September 20, 2024

ಗಸ್ಟ್ 15 ,1947 ರಂದು ನಮ್ಮ ದೇಶ ಆಂಗ್ಲರ ನೂರೈವತ್ತು ವರ್ಷಗಳ ದಾಸ್ಯತ್ವದಿಂದ ಬಿಡುಗಡೆ ಹೊಂದಿತು.ಅ ಸವಿನೆನಪಿಗಾಗಿ ನಾವು ಪ್ರತಿ ವರ್ಷ ಆಗಸ್ಟ್ ಹದಿನೈದರಂದು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸುತ್ತೇವೆ.ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಮೂಲಕ ಗಳಿಸಿದ ಸ್ವಾತಂತ್ರ್ಯವನ್ನು ಸಂಭ್ರಮಿಸಿ,ಆ ದಿನ ಮಹಾತ್ಮರ,ಹುತಾತ್ಮರ ಸ್ಮರಣೆ ಮಾಡಿ ಅವರಿಗೆ ಗೌರವ ಸಮರ್ಪಿಸುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯವೂ ಹೌದು.


ಒಂದನೇ ಕ್ಲಾಸಿನಿಂದ ನಮ್ಮ ಓದು ಮುಗಿಯುವವರೆಗೂ ಶಾಲೆ ಕಾಲೇಜುಗಳಲ್ಲಿ ತಪ್ಪದೇ ಆಚರಿಸುವ ದಿನ ಒಂದಿದ್ದರೆ ಅದು ಸ್ವಾತಂತ್ರ್ಯ ದಿನ ಮಾತ್ರ.ಶಾಲೆಯಲ್ಲಿ ಇರುವಾಗಲಂತೂ ಅತಿಥಿಗಳ ಉದ್ದುದ್ದ ಭಾಷಣ ಕೇಳಿ ನಿದ್ದೆ ಮಾಡಿದ್ದೇ ಮಾಡಿದ್ದುˌ,ಅವರ ಮಾತು ಸ್ವಲ್ಪ ಸಹ ಅರ್ಥವಾಗಿರಲಿಲ್ಲ.ಆದರೆ ಈಗ ನಾವು ಬೆಳೆದಿದ್ದೇವೆ,ಸ್ವಾತಂತ್ರ್ಯ ದಿನದ ಮಹತ್ವ ತಿಳಿದಿದೆ.ಆದರೂ ಕೆಲವರು ಸ್ವಾತಂತ್ರ್ಯ ದಿನದ ಮಹತ್ವ ಅರಿಯದೇ ಅಬ್ಬಾ! ರಜೆ ಸಿಕ್ಕಿತು ಎಲ್ಲಾದರೂ ಸುತ್ತಾಡಬಹುದು ಎಂದು ಯೋಚಿಸುವವರೂ ಇದ್ದಾರೆ.


ಭಾರತ ಸ್ವಾತಂತ್ರವಾಗುವ ಮೊದಲು ಆನೇಕರು ನಮ್ಮ ದೇಶವನ್ನು ಆಳಿದರು.ವ್ಯಾಪಾರ ಮಾಡುವ ನಿಮಿತ್ತ ಬಂದ ಬೆರಳಿಣಿಕೆಯ ಆಂಗ್ಲರು ಲಕ್ಷಗಟ್ಟಲೆ ಜನರಿದ್ದ ಭಾರತವನ್ನು ನೂರೈವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಆಳಿದರು.ಎಷ್ಟೋ ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ದೊರೆಯಿತು.ಆದರೆ ಪ್ರಸ್ತುತ ನಮ್ಮ ದೇಶದಲ್ಲಿ ಯಾವ ರೀತಿಯ ಚಿತ್ರಣ ಕಾಣಿಸುತ್ತಿದೆ?ಎಲ್ಲೆಡೆ ಭಯೋತ್ಪಾದನೆ,ಬಡತನ,ರೈತರ ಆತ್ಮಹತ್ಯೆ,ಭ್ರಷ್ಟಾಚಾರ…ಇತ್ಯಾದಿ.ಮಹಾತ್ಮರ ಒಂದು ಮಾತಿದೆ ಒಂದು ಹೆಣ್ಣು ಮಧ್ಯರಾತ್ರಿ ನಿರ್ಭಯವಾಗಿ ಓಡಾಡುವ ಪರಿಸ್ಥಿತಿ ಬಂದಾಗ ಮಾತ್ರ  ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ ಎಂದು ಇದು ಅಕ್ಷರಶಃ ನಿಜ ಯಾಕೆಂದರೆ ಲೆಕ್ಕವಿಲ್ಲದಷ್ಟು ಅತ್ಯಾಚಾರ ನಡೆಯುತ್ತಿರುವಾಗ ನಿಜವಾಗಿ ಸ್ವಾತಂತ್ರ್ಯ ದೊರೆತಿದೆಯೇ ಎಂದೂ ಸಂಶಯ ಪಡುವಂತಾಗಿದೆ.


ಚಿಕ್ಕ ಆಕಾರದ ಕಾಗದದ ರಾಷ್ಟ್ರಧ್ವಜಗಳನ್ನು ಖರೀದಿ ಮಾಡಿ ಅಲಂಕಾರ ಮಾಡಿ ಸ್ವಾತಂತ್ರ್ಯ ದಿನದಂದು ಇಡುತ್ತಾರೆ.ತದ ನಂತರದ ಕಸದ ತೊಟ್ಟಿಗಳಲ್ಲೊ,ˌರಸ್ತೆಗಳಲ್ಲೊ ಬಿದ್ದಿರುವುದನ್ನು ಕಾಣುತ್ತೇವೆ.ರಜೆ ಸಿಕ್ಕಿತೆಂದು ಹೊರಗಡೆ ಸುತ್ತಾಡುವುದನ್ನು  ಬಿಟ್ಟು ಒಂದು ಗಂಟೆಯಷ್ಟು ಸಮಯವನ್ನು ನಾವು ಕಲಿತ ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲು ಮೀಸಲಾಗಿರಿಸೋಣ.


“ತಾನು,ತನ್ನದು ಎಂಬ ಸ್ವಾರ್ಥ ಬಿಟ್ಟು ಎಲ್ಲರೂ ಒಂದೇ ಎಂಬುದನ್ನು ಅರಿತು ಬಾಳೋಣ……..”

 

 

 

 

 

 

 

✍️ ಗ್ರೀಷ್ಮಾ ಭಂಡಾರಿ ಕಲ್ಲಡ್ಕ

 

 

Leave a Reply

Your email address will not be published. Required fields are marked *