ಅಂಕೋಲಾ ಉತ್ಸವ ಸಂಗಾತಿ ರಂಗಭೂಮಿ(ರಿ) ಇವರ ಆಶ್ರಯದಲ್ಲಿ ಅಂಕೋಲಾದಲ್ಲಿ ನಡೆದ ಅಂತರ್ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಂಗಳೂರು ಪಡೀಲ್ ನ…
ಮಾ॥ ಪ್ರತೀಕ್ ಕೋಡಕ್ಕಲ್.
ರನ್ನರ್ಸ್ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಾಸ್ಟರ್ ಪ್ರತೀಕ್ ಮಂಗಳೂರಿನ ಬೆಂದೂರ್ ವೆಲ್ ಸೈಂಟ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಮಂಗಳೂರಿನ ನಮ್ಮ ಟಿ.ವಿ. ಡ್ಯಾನ್ಸ್ ಟು ಡ್ಯಾನ್ಸ್ ಕಾರ್ಯಕ್ರಮದ ಸ್ಪರ್ಧೆಯಲ್ಲಿ ಜೂನಿಯರ್ ವಿಭಾಗದಿಂದ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಹಾಗೂ ವಿಜಯ ಆರ್ಟ್ಸ್ ಅಕಾಡೆಮಿ ಬೆಂಗಳೂರು ಇವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕೂಡ ಆಯ್ಕೆಯಾಗಿದ್ದಾರೆ.
ಭಂಡಾರಿವಾರ್ತೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭದ ಪ್ರಾಯೋಜಕರಲ್ಲೊಬ್ಬರಾಗಿದ್ದ, ಚೆಟ್ಟಿನಾಡು ಸಿಮೆಂಟ್ ಸಂಸ್ಥೆಯಲ್ಲಿ ಮಂಗಳೂರು ವಿಭಾಗದ ಹಿರಿಯ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಪ್ರವೀಣ್ ಭಂಡಾರಿ ಕೋಡಕ್ಕಲ್ ಮತ್ತು ಶ್ರೀಮತಿ ರೇಣುಕಾ ಪ್ರವೀಣ್ ಭಂಡಾರಿ ದಂಪತಿಗಳ ಪುತ್ರರಾದ ಇವರು ಉನ್ನತ ವಿದ್ಯಾಭ್ಯಾಸ ಪಡೆದು ಸಾಂಸ್ಕೃತಿಕ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡಲಿ ಎಂದು ತಂದೆ, ತಾಯಿ, ಮತ್ತು ಸಹೋದರಿ ಕುಮಾರಿ ಪ್ರವಲಿಕ ಹಾಗೂ ಬಂಧುಮಿತ್ರರು ಶುಭ ಹಾರೈಸಿದ್ದಾರೆ.
ಮಾ॥ ಪ್ರತೀಕ್ ತಮ್ಮ ಸಾಧನೆಯಲ್ಲಿ ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾಗಿ ಸಮಾಜದ ಹೆಸರನ್ನು ಉತ್ತುಂಗಕ್ಕೆ ಏರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”