ಮನಸ್ಸು ಈ ರೀತಿ ಚಂಚಲ ಆಗಿರಲಿಲ್ಲ….. ತುಂಬಾ ಚೆಲುವೆಯರು ಎಂದು ಅಂದುಕೊಂಡವರೂ ವೈಯಾರ ಮಾಡಿದರು ನಾನು ವಿಚಲಿತನಾಗಲಿಲ್ಲ…… ನಾನು ಇಲ್ಲಿತನಕ ಯಾವೊಬ್ಬ ಹೆಣ್ಣು ಹೆಂಗಸರಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೂಡ ತಮಾಷೆ ಕೀಟಲೆ ಕಿರುಕುಳ ನೀಡಿದವನು ಅಲ್ಲ.. ನಾನು ಬೆಳೆಯುತ್ತಾ ಅಕ್ಕಂದಿರ ನೋವು. ಅವರ ದಿನಚರಿ ಆಗುಹೋಗುಗಳನ್ನು ತಿಳಿದು ನೋಡಿ ಬೆಳೆದವನು ಹಾಗಾಗಿ ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಕಾಳಜಿ ನನಗೆ…..‌ಆದರೆ ಇವತ್ತು ಆರತಿಯನ್ನು ಕಂಡು ಯಾಕೆ ಈ ರೀತಿ ನೆನಪು ಬರುತ್ತಿದೆ…… ಆರತಿ ಎಂಬ ಹೆಸರೇ ಎಷ್ಟು ಮುದ್ದು ಆಗಿದೆ ಇನ್ನು ಅವಳು ರತಿಯೆ ಆಗಿದ್ದಾಳೆ..,……….. ಇದು ಆಕರ್ಷಣೆಯ ಅಥವಾ ನಾನು ಆ ಹೆಣ್ಣನ್ನು ಪ್ರೀತಿ ಮಾಡುತ್ತೇನಾ?……. ಪ್ರೀತಿ ಹುಟ್ಟಲು ಕಾರಣ ಇದೆಯಾ? ಕಾರಣ ಇದ್ದು ಪ್ರೀತಿ ಹುಟ್ಟಿದರೆ ಅದು ಪ್ರೀತಿಯಾ….‌‌…. ಒಮ್ಮೆ ನೋಡಿದ ಮಾತ್ರಕ್ಕೆ ಪ್ರೀತಿ ಹುಟ್ಟುತ್ತದಾ? ಮೊದಲು ಯಾರಾದರೂ ಪ್ರೀತಿ ಪ್ರೇಮ ಎಂದಾಗ ನಿಮಗೆ ಜವಾಬ್ದಾರಿ ಇಲ್ಲ ಅದಕ್ಕೆ ನೀವು ಪ್ರೀತಿ ಪ್ರೇಮ ಎಂದು ಸಮಯ ಹಾಳು ಮಾಡುವುದು…. ಒಳ್ಳೆಯ ಪುಸ್ತಕ ಓದಿ. ಆಗ ಮನಸ್ಸು ಉಲ್ಲಾಸದಿಂದ ಇರುತ್ತದೆ ಎಂದು ಬೇರೆಯವರಿಗೆ ಭಾಷಣ ಮಾಡಿದ ನಾನು ಇವತ್ತು ಎನೂ ಮಾಡುತ್ತಿದ್ದೇನೆ?‌‌.‌…..ಇಲ್ಲ ಎನಾದರೂ ಮದುವೆ ಅಂತ ಆದರೆ ಅವಳ ಜೊತೆ ಮಾತ್ರ! !……‌
ಅವಳು ನನ್ನನ್ನು ಪ್ರೀತಿ ಮಾಡದಿದ್ದರೆ!! ನಾನು ಬಲವಂತವಾಗಿ ಪ್ರೀತಿ ಮಾಡಲು ಅಥವಾ ಮದುವೆ ಮಾಡಲು ಹೇಳಿದರೆ ತಪ್ಪು ಅಲ್ವಾ……… ಅವಳು ಈಗಾಗಲೇ ಯಾರನ್ನಾದರೂ ಪ್ರೀತಿ ಮಾಡಿದ್ದರೆ ನಾನು ವಿನಃ ಕಾರಣ ಅವಳಿಗೆ ತೊಂದರೆ ನೀಡಿದಂತಾಗುತ್ತದೆ…. ಇಲ್ಲ ಅವಳು ಕೂಡ ನನ್ನನ್ನು ಆರಾಧನಾ ದ್ರಷ್ಟಿಯಿಂದ ನೋಡಿದ್ದಾಳೆ…… ಹುಡುಗ ಅಥವಾ ಹುಡುಗಿ ಒಬ್ಬರಿಗೊಬ್ಬರು ನೋಡಿದ ತಕ್ಷಣ ಅದು ಪ್ರೀತಿ ಎಂದು ಎನಿಸಿಕೊಳ್ಳುವುದು ಮೂರ್ಖತನ ಅಲ್ವಾ….. ಪವನ್ ಗೆ ಮೊದಲೊಮ್ಮೆ ಓದಿದ್ದು ನೆನಪಾಯಿತು ಮನಸ್ಸು ಗಾಳಿಗಿಂತ ವೇಗ ಎಂದು ಹೇಳುವುದು ಅದಕ್ಕೆ. ನಾನು ನನ್ನ ಮನಸ್ಸು ಎಲ್ಲ ರೀತಿಯ ಯೋಚನೆಯನ್ನು ಮಾಡಿತು…. ಎತ್ತ ಕಡೆ ತಿರುಗಿ ಮಲಗಿದರು ಆರತಿ ಕಣ್ಣ ಮುಂದೆ ಬಂದ ಹಾಗೆ ಅನಿಸುತಿತ್ತು….. ಅವಳ ಯೋಚನೆ ಬರಬಾರದು ಎಂದು ಬೇರೆ ಯೋಚನೆ ಮಾಡಿದರು ಆರತಿ ನಗುತ್ತಾ ಬಂದ ಹಾಗೆ ಅನಿಸುತ್ತದೆ……. ತುಂಬಾ ಸಮಯದ ಬಳಿಕ ಪವನ್ ನಿದ್ದೆಗೆ ಜಾರಿದ…….‌‌ಆರತಿಗೆ ಮದುವೆ ಆಗಿ ಮೂರು ವರ್ಷದ ಮಗಳು ಇರುವುದು ತಿಳಿದರೆ ಪವನ್ ನ ಪ್ರೀತಿ ಇರುತ್ತದಾ..‌‌.ಅಥವಾ ಆರತಿ ಇವನನ್ನು ಒಪ್ಪಿ ಕೊಳ್ಳುತ್ತಾಳ ಕಾಲವೇ ಉತ್ತರಿಸಬೇಕು!!!!

( ಮುಂದುವರಿಯುವುದು)

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *