ಅವಲಕ್ಕಿ ಒಗ್ಗರಣೆ ಇಲ್ಲಾಂದ್ರೆ ಮೊಸರು ಅವಲಕ್ಕಿ ಸೇವಿಸಿ, ಆರೋಗ್ಯ ವೃದ್ಧಿಸಿ!
ಅವಲಕ್ಕಿ ಒಗ್ಗರಣೆ ಅಥವಾ ಮೊಸರು ಅವಲಕ್ಕಿ ತಿಂದವರಿಗೆ ಗೊತ್ತು ಅದರ ರುಚಿ ಏನೆಂದು! ಇದು ಕೇವಲ ಬಾಯಿಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ಕೂಡ ಸಾಕಷ್ಟು ಲಾಭಗಳನ್ನು ತಂದುಕೊಡುತ್ತದೆ.
ಹುಟ್ಟುವ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧವರೆಗೂ ತಿನ್ನುವ ಆಹಾರ ಪದ್ಧತಿ ಮತ್ತು ಸೇವಿಸುವ ಆಹಾರದ ಪ್ರಮಾಣ ಸರಿ ಇರಬೇಕು ಎಂದು ಹೇಳಲಾಗುತ್ತದೆ. ಒಂದು ವೇಳೆ ಈ ಪ್ರಕ್ರಿಯೆಲ್ಲಿ ವ್ಯತ್ಯಾಸ ಕಂಡುಬಂದರೆ, ಆರೋಗ್ಯ ದಲ್ಲಿ ಹಲವಾರು ರೀತಿಯ ಬದಲಾವಣೆಗಳು ಕಂಡು ಬರಲು ಶುರುವಾಗುತ್ತದೆ ಜೊತೆಗೆ ಮೇಲಿಂದ ಮೇಲೆ ಆರೋಗ್ಯ ಸಮಸ್ಯೆಗಳು ಕೂಡ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಹೀಗಾಗಿ ಆರೋಗ್ಯಕರವಾದ ಹಾಗೂ ಪೌಷ್ಟಿಕ ಸತ್ವ ಒಳಗೊಂಡಿರುವ ಆಹಾರ ಪದ್ಧತಿಯನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಹೋದರೆ, ಆರೋಗ್ಯಕರವಾಗಿ ಜೀವನ ನಡೆಸಬಹುದು. ಬನ್ನಿ ಇಂದಿನ ಲೇಖನ ದಲ್ಲಿ ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಅವಲಕ್ಕಿಯಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಕಂಡು ಬರುತ್ತದೆ ಎನ್ನುವುದರ ಬಗ್ಗೆ ನೋಡುತ್ತಾ ಹೋಗೋಣ..
ಅವಲಕ್ಕಿ-ಆರೋಗ್ಯ ಗಟ್ಟಿ!
- ಅಡುಗೆಮನೆಯಲ್ಲಿಯೇ ಕಂಡು ಬರುವ ಕೆಲವೊಂದು ಪದಾರ್ಥ ಗಳನ್ನು ಬಳಸಿಕೊಂಡು ಬಹಳ ಬೇಗನೆ ಸುಲಭ ವಾಗಿ ಮಾಡಬಹುದಾದ ತಿಂಡಿ ಎಂದರೆ ಅದು ಅವಲಕ್ಕಿ ಒಗ್ಗರಣೆ! ಇದು ತಿನ್ನಲು ಕೂಡ ಬಲುರುಚಿ.
- ಅದರಲ್ಲೂ ಬೆಳಗಿನ ತಮ್ಮ ಬಿಡುವಿಲ್ಲದ ಸಮಯದಲ್ಲಿ ಬಹಳ ಬೇಗನೆ ಇದನ್ನು ರೆಡಿ ಮಾಡಿಕೊಳ್ಳಬಹುದು.
- ಪ್ರಮುಖವಾಗಿ ಬಾಯಿ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಪೌಷ್ಟಿಕ ಸತ್ವಗಳನ್ನು ಮತ್ತು ಅನೇಕ ಬಗೆಯ ಆರೋಗ್ಯ ಪ್ರಯೋಜನಗಳನ್ನು ಅವಲಕ್ಕಿ ನಮ್ಮ ದೇಹಕ್ಕೆ ಒದಗಿಸುತ್ತದೆ. ಹಾಗಾದ್ರೆ ಅಂತಹ ಆರೋಗ್ಯ ಪ್ರಯೋಜ ಗಳು ಯಾವುದು ಎನ್ನುವುದನ್ನು ನೋಡೋಣ..
ರಕ್ತಹೀನತೆ ಸಮಸ್ಯೆ ಇದ್ದವರಿಗೆ
- ನಮ್ಮ ದೇಹದಲ್ಲಿ ಕಬ್ಬಿಣದ ಅಂಶ ತುಂಬಾ ಮುಖ್ಯ. ಏಕೆಂದರೆ ಇದರ ಕೊರತೆ ಉಂಟಾದರೆ, ರಕ್ತಹೀನತೆ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇರುತ್ತದೆ.
- ಹೀಗಾಗಿ ಈ ಸಮಸ್ಯೆ ಉಂಟಾಗಬಾರದು ಎಂದರೆ, ಅವಲಕ್ಕಿಯನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳಬೇಕು. ಇದಕ್ಕೆ ಪ್ರಮುಖ ಕಾರಣ ಇದರಲ್ಲಿ ಕಂಡು ಬರುವ ಕಬ್ಬಿಣದ ಅಂಶ ಎಂದು ಹೇಳಬಹುದು.
- ಹೀಗಾಗಿ ಬೆಳಗ್ಗಿನ ಉಪಹಾರಕ್ಕೆ ಸ್ವಲ್ಪ ಅವಲಕ್ಕಿಯನ್ನು ನೆನೆಸಿ ಸೇವಿಸುವುದು, ಒಗ್ಗರಣೆ ಹಾಕಿ ಕೊಂಡು ತಿನ್ನು ವುದು ಇಲ್ಲಾಂದ್ರೆ ಅವಲಕ್ಕಿ ಉಪ್ಪಿಟ್ಟು ತಯಾರು ಮಾಡಿ ಕೊಂಡು ಸೇವಿಸುವ ಅಭ್ಯಾಸ ಮಾಡಿಕೊಂಡರೆ, ರಕ್ತ ಹೀನತೆ ಸಮಸ್ಯೆ ನಿಧಾನಕ್ಕೆ ದೂರವಾಗುತ್ತಾ ಬರುತ್ತದೆ.
ತೂಕ ಇಳಿಸುವವರಿಗೆ
- ದೇಹದ ತೂಕ ಇಳಿಸುವವರಿಗೆ, ಇದೊಂದು ಹೇಳಿ ಮಾಡಿಸಿದ ಆಹಾರ ಎಂದರೆ ತಪ್ಪಾಗಲಾರದು! ಇದಕ್ಕೆ ಪ್ರಮುಖ ಕಾರಣ ಇದರಲ್ಲಿ ಕಂಡು ಬರುವ ಗ್ಲೂಟನ್ ಅಂಶದ ಪ್ರಮಾಣ ಹಾಗೂ ಕ್ಯಾಲೋರಿ ಅಂಶಗಳು ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ.
- ಹೀಗಾಗಿ ದೇಹದ ತೂಕ ಕಡಿಮೆ ಮಾಡಲು ಬಯಸು ವವರು, ಬೊಜ್ಜಿನ ಸಮಸ್ಯೆಯನ್ನು ಎದುರಿಸುವವರು, ಕೆಟ್ಟ ಕೊಲೆಸ್ಟ್ರಾಲ್ ಅಂಶದಿಂದ ಬಳಲುತ್ತಿರುವವರು, ತಮ್ಮ ಆಹಾರ ಪದ್ಧತಿಯಲ್ಲಿ ಅವಲಕ್ಕಿ ಬಳಸಿ ಕೊಂಡರೆ ಬಹಳ ಒಳ್ಳೆಯದು
ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ದೂರಮಾಡುತ್ತದೆ
- ಪ್ರಮುಖವಾಗಿ ಅವಲಕ್ಕಿಯಲ್ಲಿ ನಾರಿನಾಂಶದ ಪ್ರಮಾಣ ಹೆಚ್ಚಾಗಿ ಕಂಡು ಬರುವುದರಿಂದ, ಜೀರ್ಣ ಪ್ರಕ್ರಿಯೆ ಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ.
- ಪ್ರಮುಖವಾಗಿ ಅಜೀರ್ಣ ಹಾಗೂ ಮಲಬದ್ಧತೆಯಂತಹ ಸಮಸ್ಯೆ ಯನ್ನು ಹಾಗೂ ಇನ್ನಿತರ ಆರೋಗ್ಯ ಸಮಸ್ಯೆ ಗಳನ್ನು ಸರಿಪಡಿ ಸುತ್ತದೆ. ಇದಕ್ಕಾಗಿ ಅವಲಕ್ಕಿ ಜೊತೆಗೆ ಅರ್ಧ ಕಪ್ ಮೊಸರು ಸೇವನೆ ಮಾಡಿದರೆ ಒಳ್ಳೆಯದು.
ಸಕ್ಕರೆಕಾಯಿಲೆ ಇದ್ದವರಿಗೂ ಒಳ್ಳೆಯದು
- ಮೊದಲೇ ಹೇಳಿದ ಹಾಗೆ ಅವಲಕ್ಕಿಯಲ್ಲಿ ನಾರಿನಾಂಶದ ಜೊತೆಗೆ ಮ್ಯಾಂಗನೀಸ್ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳು ಕಂಡು ಬರುವುದರ ಜೊತೆಗೆ ಗ್ಲೈಸೆಮಿಕ್ ಸೂಚ್ಯಂಕ ತುಂಬಾನೇ ಕಡಿಮೆ ಪ್ರಮಾಣದಲ್ಲಿದೆ.
- ಹೀಗಾಗಿ ಮಧುಮೇಹ ಇರುವವರಿಗೆ ಮತ್ತು ಬೊಜ್ಜಿನ ಸಮಸ್ಯೆ ಇರುವವರಿಗೆ ಅವಲಕ್ಕಿ ತುಂಬಾನೇ ಅನು ಕೂಲಕಾರಿ.
- ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಸಂಗತಿ ಏನೆಂದರೆ ಅವಲಕ್ಕಿಯಲ್ಲಿ ಕಂಡುಬರುವ ಅಪಾರ ಪ್ರಮಾಣದ ನಾರಿನಾಂಶವು ನಾವು ಸೇವನೆ ಮಾಡುವ ಆಹಾರದಲ್ಲಿ ಸಿಗುವಂತಹ ಸಕ್ಕರೆ ಪ್ರಮಾಣವನ್ನು ನಿಧಾನವಾಗಿ ರಕ್ತ ಸಂಚಾರಕ್ಕೆ ಬಿಡುಗಡೆ ಮಾಡುತ್ತದೆ.
- ಇದರಿಂದ ಆಹಾರ ಸೇವನೆ ಮಾಡಿದ ತಕ್ಷಣ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಕಾಣದೆ ನಿಯಂತ್ರಣದಲ್ಲಿರುತ್ತದೆ.
ಮೂಳೆಗಳ ಆರೋಗ್ಯಕ್ಕೆ
- ಮೂಳೆಗಳನ್ನು ಬಲ ಪಡಿಸಲು ಕ್ಯಾಲ್ಸಿಯಂ ಭರಿತ ಆಹಾರ ಗಳನ್ನು ಹೆಚ್ಚು ಸೇವನೆ ಮಾಡಬೇಕು ಎನ್ನು ವುದನ್ನು ನಾವು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದೇವೆ ಅಲ್ಲವೆ?
- ಉದಾಹರಣೆಗೆ ಪ್ರತಿದಿನ ಒಂದು ಲೋಟ ಹಾಲು ಕುಡಿ ಯುವುದು, ಊಟದ ಜೊತೆಗೆ ಒಂದು ಕಪ್ ಮೊಸರು ಸೇವನೆ ಮಾಡು ವುದು ಇತ್ಯಾದಿ.
- ಹೀಗೆ ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಆಹಾರಗಳನ್ನು ಸೇವನೆ ಮಾಡುವಂತೆ ಹಿರಿಯರು ಕೂಡ ನಮಗೆ ಸಲಹೆ ಗಳನ್ನು ನೀಡುತ್ತಿದ್ದರು. ಈ ನಿಟ್ಟಿನಲ್ಲಿ ನೋಡುವುದಾ ದರೆ, ಅವಲಕ್ಕಿ ತುಂಬಾನೇ ಸಹಾಯಕ್ಕೆ ಬರುತ್ತದೆ.
- ಇದಕ್ಕೆ ಪ್ರಮುಖ ಕಾರಣ ಅವಲಕ್ಕಿಯಲ್ಲಿ ಕಂಡುಬರುವ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅಂಶ ಆರೋಗ್ಯಕರ ವಾದ ಮೂಳೆಗಳನ್ನು ಹೊಂದಲು ಮತ್ತು ಸಂಧಿವಾತ, ಕೀಲು ನೋವು, ಮಂಡಿ ನೋವಿನಂತಹ ತೊಂದರೆಗ ಳಿಂದ ಪಾರಾಗಲು ಸಹಾಯ ಮಾಡುತ್ತದೆ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: VK