ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ನೇತೃತ್ವದಲ್ಲಿ ವರ್ಷಂಪ್ರತಿ ಮಂಗಳೂರಿನ ಪಣಂಬೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವದಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಸೂಪರ್ ಸಿಂಗರ್ ಹಿರಿಯರ ವಿಭಾಗದಲ್ಲಿ ಶೇಖರ್ ಅತ್ತಾವರ
ಶ್ರೀ ಶೇಖರ್ ಅತ್ತಾವರ
ದ್ವಿತೀಯ ಬಹುಮಾನ ಗಳಿಸಿದ್ದಾರೆ ಹಾಗೂ ಗ್ರೂಪ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಇವರ ತಂಡ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಗಾಯಕ ನಾಗಿರುವ ಶ್ರೀ ಶೇಖರ್ ಅತ್ತಾವರ 2018 ರಲ್ಲಿ ಕೂಡ ಸೂಪರ್ ಸಿಂಗರ್ ವಿಭಾಗದಲ್ಲಿ ರನ್ನರ್ಸ್ ಆಗಿ ಮಿಂಚಿದ್ದರು .ಕಾಲೇಜ್ ವಿದ್ಯಾಭ್ಯಾಸದ ಜೊತೆಗೆ ಸಿಂಗಿಂಗ್ ತರಬೇತಿಯನ್ನು ಮಾಡುತ್ತಿದ್ದರು. ಕಳೆದ ಏಳು ವರ್ಷಗಳಿಂದ ಮಿತ್ರರ ಜೊತೆಯಲ್ಲಿ ಸ್ಥಾಪಿಸಿದ ‘ಮಂಗಳ ಮ್ಯೂಸಿಕ್ ಕ್ಲಬ್ ಮತ್ತು ಸಂಗೀತ ಬಾಹರ್ ‘ಎಂಬಾ ಸಂಸ್ಥೆಯಲ್ಲಿ ಸಿಂಗಿಂಗ್ ಅಭ್ಯಾಸ ಮಾಡುತ್ತಿದ್ದಾರೆ.
ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮವನ್ನು ನಡೆಸುತ್ತಿರುವ ಇವರು ಪತ್ನಿ ಶ್ರೀಮತಿ ಸುಚಿತ್ರಾ ಶೇಖರ್ ಮತ್ತು ಮಂಗಳೂರಿನ ಕುಲಶೇಖರ ಪಾಲ್ದನೆ ಕೇಂಬ್ರಿಜ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಾದ ಮಾ ॥ ನಿಶ್ಚಿತ್ ಮತ್ತು ಮಾ ॥ ನಿಮಿತ್ ಇವರೊಂದಿಗೆ ಕದ್ರಿಯಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಇವರ ಪುತ್ರ ಮಾ॥ ನಿಮಿತ್ ಉತ್ತಮ ಗಾಯಕನಾಗಿದ್ದು ಸಿಂಗಿಂಗ್ ತರಬೇತಿಯನ್ನು ಪಡೆಯುತ್ತಿದ್ದಾರೆ.
ಶ್ರೀ ಶೇಖರ್ ಅತ್ತಾವರ ಸಿಂಗಿಂಗ್ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯು ಹಾರ್ದಿಕ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ