November 22, 2024
WhatsApp Image 2021-07-14 at 1.31.38 PM

ದಕ್ಷಿಣ ಕನ್ನಡ ಎಂದರೆ ತುಳುನಾಡು,ತುಳುವರಿಗೆ ಕಲೆ-ಸಂಸ್ಕೃತಿ, ದೈವ ದೇವರುಗಳ ಮೇಲೆ ಬಹಳ ನಂಬಿಕೆ.. ತುಳು ಭಾಷೆ ಮಾತನಾಡುವವರು ವರ್ಷದ 12 ತಿಂಗಳನ್ನು ಪಗ್ಗು, ಬೇಸ,ಕಾರ್ತೆಲ್, ಆಟಿ, ಸೋಣ, ನೀರ್ನಾಲ್, ಬೊಂತೆಲ್, ಜಾರ್ತೆ, ಪೆರಾರ್ತೆ, ಪೊನ್ನಿ, ಮಾಯಿ, ಸುಗ್ಗಿ ಎಂದು ಕರೆಯುತ್ತಾರೆ.ಮಾಡಿಸೋಣ ನಿರಂತರವಾಗಿ ಎಂದು ಕರೆಯುತ್ತಾರೆ.. ತುಳುವರ 12 ತಿಂಗಳುಗಳಲ್ಲಿ ನಾಲ್ಕನೇ ತಿಂಗಳಲ್ಲಿ ಬರುವ ತಿಂಗಳನ್ನ ಆಟಿ ಎಂದು ಕರೆಯುತ್ತಾರೆ.. ಈ ತಿಂಗಳಿನಲ್ಲಿ ಹಿಂದಿನ ಜನರು ಊಟಕ್ಕಿಲ್ಲದೆ ಕಷ್ಟಪಡುತ್ತಿದ್ದರು. ಆ ಕಾರಣದಿಂದಲೇ ಹಲಸಿನ ಸೋಳೆ ನೀರಲ್ಲಿ ಹಾಕಿಡುವುದು,ಪೆಜಕಾಯಿ,ಮಾವಿನಕಾಯಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು..

ನಾನೀಗ ಹೇಳಲು ಹೊರಟಿರುವ ಆಟಿಯ ಪದಾರ್ಥದ ಹೆಸರು ಕಣಿಲೆ. ಕನ್ನಡದಲ್ಲಿ ಅದನ್ನು ಕಳಲೆ ಎಂದು ಕೂಡ ಕರೆಯುತ್ತಾರೆ.ಏನಿದು ಕಳಲೆ? ವರ್ಷ ಋತುವಿನ ಆಗಮನದ ಸಂದರ್ಭದಲ್ಲಿ ಬಿಡುವಿಲ್ಲದ ಕೆಲಸ ತನ್ನ ವಂಶವಾಹಿನಿಯ ವೃದ್ಧಿ..ಬುಡದಲ್ಲಿನ ಗಡ್ಡೆಯ ಭಾಗದಲ್ಲಿ ಬರುವ ಮೊಳಕೆಗೆ ಕಳಲೆಯೆಂದು ಹೆಸರು.ಬೇರ್ಪಡಿಸಿದ ಕಳಲೆಯ ತೆಗೆದಾಗ ಬುಡದಲ್ಲಿ ಸಿಗುವುದು ಬಿಳಿಯ ತಿರುಳು ಇದನ್ನ ತುಳುವಲ್ಲಿ ಕಣಿಲೆ ಎನ್ನುತ್ತಾರೆ.ಇದನ್ನು ಹೇಗೆಬೇಕೋ ಹಾಗೆ ಉಪಯೋಗಿಸಿದಲ್ಲಿ ವಿಷಕಾರಿ. ಈ ಕಳಲೆಯನ್ನು ದಿನವೂ ನೀರು ಬದಲಾಯಿಸುತ್ತ ಮೂರು ದಿನ ನೀರಿನಲ್ಲಿ ಮುಳುಗಿಸಿಟ್ಟು ಆಮೇಲೆ ಅದನ್ನು ತರಕಾರಿಯಂತೆ ಉಪಯೋಗಿಸಬೇಕು. ಶ್ರಾವಣದಲ್ಲಿ ದೊರಕುವ ಕಳಲೆ ಭಾದ್ರಪದ ದಲ್ಲಿ ಕುಯ್ಯುವುದು ನಿಷಿದ್ಧ. ಬಿದಿರಿನ ಸಂತತಿ ಅಳಿಯಬಾರದು ಎಂಬ ನಿಟ್ಟಿನಲ್ಲಿಯೂ ಈ ರೀತಿಯ ಕ್ರಮ ಮಾಡಿರಬಹುದು.ಬಿದಿರು ಘಟ್ಟಪ್ರದೇಶ, ಮಲೆನಾಡು ಹಾಗೂ ಅಲ್ಲಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ರೈತನ ಭೂಮಿಯ ರಕ್ಷಣೆಯನ್ನು ಮಾಡುತ್ತದೆ ಮತ್ತು ಇದು ಖನಿಜ, ಲವಣ ಸುಣ್ಣದ ಅಂಶವನ್ನು ಹೊಂದಿದೆ. ಕಳಲೆಯನ್ನು ಪಲ್ಯ ಒಂದೇ ಅಲ್ಲ,ಬಜ್ಜಿ,ಚಿತ್ರಾನ್ನ,ಸಾಂಬಾರಿಗೆ ಕೂಡ ಉಪಯೋಗಿಸುತ್ತಾರೆ. ಕಳಲೆ ಎಂಬ ಹೆಸರಿನ ಊರು ಕೂಡ ಇದೆ. ಮೈಸೂರು ಜಿಲ್ಲೆಯ ನಂಜನಗೂಡಿನಿಂದ ಐದು ಮೈಲು ದೂರದಲ್ಲಿದೆ. ಇಲ್ಲಿ ಲಕ್ಷ್ಮೀಕಾಂತಸ್ವಾಮಿ ದೇಗುಲವಿದೆ.ಲಕ್ಷ್ಮಿಕಾಂತ ಬಿದಿರಿನ ಮಧ್ಯದೊಳಗೆ ದೊರತಿದ್ದರಿಂದ ಕಳಲೆ ಎಂದು ಹೆಸರಾಯಿತು. ಕಳಲೆ ಎಂಬುದು ಒಂದು ಪ್ರಸಿದ್ಧ ಮನೆತನದ ಹೆಸರು ಕೂಡ ಆಗಿದೆ.ದಳವಾಯಿಗಳು, ಮೈಸೂರು ಹಾಗು ವಿಜಯನಗರ ಸಂಸ್ಥಾನದ ಆಳ್ವಿಕೆಯಲ್ಲಿ ಕಳಲೆ ಮನೆತನ ಕೂಡ ಬಹುಮುಖ್ಯ ಪಾತ್ರ ವಹಿಸಿತ್ತು.


ಬನ್ನಿ ಕಳಲೆ ಪಲ್ಯ ಹೇಗೆ ಮಾಡುವುದು ಎಂದು ತಿಳಿಯೋಣ :

ಸಣ್ಣಗೆ ಹೆಚ್ಚಿದ ಕಳಲೆ :3ಕಪ್
ಎಣ್ಣೆ :2 ಚಮಚ
ಒಗ್ಗರಣೆ ಸಾಮಾಗ್ರಿ: ಸಾಸಿವೆ,ಜೀರಿಗೆ,ಅರಿಶಿನ,ಉದ್ದಿನಬೇಳೆ. 1 ಚಮಚ
ಕೆಂಪು ಮೆಣಸಿನ ಕಾಯಿ:5
ಬೆಲ್ಲ,ಸಕ್ಕರೆ( ಸ್ವಲ್ಪ )
ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ
ಮೇಲೆ ತಿಳಿಸಿದಂತೆ ಕಳಲೆಯನ್ನು ಮೂರು ದಿನ ನೀರಿನಲ್ಲಿ ನೆನೆಸಿದ ನಂತರ ಕಳಲೆಯನ್ನು ಕುಕ್ಕರ್ ನಲ್ಲಿ ಬೇಯಿಸಿ,ಎಣ್ಣೆ ಬಿಸಿಮಾಡಿ ಒಗ್ಗರಣೆ ಹಾಕಿ ಅದಕ್ಕೆ ಬೇಯಿಸಿದ ಕಳಲೆ ಸೇರಿಸಿ,ಬೆಲ್ಲ ಉಪ್ಪು ಸೇರಿಸಿ ಕಡಾಯಿಯಲ್ಲಿ ಮುಚ್ಚಿಟ್ಟು ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿ.. ಈಗ ರುಚಿಯಾದ, ಆರೋಗ್ಯಕರ ಕಳಲೆ ರೆಡಿ.

— ನಾಗಶ್ರಿ

Leave a Reply

Your email address will not be published. Required fields are marked *