ಭಂಡಾರಿ ಬಂಧುಗಳು ಸಮಾಜದಲ್ಲಿ ಸರಿದಿರುವರೇ ಸಂದಿಗೇ ? ಹೀಗೊಂದು ಪ್ರಶ್ನೆ ನನ್ನನ್ನು ಎಡೆಬಿಡದೇ ಕಾಡಿದ್ದುಂಟು ಯಾಕೆಂದರೆ ನಾನು ಭಂಡಾರಿ ಸಮಾಜದ ಸಮಾರಂಭಗಳಿಗೆ ಹೋಗಿದ್ದೇ ವಿರಳ ಆದರೆ ಹೋದಂತಹ ಎಲ್ಲಾ ಸಮಾರಂಭಗಳಲ್ಲಿ ಸಭೆಯ ಸದಸ್ಯರು ಕ್ಷೌರಿಕರು ಇಂದಿಗೂ ಸಮಾಜದಲ್ಲಿ ಕೀಳು ಎಂಬ ಸಂದೇಶವನ್ನು ಅವರಿಗವರೇ ಘಂಟಾಘೋಷವಾಗಿ ಬಂದಿರುವವರಿಗೆ ನೀಡಿ ಹಿಂತಿರುಗುವಂತೆ ಮಾಡುತ್ತಿರುವುದು ವಿಪರ್ಯಾಸವೇ ಸರಿ. ಇನ್ನೂ ಕೆಲವು ಗಣ್ಯವ್ಯಕ್ತಿಗಳೆಂದು ಕರೆಯಿಸಿಕೊಳ್ಳುವವರು ನಾನು ಎಲ್ಲೂ ಕ್ಷೌರಿಕ ವಂಶಸ್ಥನೆಂದು ಹೇಳಿಕೊಳ್ಳುವುದಿಲ್ಲ ಹೇಳಿಕೊಳ್ಳಲು ಹಿಂಜರಿಕೆ ಎನ್ನುವ ನುಡಿಗಳನ್ನು ಉದುರಿಸಿ ಸಭಿಕರು ಇನ್ನಷ್ಟು ತಲೆತಗ್ಗಿಸುವಂತೆ ಮಾಡುತ್ತಾರೆ. ನಾನು ಕೇಳುವುದು ಇಷ್ಟೇ ನಿಮಗೆ ಹೇಳಿಕೊಳ್ಳಲು ಅಷ್ಟೊಂದು ಮುಜುಗರವೆನಿಸಿದರೆ ಹೇಳಿಕೊಳ್ಳಲೇಬೇಡಿ ಅದರಲ್ಲೂ ಭಂಡಾರಿ ಸಭೆಯಲ್ಲಿ ಹೇಳಿ ಹೆಮ್ಮೆಯಿಂದ ನಾನೊಬ್ಬ ಕ್ಷೌರಿಕ ಎಂದು ಹೇಳಿಕೊಳ್ಳುವವ ತಲೆ ತಗ್ಗಿಸುವಂತೆ ಮಾತನಾಡಲೇಬೇಡಿ.
ಕ್ಷೌರಿಕನಿಗೊಂದು ಸ್ಥಾನಮಾನ ಅಂದೂ ಇತ್ತು ಇಂದಿಗೂ ಇದೆ.ಬಹುಶಃ ಹಿಂದೆ ಶುಭ ಮತ್ತು ಅಶುಭ ಕಾರ್ಯಗಳಿಗೆ ಬ್ರಾಹ್ಮಣರು ಬಿಟ್ಟರೆ ಭಂಡಾರಿಗಳೇ ಎರಡನೇ ಸಾಲಿನಲ್ಲಿ ನಿಲ್ಲುವವರೇನೊ. ಮೇಲ್ವರ್ಗವೆಂದು ಕರೆಯಲ್ಪಡುತ್ತಿದ್ದ ಬ್ರಾಹ್ಮಣರಿಗೆ ಶಾಸ್ತ್ರಕ್ಕೆ ಚೌರ, ಉಪನಯನ, ಮದುವೆ ಮತ್ತು ಮರಣ ಇವುಗಳಿಗೆ ಕ್ಷೌರಿಕರಿಲ್ಲದೇ ಕಾರ್ಯವು ಅಪೂರ್ಣ. ಮತ್ತು ಇತರೇ ವರ್ಗದವರಿಗೂ ಇವುಗಳು ಅನ್ವಯ. ಅಂದಮೇಲೆ ಹಿಂದೂ ಶಾಸ್ತ್ರ ಪ್ರಖೇನವೂ ಅಲ್ಲಿ ಅವನಿಗೊಂದು ಸ್ಥಾನ ಇದ್ದೇ ಇತ್ತು. ಕಾರ್ಯಗಳಿಗೆ ಹಾಜರಾದ ಕ್ಷೌರಿಕನಿಗೆ ಅಂದಿನ ಕೆಲಸದ ಸಂಬಳವನ್ನು ನೀಡದೇ ಅಲ್ಲಿ ಅವನಿಗೆ ಅಕ್ಕಿ, ಕಾಯಿ, ಬೆಲ್ಲ, ವೀಳ್ಯ, ವಸ್ತ್ರ, ಧನ ಹೀಗೆ ಕೆಲವು ವಸ್ತುಗಳನ್ನು ಗೌರವಪೂರ್ವಕವಾಗಿ ನೀಡಿ ಗೌರವವನ್ನು ನೀಡುವಾಗ ಅವನಿಗೆ ಸಮಾಜದಲ್ಲಿ ಅದು ಹೇಗೆ ಗೌರವ ಕಡಿಮೆಯಾಯಿತು ? ಇನ್ನು ಕೆಲವು ವರ್ಗದವರ ಮದುವೆಗಳಿಗೆ ಬ್ರಾಹ್ಮಣರನ್ನು ಶಾಸ್ತ್ರ ಪ್ರಖೇನ ಬರಮಾಡಿಕೊಳ್ಳುತ್ತಾರೊ ಇಲ್ಲವೋ ತಿಳಿಯದು ಆದರೆ ಕ್ಷೌರಿಕನ್ನು ಅವರ ಶೋಭಾನ ಹಾಡಿನ ಮೂಲಕ ಶಾಸ್ತ್ರ ಪ್ರಕಾರವಾಗಿ ಸ್ವಾಗತಕೋರಿ ಬರಮಾಡಿಕೊಳ್ಳುವಾಗ ಅವನ ಘನತೆ ಕುಸಿದಿದ್ದು ಹೇಗೆ ?
ಇಂದಿನ ಆಧುನಿಕ ಸೌಂದರ್ಯಪ್ರಿಯ ಯುಗದಲ್ಲಂತೂ ಕೇಶವಿನ್ಯಾಸಕ್ಕೆ ಇನ್ನಷ್ಟು ಮೆರಗು ತಂದುಕೊಟ್ಟಿದೆ. ಕೇಶವಿನ್ಯಾಸವಲ್ಲದೇ, ಪುರುಷರೂ ಸೇರಿದಂತೆ ಮಹಿಳೆಯರೂ ಮುಖದ ಸೌಂದರ್ಯಕ್ಕೆ ಆದ್ಯತೆ ನೀಡುತ್ತಿರುವುದು ಉತ್ತಮ ರೀತಿಯ ಬೆಳವಣಿಗೆ ತಂದುಕೊಟ್ಟಿದೆ. ಆದಾಯದಲ್ಲೂ ಕಡಿಮೆಯಿಲ್ಲದ ಇದೊಂದು ಉದ್ಯಮವಾಗಿ ಬೆಳೆದು ಇತರೆ ವರ್ಗದವರೂ ಈ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ, ಅವರು ಈ ಉದ್ಯೋಗವನ್ನು ಆಯ್ದುಕೊಳ್ಳುವಾಗ ಯೋಚಿಸದ ಕನಿಷ್ಠತೆ ಕ್ಷೌರಿಕರೆಂದು ಕರೆಯಿಸಿಕೊಳ್ಳುವವರಿಗೆ ಹೇಗೆ ಉಂಟಾಯಿತು ?
ಹಾಗೆಂದಮಾತ್ರಕ್ಕೆ ಕ್ಷೌರಿಕರೇನು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿಯೇ ಇಲ್ಲವೆಂದೇನಲ್ಲ ಕನಿಷ್ಠ ರೀತಿಯಲ್ಲಿ ಸಮಾಜ ನೋಡುವುದು ಇದ್ದೇ ಇತ್ತು. ಕೆಲವು ಪ್ರದೇಶಗಳಲ್ಲಿ ಅವರ ಸ್ಥಿತಿ ಹೇಳದಂತಿದ್ದದ್ದೂ ನಿಜ. ಆದರೆ ಇವರು ಹೇಳುವಹಾಗೆ ಇಂದಿನ ದಿನಮಾನಗಳಲ್ಲಿಯೂ ಇದು ಅಷ್ಟೇ ಮಟ್ಟದಲ್ಲಿ ಇದೆ ಎಂದರೆ ಅದು ಸಮಾಜದ ತಪ್ಪಲ್ಲ ಕ್ಷೌರಿಕನ ತಪ್ಪು. ಇಂದಿನ ದಿನದಲ್ಲಿಯೂ ಆತ ತುಳಿತಕ್ಕೆ ಒಳಗಾಗುತ್ತಿದ್ದಾನೆ ಎಂದರೆ ಅವನು ಸ್ವತಃ ತುಳಿಸಿಕೊಳ್ಳುತ್ತಿರುವವನಾಗಿದ್ದಾನೆ
ಇವುಗಳನ್ನು ಕೇಳಿದಾಗ ಕೆಲ ಹಿರಿಯರು ಹೇಳುವುದುಂಟು ಸರ್ಕಾರದ ಸೌಲಭ್ಯಗಳಿಗಾಗಿ ಈ ಸರ್ಕಸ್, ಸರ್ಕಾರದ ಕಣ್ಣಿಗೆ ನಾವಿನ್ನೂ ಬಿದ್ದಿಲ್ಲ ನಾವೂ ಕಡಿಮೆ ಸಂಖ್ಯೆಯಲ್ಲಿದ್ದೇವೆ. ಹಿಂದೆ ತುಳಿತಕ್ಕೂಳಗಾದವರಲ್ಲಿ ನಾವೂ ಇದ್ದೇವೆ ಹಾಗಾಗಿ ಸರ್ಕಾರದ ಗಮನ ಸೆಳೆಯಲು ಈ ಪ್ರಯತ್ನಗಳೆಂದು. ಆದರೆ ಸರ್ಕಾರದ ಗಮನ ಸೆಳೆಯಲು ಬೇರೆಯ ಮಾರ್ಗಗಳೂ ಇವೆಯಲ್ಲವೇ ಅವುಗಳ ಮುಖಾಂತರ ಹೆಚ್ಚಿನ ಪ್ರಯತ್ನ ಪಟ್ಟರೆ ಫಲ ದೊರಕುವುದು ನಿಶ್ಚಿತ. ಅದಲ್ಲದೇ ಧ್ವನಿವರ್ಧಕವಿಟ್ಟು ಹೇಳಿಕೊಂಡರೆ ಊರಿಗೆ ತಿಳಿಯುವುದೇ ಹೊರತು ಸರ್ಕಾರಕ್ಕಲ್ಲ. ಸಭೆಗೆ ಬಂದ ರಾಜಕಾರಣಿಯೋ ಅಥವಾ ಅಧಿಕಾರಿಯ ಗಮನಕ್ಕೆ ತರಬೇಕೆಂದರೆ ವಿಷಯದ ಪ್ರಸ್ತಾವನೆ ಅಗತ್ಯ ಅಂದಮಾತ್ರಕ್ಕೆ ಇಂದಿಗೂ ಅವುಗಳನ್ನೇ ಹಿಡಿದೆಳೆದರೆ ಹಾಸ್ಯಾಸ್ಪದವಲ್ಲವೆ.
ಕ್ಷೌರಿಕರ ಬಲವರ್ಧನೆಗೆ ಬೇಕಾಗಿರುವುದು ಧನಾತ್ಮಕ ಅಂಶಗಳನ್ನು ಕೂಡಿದ ಶಕ್ತಿಯುತ ಮಾತುಗಳೇ ಹೊರತಾಗಿ ಹಳೆಯ ಋಣಾತ್ಮಕ ಇತಿಹಾಸದ ಹೊಸ ಕತೆಗಳಲ್ಲ. ಕ್ಷೌರಿಕರು ಕೆಲಸವನ್ನು ಕೀಳರಿಮೆಗೆ ಬಿಟ್ಟರೆ ಆಧುನಿಕದ ಅಧಿಕ ಆದಾಯದ ಕಸುಬನ್ನು ಕಿತ್ತುಕೊಂಡಂತಾಗುತ್ತದೆಯೇ ಹೊರತು ಉಳಿದೇನು ಸಾಧಿಸಿದಂತಾಗುವುದಿಲ್ಲ. ಸಾಧಕರು ಸಾಧಿಸುತ್ತಾರೆ ಅವರನ್ನು ಹೆಮ್ಮೆಯ ಭಂಡಾರಿ ಎನ್ನುವಂತೆ ಮಾಡಿದರೆ ಉಳಿದ ಸಾಧನೆಗೆ ಹೊರಟವರಿಗೂ ಪ್ರೇರಣೆ ಉಂಟಾಗುತ್ತದೆ. ನಾವು ಉನ್ನತಿಯ ಕಡೆಗೆ ಹೊರಡಬೇಕಾಗಿರುವುದೇ ವಿನಃ ಹಳೆಯ ಕಹಿ ನೆನಪುಗಳೊಂದಿಗೆ ಮತ್ತೆ ಮತ್ತೆ ಹಿಂದೆ ಸರಿಯುವುದಲ್ಲ. ಕಹಿಯ ನೆನಪುಗಳನ್ನು ಮೆಲಕುಹಾಕಬೇಕಾಗಿರುವುದು ಅವುಗಳನ್ನು ದಾಟಿಬಂದ ಸಾಧನೆಯ ಅರಿವು ಮೂಡಿಸಲೇ ಹೊರತಾಗಿ ಅದಕ್ಕೆ ಮತ್ತೆ ಜಾರುವುದಕ್ಕಲ್ಲ.
ನಮ್ಮ ಪೂರ್ವಜರ ಮಾಡಿರುವ kela ತಪ್ಪಿನಿಂದ ನಮಗೆ ಕ್ಷೌರಿಕ್ ಸಮಾಜದಲ್ಲಿ ತಲೆ ತಲೆತಗ್ಗಿಸುದಕ್ಕೆ ಆಗುತಿರಲಿಲ್ಲ. ಯಾಕೆ ಅಂದರೆ ನಾವು ನಮ್ಮ ವೃತ್ತಿಯಲ್ಲಿ ಮಾಡುವಂಥ ಕೆಲ ಕೆಲಸಕ್ಕೆ ನಮಗೆ ಈ ತರಹದ್ ಕೀಳರಿಮೆ.
Dear Bhandary Varthe… you made us to read you earlier, you are making us to read you regularly now. Something good is happening. Thank you Mr. Vijay Bhandary Nittooru.
Thank you
State wide our community staus is same. My opinion is- 1. Unity and No comment on leaders 2. Leader should work without selfishness. 3. Workout to increase Economical and Social status and 4. No POLITICAL party or personal hangouts
Hum Fit to Duniya bagalme
👍