January 18, 2025
bv 1

ಧೂಮಪಾನ-ತಂಬಾಕು ಬಿಟ್ಟರೆ, ನಿಮ್ಮ ಆಯಸ್ಸು ಇನ್ನೂ ಹೆಚ್ಚಾಗುತ್ತದೆ

ಧೂಮಪಾನ ಹಾಗೂ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದೇ ಇದೆ. ಈ ಅಭ್ಯಾಸ ಇರುವವರು ಹೆಚ್ಚಾಗಿ, ಸಾಮಾನ್ಯವಾಗಿ ಶ್ವಾಸಕೋಶದ ಸಮಸ್ಯೆ ಹಾಗೂ ಕ್ಯಾನ್ಸರ್‌ ನಂತಹ ಕಾಯಿಲೆಗೆ ಬೇಗನೇ ಗುರಿಯಾಗಿ ಬಿಡುತ್ತಾರೆ! ಈ ಬಗ್ಗೆ ಆರೋಗ್ಯ ತಜ್ಞರು ಕೂಡ, ಜನರಿಗೆ ಎಚ್ಚರಿಸುತ್ತಾರೆ. ಆದಷ್ಟು ಈ ಕೆಟ್ಟ ಚಟದಿಂದ ದೂರವಿರಲು, ಸಲಹೆಗಳನ್ನು ನೀಡುತ್ತಾರೆ.

ಆದರೆ ವಿಪರ್ಯಾಸ ಏನೆಂದರೆ ಧೂಮಪಾನ ಹಾಗೂ ತಂಬಾಕು ಮಾಡುವುದು ಆರೋಗ್ಯಕ್ಕೆ ಮಾರಕ ಎಂದು ಗೊತ್ತಿದ್ದರೂ ಸಹ ಇಂದಿನ ಯುವಜನತೆ ಇದರ ದಾಸ್ಯಕ್ಕೆ ಒಳಗಾಗಿ ತಮ್ಮ ಜೀವನವನ್ನು ತಾವೇ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಸಮಸ್ಯೆಗೆ ಕೇವಲ ಜನರನ್ನೇ ದೂರಿದರೆ, ಪ್ರಯೋಜನವಿಲ್ಲ, ಸರ್ಕಾರ ಕೂಡ, ಈ ಉತ್ಪನ್ನದಿಂದ ತನ್ನ ಬೊಕ್ಕಸಕ್ಕೆ, ತೆರಿಗೆ ಮೂಲಕ ಹಣ ಹರಿದುಬರುವುದರಿಂದ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದು, ನಿಜಕ್ಕೂ ಬೇಜಾರಿನ ಸಂಗತಿ. ಇನ್ನೂ ಆಘಾತಕಾರಿ ಸಂಗತಿ ಏನೆಂದರೆ, ಇಡೀ ವಿಶ್ವಕ್ಕೆ ಹೋಲಿಸಿದರೆ ನಮ್ಮ ಭಾರತ ಧೂಮಪಾನಕ್ಕೆ ಸಂಬಂಧಪಟ್ಟ ಉತ್ಪನ್ನಗಳನ್ನು ತಯಾರು ಮಾಡುವಲ್ಲಿ ಮೂರನೆಯ ದೇಶವಾಗಿದೆಯಂತೆ!

ಅದು ಏನೇ ಇರಲಿ, ನಮ್ಮ ಬುದ್ಧಿ ನಮ್ಮ ಕೈಯಲ್ಲಿ ಇರಬೇಕು. ಈ ಕೆಟ್ಟ ಅಭ್ಯಾಸವನ್ನು ಬಿಟ್ಟು, ಆರೋಗ್ಯಕಾರಿ ಜೀವನ ನಡೆಸಬೇಕು. ಇದರ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಸಲುವಾಗಿ ಇದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನ ಎಂದು ಆಚರಿಸಲಾಗುವುದು.

ದೀರ್ಘಕಾಲದ ಕಾಯಿಲೆಗಳ ಅಪಾಯ ಹೆಚ್ಚಿರುತ್ತದೆ!

ದೀರ್ಘಕಾಲದ ಕಾಯಿಲೆಗಳು ಎಂದು ಕರೆಸಿಕೊಳ್ಳುವ, ಅಪಾಯಕಾರಿ ಕಾಯಿಲೆ ಎಂದ ಹೇಳಲಾ ಗುವ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು, ಶ್ವಾಸಕೋಶದ ಸಮಸ್ಯೆಗಳು, ಪಾರ್ಶ್ವವಾಯು ಸಮಸ್ಯೆ, ಕ್ಯಾನ್ಸರ್ ಅಧಿಕ ರಕ್ತದೊತ್ತ ಡದ ಸಮಸ್ಯೆ, ಕಣ್ಣಿನ ಸಮಸ್ಯೆಗಳು, ಹಲ್ಲು ಮತ್ತು ವಸಡುಗಳ ಸಮಸ್ಯೆಗಳಿಗೂ ಕೂಡ ಕಾರಣವಾಗುತ್ತದೆ.

ತಂಬಾಕು ಸೇವನೆ

  • ಮಾರುಕಟ್ಟೆಗಳಲ್ಲಿ ಇಂದು ತಂಬಾಕಿನ ಉತ್ಪನ್ನಗಳು ವಿವಿಧ ಬಗೆಗಳಲ್ಲಿ, ಸುಲಭವಾಗಿ ಕೈಗೆ ಟಕುವ ಬೆಲೆಯಲ್ಲಿ ಸಿಗುತ್ತಿವೆ. ಜನರು ಅದರಲ್ಲೂ ಹದಿಯರೆಯದವರು, ಇಂತಹ ಉತ್ಪನ್ನಗಳಿಗೆ ಮನಃಸ್ಪೂರ್ತಿಯಾಗಿ ಮಾರು ಹೋಗಿ ಬಿಟ್ಟಿದ್ದಾರೆ. ಇದರ ಪರಿಣಾಮವಾಗಿ, ದಿನಕ್ಕೆ ಏನಿಲ್ಲ ಅಂದರೂ ನಾಲ್ಕೈದು ಬಾರಿ, ತಂಬಾಕನ್ನು ಬಾಯಿಗೆ ಹಾಕಿ ಕೊಂಡು ಜಗಿಯುತ್ತಿರುವುದರಿಂದ
  • 90% ಜನರಿಗೆ ಬಾಯಿ ಕ್ಯಾನ್ಸರ್ ಸಮಸ್ಯೆ ಕಂಡು ಬರುತ್ತಿದೆಯಂತೆ! ಒಂದ ಸಂಶೋಧನೆಯಲ್ಲಿ ಹೇಳುವ ಪ್ರಕಾರ ಭಾರದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಹಚ್ಚಿನ ಸಂಖ್ಯೆಯಲ್ಲಿ, ಅದರಲ್ಲೂ ವಯಸ್ಕ ರು, ಈ ತಂಬಾಕು ಸೇವನೆಯ ಪರಿಣಾಮವಾಗಿ, ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರಂತೆ!

ಸಂಶೋಧನೆಗಳು ಹೇಳುವ ಪ್ರಕಾರ 

  • ಧೂಮಪಾನದಲ್ಲಿ ಆರೋಗ್ಯವನ್ನು ಕೆಡಿಸುವ ತಂಬಾಕು ಇರುವುದರಿಂದ, ಇದನ್ನು ಸೇದುವ ಸಮಯದಲ್ಲಿ, ಇದರಿಂದ ಬಿಡುಗಡೆ ಆಗುವ ಹೊಗೆಯು, ನೇರವಾಗಿ ಶ್ವಾಸಕೋಶಕ್ಕೆ ದಾಳಿ ಮಾಡುತ್ತದೆ. ಇಲ್ಲಿ ಮುಖ್ಯವಾಗಿ ಗಮನ ಹರಿಸಬೇಕಾಗಿರುವುದು ಏನೆಂದರೆ, ಇಲ್ಲಿ ಧೂಮಪಾನ ಅಥವಾ ಸ್ಮೋಕಿಂಗ್ ಮಾಡುವಾಗ, ಕಾರ್ಸಿ ನೋಜನ್ ಎಂಬ ಮಾರಕ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇವುಗಳು ನೇರವಾಗಿ ನಮ್ಮ ರಕ್ತದ ಹರಿವಿನಲ್ಲಿ ಸೇರಿಕೊಂಡು, ಮುಂದಿನ ದಿನಗಳಲ್ಲಿ ದೀರ್ಘಕಾಲದವರೆಗೆ ಕಾಡುವ ಖತರ್ನಾಕ್ ಕಾಯಿಲೆಗಳು, ನಮ್ಮ ಆರೋಗ್ಯ ದಲ್ಲಿ ಸೇರಿಕೊಳ್ಳಲು ಸಹಾಯ ಮಾಡುತ್ತದೆ.
  • ಇನ್ನೂ ಆತಂಕ ಪಡುವ ಸಂಗತಿ ಏನೆಂದರೆ, ಶ್ವಾಸಕೋಶದ ಕ್ಯಾನ್ಸರ್ ನಂತಹ ಕಾಯಿಲೆಗಳು ಕಂಡು ಬಂದು, ಮನುಷ್ಯನ ಪ್ರಾಣಕ್ಕೆ ಆಪತ್ತು ತಂದೊಡ್ಡುತ್ತದೆಯಂತೆ! ಇದರ ಜೊತೆಗೆ ನಿರಂತ ರವಾಗಿ ಧೂಮಪಾನ ಮಾಡು ವವರು, ಮುಂದಿನ ದಿನಗಳಲ್ಲಿ ಹೊಟ್ಟೆ, ಲಿವರ್ ಕ್ಯಾನ್ಸರ್‌ಗೆ ಗುರಿಯಾಗುವ ಸಂಭವ ಹೆಚ್ಚಿರುತ್ತದೆ ಯಂತೆ. ಅದ ರಲ್ಲೂ ಮುಖ್ಯವಾಗಿ ಬಾಯಿ, ಗಂಟಲು ಕ್ಯಾನ್ಸರ್ ಹೆಚ್ಚಾಗಿ, ಸಿಗರೇಟ್ ಬಿಟ್ಟು ಇರಲು ಸಾಧ್ಯವೇ ಇಲ್ಲ ಎನ್ನುವ ವರಲ್ಲಿ ಈ ಖತರ್ನಾಕ್ ಕಾಯಿಲೆಗಳು, ಹೆಚ್ಚಾಗಿ ಕಂಡುಬರುತ್ತದೆ ಎಂದು ಹೇಳಬಹುದು.

 

ಹದಿಹರಿಯದವರು ಈ ವಿಷ್ಯದಲ್ಲಿ ಎಚ್ಚರಿಕೆ ವಹಿಸಿದರೆ ಒಳ್ಳೆಯದು..

  • ಇನ್ನು ಸಂಶೋಧಕರು ಹಾಗೂ ಆರೋಗ್ಯ ತಜ್ಞರು ಹೇಳುವ ಪ್ರಕಾರ ಜಾಹೀರಾತು ಏಜೆನ್ಸಿ ಯವರು ತಂಬಾಕು ಬಳಕೆಯ ಉತ್ಪನ್ನಗಳನ್ನು ಉತ್ತೇಜಿಸದಂತೆ, ಹಾಗೂ ಇಂತಹ ಉತ್ಪನ್ನಗಳು ಹೆಚ್ಚು ಪ್ರೋತ್ಸಾಹ ನೀಡಬಾರದು. ಅಷ್ಟೇ ಅಲ್ಲದೆ ಸಾಮಾಜಿಕ ಮಾಧ್ಯಮಗಳು ಕೂಡ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು.
  • ಯಾಕೆಂದರೆ, ಇಂತಹ ಕಟ್ಟ ಚಟಕ್ಕೆ ಹದಿಹರೆಯದವರೇ ಗುರಿಯಾಗಿ, ತಮ್ಮ ಬದುಕನ್ನು ಹಾಳು ಮಾಡಿಕೊಂಡಿ ರುವ, ಸಾಕಷ್ಟು ನಿದರ್ಶನ ಗಳು ನಮ್ಮ ಕಣ್ಣ ಮುಂದೆಯೇ ನಡೆದುಹೋಗಿವೆ.
  • ಇನ್ನೂ ದುಃಖಕರ ಸಂಗತಿಗಳು ಏನೆಂದರೆ, ಒಂದು ಸಂಶೋಧನೆಯ ಪ್ರಕಾರ 29% ಯುವ ವಯಸ್ಕರು ಸಿಗರೇಟ್‌ ಸೇದುವ ಅಭ್ಯಾಸ ಮಾಡಿಕೊಂಡಿರುವುದರಿಂದ, ಅವರು 35-45 ವರ್ಷಕ್ಕೆ ಕಾಲಿಡುವಾಗ ದೀರ್ಘಕಾಲದ ಸಮಸ್ಯೆಗಳಾದ ಶ್ವಾಸಕೋಶದ ಸಮಸ್ಯೆ ಹಾಗೂ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ಗುರಿಯಾಗುವ ಅಪಾಯ ಹೆಚ್ಚಿರುತ್ತದೆಯಂತೆ!

ಒಬ್ಬರಿಂದ ಹಲವರಿಗೆ ಸಮಸ್ಯೆ!!

ಇನ್ನೂ ಆತಂಕಕಾರಿ ಸಂಗತಿ ಏನೆಂದರೆ, ಸ್ಮೂಕಿಂಗ್ ಮಾಡುವವರು, ಬಿಡುವ ಹೊಗೆಯನ್ನು ಇನ್ನೊಬ್ಬರು ಸೇವನೆ ಮಾಡುವ ಪರಿಣಾಮವಾಗಿ, ಅಂದರೆ ಉಸಿರಾಟದ ಮೂಲಕ, ಅವರ ದೇಹದೊಳಗೆ ಸೇರಿಕೊಳ್ಳುವುದರ ಪರಿಣಾಮ ವಾಗಿ, ಇದರಿಂದಾಗಿ ಅವರಿಗೂ ಕೂಡ, ಆರೋಗ್ಯ ಸಮಸ್ಯೆಗಳು ಬರುವ ಅಪಾಯ ಹೆಚ್ಚಿರುತ್ತದೆ.

ಕೊನೆಮಾತು

  • ಒಂದು ವೇಳೆ ಈಗಾಗಲೇ ನಿಮಗೆ, ಸ್ಮೋಕಿಂಗ್ ಮಾಡುವ ಅಭ್ಯಾಸ ಇದ್ದರೆ, ಮೊದಲು ನಿಮ್ಮನ್ನೇ ನಂಬಿರುವ ನಿಮ್ಮ ಕುಟುಂಬ ವರ್ಗದವರ ಬಗ್ಗೆ ಸ್ವಲ್ಪ, ಆಲೋಚೆಯನ್ನು ಮಾಡಿ. ಒಮ್ಮೆಲೆ, ಇದನ್ನು ಬಿಡಲು ಸಾಧ್ಯವಿಲ್ಲ ದಿದ್ದರೂ ಕೂಡ, ಕ್ರಮೇಣವಾಗಿ ಇದನ್ನು ಕಡಿಮೆ ಮಾಡಿಕೊಲ್ಳುವ ಕಡೆ ಗಮನಹರಿಸಿ.
  • ಆದಷ್ಟು ಬೇರೆ ಬೇರೆ ಕಾರ್ಯ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ತಲೆಯಲ್ಲಿ ಈ ಕಟ್ಟ ಚಟ ಬರದೇ ಇರುವ ಹಾಗೆ ನೋಡಿಕೊಳ್ಳಿ.
  • ಧೂಮಪಾನದ ಹೊಗೆ ಎಷ್ಟು ಅಪಾಯಕಾರಿ ಎಂದರೆ, ನ್ಯುಮೋನಿಯಾ, ಬ್ರಾಂಕೈಟಿಸ್‍ನಂತಹ ಉಸಿರಾಟದ ಸೋಂಕು, ಅಸ್ತಮ, ದೀರ್ಘಕಾಲದವರೆಗೆ ಕಾಡುವ ಸಮಸ್ಯೆಗಳಾದ, ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು, ಅಧಿಕ ರಕ್ತದೊತ್ತಡದ ಸಮಸ್ಯೆ, ಹೀಗೆ ಅನೇಕ ಆರೋಗ್ಯ ಸಮಸ್ಯೆ ಗಳು ನಿಮಗೆ ಮಾತ್ರವಲ್ಲದೆ, ನಿಮ್ಮಿಂದಾಗಿ ನಿಮ್ಮವರಿಗೂ ಬರುತ್ತದೆ. ಹಾಗಾಗಿ ಆರೋಗ್ಯವನ್ನು ಹಾಳುಮಾಡುವ ಈ ಧೂಮಪಾನವನ್ನು ಇಂದೇ ಬಿಡಲು ಪ್ರಯತ್ನಿಸಿ. ಇದರಿಂದ ಮುಂದಿನ ದಿನಗಳಲ್ಲಿ, ಯಾವುದೇ ಕಾಯಿಲೆ, ನಿಮ್ಮನ್ನು ಆವರಿಸದೆ, ನೀವು ಖುಷಿಯಾಗಿ ಇರಬಹುದು, ಹಾಗೂ ನಿಮ್ಮನ್ನು ನಂಬಿರುವ ಕುಟುಂಬ ಕೂಡ ಖುಷಿಯಾಗಿರಲು ಸಾಧ್ಯವಾಗುತ್ತದೆ.

ಸಂಗ್ರಹ : ಶ್ರೀಪಾಲ್ ಭಂಡಾರಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *