ದಕ್ಷಿಣ ಕನ್ನಡದ ಅದರಲ್ಲೂ ಭಂಡಾರಿ ಸಮಾಜದ ಹಿರಿಯ ಬರಹಗಾರ ಕೊಳಕ್ಕೆ ಇರ್ವತ್ತೂರು ಗೋವಿಂದ ಭಂಡಾರಿಯವರು ಬರೆದು ಪ್ರಕಟಿಸಿದ “ನನ್ನ ತುಲುನಾಡು ನನಗಾಗಿ-1” ಎಂಬ ಪುಸ್ತಕವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಜನವರಿ 25 ರ ಮಂಗಳವಾರ ದಿವ್ಯಹಸ್ತದಿಂದ ಬಿಡುಗಡೆ ಮಾಡಿದರು.
ವಿಜಯಾ ಬ್ಯಾಂಕಿನಲ್ಲಿ ವೃತ್ತಿಜೀವನವನ್ನು ಆರಂಭಿಸಿದ ಕಾರ್ಕಳ ಕೊಳಕ್ಕೆಇರ್ವತ್ತೂರು ಗೋವಿಂದ ಭಂಡಾರಿಯವರು ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿ ಮೇನೇಜರ್ ಆಗಿ ನಿವೃತ್ತಿಯನ್ನು ಹೊಂದಿದ್ದು ,ಆರಂಭದ ದಿನದಿಂದಲೂ ತನ್ನ ಪ್ರವೃತ್ತಿಯಾದ ಕತೆ ಕವನ ಮತ್ತು ಲೇಖನ ಬರೆಯುವುದು ಇವರ ಹವ್ಯಾಸ.
ಇವರು ಮೊದಲು ಬರೆದು ಪ್ರಕಟಿಸಿದ “ನನ್ನ ತುಲುನಾಡು ನನಗಾಗಿ-1” ಪುಸ್ತಕವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ ವೀರೇಂದ್ರ ಹೆಗ್ಗಡೆ ಅವರ ದಿವ್ಯ ಹಸ್ತದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿ ಪುಸ್ತಕದ ಐವತ್ತೈದು ಲೇಖನಗಳನ್ನು ವೀಕ್ಷಣೆ ಮಾಡಿ ಶುಭ ಹಾರೈಸಿರುವುದು ವಿಶೇಷ .ಇದರ ಮುಂದಿನ ಭಾಗ- 2 ಶೀಘ್ರದಲ್ಲಿ ಪ್ರಕಟಣೆಯಾಗಲಿದೆ ಎನ್ನುತ್ತಾರೆ ಗೋವಿಂದ ಭಂಡಾರಿ.
ಇವರು ಬರೆದ ಕಥೆ ಕವನ ಲೇಖನಗಳು ಭಂಡಾರಿ ವಾರ್ತೆ ವೆಬ್ ಸೈಟ್ , ಜಯಕಿರಣ ದಿನ ಪತ್ರಿಕೆ , ಕಚ್ಚೂರು ವಾಣಿ ಮಾಸಪತ್ರಿಕೆ , ಕಾರ್ಕಳದ ಮಾಧ್ಯಮ ಬಿಂಬ ವಾರಪತ್ರಿಕೆ , ಹೊಸ ಅಂಗಣ , ತುಳು ಪತ್ರಿಕೆಗಳು , ಪ್ರತಿ ಲಿಪಿ ಸಂಭ್ರಮ್ ಬ್ಲಾಗ್ ಸ್ವಾಟ್ ಗಳಲ್ಲಿ 250 ಕ್ಕೂ ಮೇಲ್ಪಟ್ಟು ಲೇಖನಗಳು ಈಗಾಗಲೇ ಪ್ರಕಟಣೆ ಯಾಗಿದೆ.
“ತಮೆಲ್” ತಮಿಲುನಾಡು ಆದರೆ “ಲೆಂಕಿರಿ”ಶ್ರೀಲಂಕಾ ಆಯಿತು,ಪನೊಲಿ ಮರದ ಅಳಲು,ತುಳು ತಪ್ಪು ತುಲು , ತಂಬಿಲವೇ ತಾಂಬೂಲಂ , ಪನಿಯಾರವೇ ಪ್ರಸಾದಂ , ಆಟಿ ತಿಂಗಳ ಪಾಲೆ ಮದ್ದು , ದೇವ ಆರಾಧನೆಯಲ್ಲಿ ಪ್ರಕೃತಿಯ ಆರಾಧನೆ , ತಾಲಿಯೆ ತಪ್ಪು , ಪುಚ್ಚೆ (ಬೆಕ್ಕು ಮತ್ತು ಜಡೆ) ಪೆಲತ್ತರಿ- ತಿಮ್ಮನ ಪೆಲತ್ತರಿಯ ಪ್ರಬಂಧಕ್ಕೆ ನೀವೇ ಅಂಕ ಕೊಡಬೇಕು , ತುಲುನಾಡು ಸೃಷ್ಟಿಸಿದ ಕುಡರಿ ಪರಶುರಾಮನದ್ದಲ್ಲ ಮುಂತಾದ ಲೇಖನಗಳು ಈಗಾಗಲೇ ಭಂಡಾರಿ ವಾರ್ತೆಯಲ್ಲಿ ಪ್ರಕಟಣೆಯಾಗಿದೆ.
ಕಾರ್ಕಳ ಇರ್ವತ್ತೂರು ಶ್ರೀ ಬಾಬಣ್ಣ ಭಂಡಾರಿ ಮತ್ತು ದಿವಂಗತ ಪೊನ್ನಕ್ಕ ಭಂಡಾರಿ ದಂಪತಿಯ ಪುತ್ರ ಐ.ಜಿ.ಭಂಡಾರಿ . ಇವರು ತುಲುನಾಡ್ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ .
ಗೋವಿಂದ ಭಂಡಾರಿಯವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಅವಕಾಶ ದೊರೆಯಲಿ ಎಂಬುದೇ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರೈಕೆ.
– ಭಂಡಾರಿ ವಾರ್ತೆ