November 24, 2024
2

ಮನೆಯಲ್ಲಿ ಏನಾದರೂ ಫಂಕ್ಷನ್ ಇದ್ದರೆ ಚಂದ್ರಹಾರ ಸ್ವೀಟ್ ಮಾಡಿ!

ಚಂದ್ರಹಾರ ಎನ್ನುವುದು ಕರ್ನಾಟಕ ಶೈಲಿಯ ಒಂದು ಸಿಹಿ ಪಾಕವಿಧಾನ. ಸಾಂಪ್ರದಾಯಿಕ ಸಿಹಿಯಾದ ಇದನ್ನು ಮದುವೆ, ಮುಂಜಿ, ನಾಮಕರಣಗಳಂತಹ ಶುಭ ಕಾರ್ಯದ ಸಮಯದಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ. ಕೆಲವು ಪ್ರದೇಶಗಳಿಗೆ ಅನುಗುಣವಾಗಿ ಈ ಸಿಹಿಯ ಮಾನ್ಯತೆ ಹಾಗೂ ತಯಾರಿಕೆಯಲ್ಲಿಯೂ ಭಿನ್ನತೆ ಪಡೆದುಕೊಳ್ಳುವುದು. ಈ ರುಚಿಕರವಾದ ಸಿಹಿಯನ್ನು ಹೇಗೆ ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದು? ಎನ್ನುವುದನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತೇವೆ.

(ಬಡಿಸುವ ಪ್ರಮಾಣ: 2)

ಪ್ರಮುಖ ಸಾಮಗ್ರಿ

  • 1/2 ಕಪ್‌ ಮಂದವಾದ ಹಾಲು

ಮುಖ್ಯ ಅಡುಗೆಗೆ

  • 1/2 ಕಪ್‌ ಸಕ್ಕರೆ
  • 1 ಕಪ್‌ ನೀರು
  • 1/2 ಲೀಟರ್‌ ಹಾಲು
  • 1 ಮುಷ್ಟಿಯಷ್ಟು ಮಿಶ್ರ ಡ್ರೈ ಫ್ರೂಟ್ಸ್
  • 1/2 ಕಪ್‌ ರವೆ ಉಪ್ಪಿಟ್ಟು
  • 1/4 ಕಪ್‌ ತುಪ್ಪ
  • 3/4 ಕಪ್‌ ಮೈದಾ
  • ಅಗತ್ಯ ತಕ್ಕಷ್ಟು ಲವಂಗ
  • 1 Pinch ಕೇಸರಿ
  • ಅಗತ್ಯ ತಕ್ಕಷ್ಟು ಏಲಕ್ಕಿ ಎಸೆನ್ಸ್

ಹೇಗೆ ಮಾಡುವುದು: ಮನೆಯಲ್ಲಿ ಏನಾದರೂ ಫಂಕ್ಷನ್ ಇದ್ದರೆ ಚಂದ್ರಹಾರ ಸ್ವೀಟ್ ಮಾಡಿ!

Step 2:

– ಹಿಟ್ಟಿಗೆ ಸ್ವಲ್ಪ ತುಪ್ಪ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ನಂತರ 10 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.

Step 3:

– ಒಂದು ಬಾಣಲೆಯಲ್ಲಿ ಹಾಲನ್ನು ಸೇರಿಸಿ, ಕುದಿಯಲು ಬಿಡಿ.- ಹಾಲು ಚೆನ್ನಾಗಿ ಕುದಿ ಬಂದು ಸ್ವಲ್ಪ ದಪ್ಪವಾದ ಸ್ಥಿರತೆ ಬರುವ ತನಕ ಕುದಿಸಿ.- ಬಳಿಕ ಮಂದಗೊಳಿಸಿದ ಹಾಲು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ, ಮಿಶ್ರಗೊಳಿಸಿ.

Step 4:

– ಹಾಲು ದಪ್ಪವಾದ ಸ್ಥಿರತೆ ಪಡೆದುಕೊಂಡ ಬಳಿಕ ಕೇಸರಿ ಎಳೆ, ಏಲಕ್ಕಿ ಪುಡಿ ಮತ್ತು ಒಣ ಹಣ್ಣುಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ಬಳಿಕ 2-3 ನಿಮಿಷಗಳ ಕಾಲ ಕುದಿಸಿ.

Step 5:

– ಈಗ ಕಲಸಿಕೊಂಡ ಮೈದಾ ಹಿಟ್ಟನ್ನು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿ.- ಆ ಉಂಡೆಯನ್ನು ಸಣ್ಣ ಸಣ್ಣ ಪುರಿಯಂತೆ ಲಟ್ಟಿಸಿ- ಬಳಿಕ ಅದನ್ನು ತ್ರಿಭುಜದ ಆಕ್ರತಿಯಲ್ಲಿ ಮಡಚಿ.- ಬಳಿಕ ಒಂದು ಲವಂಗದಿಂದ ತುದಿಯನ್ನು ಚುಚ್ಚಿ.- ಹೀಗೆ ಮಾಡಿದರೆ ಎಣ್ಣೆಯಲ್ಲಿ ಕರಿಯುವಾಗ ಬಿಟ್ಟುಕೊಳ್ಳುವುದಿಲ್ಲ.

Step 6:

– ಒಂದು ಬಾಣಲೆಯಲ್ಲಿ ಎಣ್ಣೆ ಸೇರಿಸಿ, ಬಿಸಿ ಮಾಡಿ.- ಬಿಸಿಯಾದ ಬಳಿಕ ಲಟ್ಟಿಸಿಕೊಂಡ ಚಂದ್ರಹಾರನ್ನು ಸೇರಿಸಿ.- ಎರಡು ಬದಿಯಲ್ಲಿ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ತಿರುಗಿದ ಬಳಿಕ ಎಣ್ಣೆಯಿಂದ ತೆಗೆಯಿರಿ.

Step 7:

– ಎಣ್ಣೆಯಲ್ಲಿ ಕರಿದ ಚಂದ್ರಹಾರವನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ.- ಸಿದ್ಧಪಡಿಸಿಕೊಂಡ ಸಿಹಿ ಹಾಲನ್ನು ಅದರ ಮೇಲೆ ಸ್ವಲ್ಪ ಸುರಿಯಿರಿ.- ಬಿಸಿ ಬಿಸಿಯಾದ ಸಿಹಿ ತಿಂಡಿಯನ್ನು ಸವಿಯಲು ನೀಡಿ.- ನಿಮ್ಮ ಆಯ್ಕೆಗೆ ಅನುಗುಣವಾಗಿ ತಣ್ಣನೆಯ ಹಾಲನ್ನು ಸಹ ಸೇರಿಸಿಕೊಂಡು ಸವಿಯಬಹುದು.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ.ಕ

Leave a Reply

Your email address will not be published. Required fields are marked *