ಜೇನು ತುಪ್ಪದ ಉಪಯೋಗಗಳು:
ಸಾವಿರಾರು ವರ್ಷಗಳ ಹಿಂದಿನಿಂದಲೂ ಜೇನು ತುಪ್ಪವನ್ನು ಆಹಾರವಾಗಿ ಮಾತ್ರವಲ್ಲದೆ ಸೌಂದರ್ಯವರ್ಧಕವಾಗಿಯೂ ಉಪಯೋಗಿಸುತ್ತಿದ್ದಾರೆ ಯಾಕೆಂದರೆ ಜೇನುತುಪ್ಪವು ಜೀವಸತ್ವ, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಚರ್ಮ, ಕೂದಲು ಮತ್ತು ಉಗುರುಗಳ ಸಮಸ್ಯೆಗಳಿಗೆ ಸಹಾಯ ಮಾಡಲು ಇದು ಅತ್ಯಂತ ಪ್ರಯೋಜನಕಾರಿ ಪದಾರ್ಥಗಳಲ್ಲಿ ಒಂದಾಗಿದೆ.
ಈಗ ನಾವು ಸೌಂದರ್ಯಕ್ಕಾಗಿ ಜೇನುತುಪ್ಪದ ಬಳಕೆಯ 7 ವಿಧಾನಗಳನ್ನು ತಿಳಿಯೋಣ, ಈ 7 ವಿಧಾನಗಳೂ ರಾತ್ರಿ ಹೊತ್ತಿನ ಚಿಕಿತ್ಸೆಗಳಾಗಿವೆ, ಈ ಚಿಕಿತ್ಸೆಗಳು ವಿಭಿನ್ನ ಕೂದಲು, ಚರ್ಮ ಮತ್ತು ಉಗುರುಗಳ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಒಣ ತುಟಿಯ ಸಮಸ್ಯೆ ಪರಿಹಾರ :
ರಾತ್ರಿ ಮಲಗುವ ಮುನ್ನ ಜೇನುತುಪ್ಪದ ತೆಳು ಪದರವನ್ನು ತುಟಿಯ ಮೇಲೆ ಸವರಿ (ಹಚ್ಚಿ) ಕೊಳ್ಳಿ, ಮುಂಜಾನೆ ನಿಮ್ಮ ತುಟಿ ಮೃದು ಮತ್ತು ಕೋಮಲವಾಗಿರುತ್ತದೆ.
ಹೊಳೆಯುವ ಚರ್ಮ:
ಪರಿಪೂರ್ಣ ಹೊಳೆಯುವ ಚರ್ಮ ನಿಮ್ಮದಾಗಬೇಕಾದರೆ ಈ ಮಿಶ್ರಣವನ್ನು ಬಳಸಿ, ಒಂದು ಭಾಗ ಜೇನು ತುಪ್ಪದ ಜೊತೆಗೆ ಎರಡು ಭಾಗ ಅಲೊವೆರಾ ರಸ ಸೇರಿಸಿ ಮಲಗುವ ಮುನ್ನ ಮೃದುವಾಗಿ ಮುಖದ ಮೇಲೆ ಹಚ್ಚಿ ರಾತ್ರಿ ಪೂರ್ತಿ ಹಾಗೆ ಇರಿಸಿ ಬೆಳಗ್ಗೆ ಮುಖ ತೊಳದುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಮುಖ ದಿನಪೂರ್ತಿ ಹೊಳೆಯುವುದರ ಜೊತೆಗೆ ಮೃದುವಾಗಿರುತ್ತದೆ.
ಮೊಡವೆ ಕಲೆಗಳು:
ನಿಮಗಿದು ಗೊತ್ತೇ! ಜೇನುತುಪ್ಪ ಒಂದು ಅಸಾಮಾನ್ಯ ಸೋಂಕು ನಿರೊಧಕ ಔಷದಿ. ಇದು ಸೋಂಕು ನಿವಾರಕ ಗುಣವನ್ನು ಹೊಂದಿದೆ. ಜೇನುತುಪ್ಪ ಮೊಡವೆ ಕಲೆಗಳನ್ನು ಶಮನಗೊಳಿಸುತ್ತದೆ. ಮೊಡವೆ ಕಲೆ ಇರುವ ಜಾಗಕ್ಕೆ ತುಪ್ಪ ಹಚ್ಚಿ ಆ ಜಾಗಕ್ಕೆ ಬ್ಯಾಂಡೇಜ್ ಹಚ್ಚಿರಿ. ರಾತ್ರಿ ಹಾಗೆ ಬಿಟ್ಟುಬಿಡಿ, ಮುಂಜಾನೆ ಬ್ಯಾಂಡೇಜ್ ತೆಗೆಯಿರಿ. ಹೀಗೆ ಪ್ರತಿದಿನ ಒಂದು ವಾರ ಬಳಸುವುದರಿಂದ ಅತ್ಯ್ತುತ್ತಮ ಫಲಿತಾಂಶ ದೊರಕುವುದು.
ಮಚ್ಚೆ ಮತ್ತು ಕಪ್ಪು ಕಲೆಗಳು:
ನಿಮ್ಮ ಮುಖ ಮಚ್ಚೆ ಮತ್ತು ಕಪ್ಪು ಕಲೆಗಳಿಂದ ತುಂಬಿದ್ದರೆ, ಮುಖಕ್ಕೆ ತೆಳುವಾದ ಜೇನು ತುಪ್ಪದ ಪದರವನ್ನು ಹಚ್ಚಿಕೊಳ್ಳಿ ಅಥವಾ ಮಚ್ಚೆ ಇರುವ ಜಾಗಕ್ಕೆ ಮಾತ್ರ ಹಚ್ಚಿಕೊಳ್ಳಿ. ನಿಮ್ಮ ಮುಖದ ಮೇಲಿರುವ ಕಲೆ ಅತ್ಯಂತ ಕಠಿಣವಾಗಿದ್ದಲ್ಲಿ ಕಚ್ಚಾ ಜೇನುತುಪ್ಪದ ಜೊತೆಗೆ ನಿಂಬೆ ರಸ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ, ಮುಖ ತೊಳೆದು ನಿಮಗೆ ಅನುಕೂಲ ಇರುವ ಸಮಯದಲ್ಲಿ ಈ ಮಿಶ್ರಣವನ್ನು ಹಚ್ಚಬಹುದು.
ಹೊಳಪಿನ ಕೂದಲು:
ನೈಸರ್ಗಿಕವಾಗಿ ಕೂದಲಿನ ಹೊಳಪಿಗಾಗಿ, ಕ್ಯಾಮೊಮೈಲ್-ಟಿ ಯ ಮಿಶ್ರಣದಲ್ಲಿ ನೈಸರ್ಗಿಕ ಹೊಳಪು ಇರುತ್ತದೆ, ಕ್ಯಾಮೊಮೈಲ್-ಟಿ ಜೊತೆಗೆ ಸ್ಪ್ರೆ ಬಾಟಲಿಯಲ್ಲಿ 2 ಚಮಚ ಜೇನುತುಪ್ಪವನ್ನು ಸೇರಿಸಿ. ಈ ಮಿಶ್ರಣವನ್ನು ರಾತ್ರಿ ಕೂದಲಿಗೆ ಸ್ಪ್ರೆ ಮಾಡಿ ನಂತರ ಕ್ಯಾಪ್‍ನಿಂದ ಮುಚ್ಚಿ ಬೆಳಗ್ಗೆ ಕವರ್ ಬಿಡಿಸಿ. ಇದನ್ನು ಪ್ರತಿ ದಿನ ಮಾಡುವುದರಿಂದ ಒಂದು ವಾರದಲ್ಲಿ ನಿಮ್ಮ ಕೂದಲು ಹೊಳಪು ಪಡೆಯುವುದರ ಜೊತೆಗೆ ಮೃದುವಾಗುತ್ತದೆ.
ಕೂದಲ ತುದಿ ಒಡೆಯುವ ಸಮಸ್ಯೆ:
ಸಮಭಾಗ ಜೇನುತುಪ್ಪದ ಜೊತೆಗೆ ಸಮಭಾಗ ತೆಂಗಿನ/ಆಲಿವ್ ಎಣ್ಣೆ ಸೇರಿಸಿ ಕೂದಲಿನ ತುದಿಗೆ ಹಚ್ಚಿ, ರಾತ್ರಿ ಹಾಗೆ ಇರಿಸಿ, ಮುಂಜಾನೆ ತೊಳೆದುಕೊಳ್ಳಿ. ಹೀಗೆ ಮಾಡುದರಿಂದ ನಿಮ್ಮ ಕೂದಲು ಮೃದುವಾಗಿ ಹೊಳೆಯುದರ ಜೊತೆಗೆ ಕೂದಲತುದಿ ಒಡೆಯುವುದು ಕಡಿಮೆಯಾಗುತ್ತದೆ.
ಬ್ಲಾಕ್ ಹೆಡ್ಸ್ ಗಳು (ಕಪ್ಪು ತಲೆಗಳು):
ಜೇನುತುಪ್ಪದ ಜೊತೆಗೆ ಸ್ವಲ್ಪ ಹನಿ ನಿಂಬೆ ರಸ ಸೇರಿಸಿ ಕಲೆಯಾದ ಜಾಗಕ್ಕೆ ಹಚ್ಚಿಕೊಳ್ಳಿ, ರಾತ್ರಿ ಮಲಗುವ ಮುಂಚೆ ಹಚ್ಚಿ, ಬೆಳಗ್ಗೆ ಮುಖ ತೊಳೆದುಕೊಳ್ಳಿ. ಉಪಶಮನ ಗುಣಗಳಿರುವ ಜೇನು ಚರ್ಮದಲ್ಲಿರುವ ಕಲೆಗಳಿಂದ ಮುಕ್ತಿಗೊಳಿಸುತ್ತದೆ. ಹಾಗೆ ಲಿಂಬೆರಸ ಕಪ್ಪುಕಲೆ ಮತ್ತು ಮೊಡವೆಗಳಿಂದ ರಕ್ಷಿಸುತ್ತದೆ.
ವಿದ್ಯಾ ಭಂಡಾರಿ
ಬ್ಯೂಟಿ ಸ್ಪಾ ಕನ್ಸಲ್ಟೆಂಟ್ ಮತ್ತು ತರಬೇತುದಾರರು
ಮ್ಯಾಜಿಕ್ ಹ್ಯಾಂಡ್ಸ್ ಬೆಂಗಳೂರು.
MOB: 7760858889
ಕನ್ನಡಕ್ಕೆ : ಪ್ರತಿಮಾ ಭಂಡಾರಿ ಕಾರ್ಕಳ