January 18, 2025
jiddu
      ವಿವೇಕವೆಂದರೆಏನು?, ಎಂಬುದನ್ನು ಪ್ರತಿಯೊಬ್ಬರೂ ತಾವೇ ಕಂಡುಕೊಳ್ಳಬೇಕು. ವಿವೇಕವೆಂಬುದುಜ್ಞಾನದ ಫಲಿತಾಂಶವಲ್ಲ‌. ಜ್ಞಾನ ಮತ್ತು ವಿವೇಕಒಟ್ಟಿಗೆ ಇರುವುದು ಸಾಧ್ಯವಿಲ್ಲ. ತನ್ನನ್ನುತಾನು ತಿಳಿದ ಪ್ರಬುದ್ಧತೆಯಿಂದ ವಿವೇಕಬರುತ್ತದೆ. ತನ್ನನ್ನು ತಾನು ತಿಳಿಯದಿದ್ದರೆ ಯಾವವ್ಯವಸ್ಥೆಯು ಇರುವುದಿಲ್ಲ. ವ್ಯವಸ್ಥೆ ಇಲ್ಲವಾದಗ ಒಳಿತೂ ಇರುವುದಿಲ್ಲ.
ಸ್ವತಂತ್ರರಾಗಬೇಕಾದರೆ ಅಧಿಕಾರವೆಂದರೆ ಏನು ಎಂದು ಚೆನ್ನಾಗಿಪರಿಶೀಲನೆ ಮಾಡಬೇಕು. ಅಧಿಕಾರವೆಂಬ ಅಸಹ್ಯವನ್ನು ಪೂರ್ತಿಯಾಗಿ ಸುಲಿದುಹಾಕಿ ಅದರ ಅಸ್ಥಿಪಂಜರದ ಸ್ವರೂಪಹೇಗಿದೆ ಎಂದು  ನೋಡಬೇಕು. ಹೀಗೆ ಮಾಡುವುದಕ್ಕೆ ದೈಹಿಕಶಕ್ತಿಯೂ ಬೇಕು,ಮಾನಸಿಕ ಶಕ್ತಿಯೂಬೇಕು. ಆದರೆ ನಿಮ್ಮೊಳಗೆ ಸಂಘರ್ಷವಿರುವಾಗ, ಶಕ್ತಿ ನಷ್ಟವಾಗುತ್ತಿರುತ್ತದೆ,ನಾಶವಾಗುತ್ತಿರುತ್ತದೆ…ಸಂಘರ್ಷವೆಂದರೇನು,ಹೇಗಿದೆ,ಯಾಕಿದೆ ಎಂದುಇಡಿಯಾಗಿ ತಿಳಿದುಕೊಂಡಾಗ ಸಂಘರ್ಷಕೊನೆಗೊಳ್ಳುತ್ತದೆ.ಅನಂತರ ನಾವು ಮನೆಯನ್ನುಕೆಡವಿಹಾಕುವ ಕೆಲಸಕ್ಕೆ ತೊಡಗಬಹುದು.ಅದು ಶತಮಾನಗಳ ಕಾಲದುಡಿದು ಕಟ್ಟಿಕೊಂಡಿರುವ ಅರ್ಥವಿಲ್ಲದ ಮನೆ.    
       ನಾಶಮಾಡುವುದೆಂದರೆ ಸೃಷ್ಟಿಸುವುದೆಂದೇ ಅರ್ಥ. ಕಟ್ಟಡಗಳನ್ನು. ಸಾಮಾಜಿಕಅಥವಾ ಆರ್ಥಿಕ ವ್ಯವಸ್ಥೆಯನ್ನು ನಾಶಮಾಡುವುದಲ್ಲಇದು. ಇವೆಲ್ಲ ಹೇಗೂ ದಿನದಿನವೂನಾಧವಾಗುತ್ತಲೇ ಇವೆ. ನಾವು ನಾಶಮಾಡಬೇಕಾದ್ದುಮನಸ್ಸಿಗೆ ಸಂಬಂಧಿಸಿದೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋವಿಚಾರಗಳ ಮೂಲಕವಾಗಿ ಅನೇಕ ರಕ್ಷಣೆಗಳನ್ನು ನಮ್ಮಸುತ್ತ ಏರ್ಪಡಿಸಿದ್ದೇವೆ. ಒಬ್ಬೊಬ್ಬರಲ್ಲೂ ಸುರಕ್ಷತೆಯ ಅಪೇಕ್ಷೆ ಆಳವಾಗಿ ಬೇರುಬಿಟ್ಟುಕೊಂಡಿದೆ. ಎಲ್ಲ ರಕ್ಷಣೋಪಾಯಗಳನ್ನುಪೂರ್ತಿಯಾಗಿ ಹರಿದು ಬಿಸಾಕಿ ಕೇವಲಸಹಾಯಕರಾಗಬೇಕು. ಸಹಾಯಕರಾಗಿದ್ದಾಗ ಮಾತ್ರ ಪ್ರೀತಿಸಲು, ಪ್ರೀತಿಯನ್ನುಪಡೆಯಲು ಸಾಧ್ಯ ‌. ಅಧಿಕಾರ ಎಂದರೇನು ಎಂಬುದುಕಾಣುತ್ತದೆ, ತಿಳಿಯುತ್ತದೆ‌. ಯಾವ ಬಗೆಯ ಅಧಿಕಾರಅಗತ್ಯ, ಎಷ್ಟು ಪ್ರಮಾಣದಲ್ಲಿ, ಯಾವಹಂತದಲ್ಲಿ ಅಗತ್ಯ ಎಂದು ತಿಳಿಯುತ್ತದೆ. ಕಲಿಕೆಯನ್ನು ನಿರ್ಧರಿಸುವ ಅಧಿಕಾರ, ಸಾಮರ್ಥ್ಯದ ಅಧಿಕಾರ, ಮಾಡುವ ಕೆಲಸದ ಮೂಲಕ  ದೊರೆಯುವಅಂತಸ್ತಿನ ಅಧಿಕಾರ, ಗುರುಗಳ,ಮೇಷ್ಟರ,ಇತರರ ಅಧಿಕಾರದ ಸ್ವರೂಪವನ್ನುತಿಳಿಯಲು ಹರಿತವಾದ ಮನಸ್ಸು, ಸ್ಪಷ್ಟವಾದಮೆದುಳು ಇರಬೇಕು.
      ಮನಸ್ಸು ಅಧಿಕಾರಕ್ಕೆ ಒಳಪಡದೆ ಸ್ವತಂತ್ರವಾಗಿ ಇರಬಲ್ಲುದೆ? ಅಂದರೆ, ಭಯವಿಲ್ಲದೆ, ಸ್ವತಂತ್ರವಾಗಿ, ಏನನ್ನೂ ಯಾರನ್ನೂ ಹಿಂಬಾಲಿಸದೆ,ಇರಬಲ್ಲುದೇ? ಹಾಗಿರಲು ಸಾಧ್ಯವಾಗುವುದಾದರೆ ಅನುಕರಣೆಕೊನೆಗೊಳ್ಳುತ್ತದೆ. ಅನುಕರಣೆ ಕೇವಲ ಯಾಂತ್ರಿಕವಾದದ್ದು. ಶಿಸ್ತು ಎಂದು, ಸಿದ್ಧ ಸೂತ್ರವನ್ನುಅನುಸರಿಸುತ್ತಾ ಗುಣವನ್ನು ಬೆಳೆಸಿಕೊಳ್ಳಲು ಬಯಸುವ ಮನಸ್ಸು ತಾನೇಅನೀತಿಯ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ.
      ದೇವರು, ನೀತಿ ಇತ್ಯಾದಿಯಾಗಿ ತನಗಿಂತಹೊರಗೆ ಇರುವ ಅಧಿಕಾರ ಕೇಂದ್ರವೊಂದನ್ನುಮನಸ್ಸು ಕಲ್ಪಿಸಿಕೊಳ್ಳುತ್ತದೆ. ಬಾಹ್ಯವಾದ ಈ ಅಧಿಕಾರ ಕೇಂದ್ರವಿನಾಶಕಾರಿ ಯಾಗುತ್ತದೆ.ಇಂಥ ಅಧಿಕಾರ ಕೇಂದ್ರಗಳನ್ನುಕಲ್ಪಿಸಿಕೊಂಡು ಆ ಮೂಲಕ ನಿಜವಾದಗುಣವನ್ನು ಅರಿಯಲು  ಸಾಧ್ಯವಿಲ್ಲ. ನಮ್ಮ ಜ್ಞಾನರೂಪದ, ನಮ್ಮ ಅನುಭವವನ್ನು ಅಧಿಕಾರವೆಂದುಕಲ್ಪಿಸಿಕೊಂಡು ಅದನ್ನು ಅನುಸರಿಸಲು ಬಯಸುತ್ತೇವೆ‌. ಇದರಿಂದ ಮಾಡಿದ್ದನ್ನೇ ಮಾಡುತ್ತಾ, ಗೊತ್ತಿರುವುದನ್ನೇ ಅನುಕರಿಸತ್ತಾ ಇರುತ್ತೇವೆ. ಅಧಿಕಾರವೆಂದರೆ ಕಾನೂನಿನ ಅಧಿಕಾರವಲ್ಲ, ಮಾನಸಿಕಅಧಿಕಾರ. ಈ ಮಾನಸಿಕ ಅಧಿಕಾರಗುಣಗಳನ್ನು ನಾಶಮಾಡುತ್ತದೆ. ಏಕೆಂದರೆ ಗುಣವೆಂಬುದು ಜೀವಂತವಾದದ್ದು, ಸದಾ ಚಲಿಸುತ್ತಿರುವಂಥದ್ದು. ಬಹುಶಃ ವಿನಯವನ್ನು ರೂಡಿಸಿಕೊಳ್ಳಲುಸಾಧ್ಯವಿಲ್ಲ. ಪ್ರೀತಿಯನ್ನು ರೂಢಿಸಿಕೊಳ್ಳಲು ಸಾಧ್ಯವಿಲ್ಲ, ಹಾಗೆಯೇ ಗುಣವನ್ನು ಕೂಡರೂಢಿಸಿಕೊಳ್ಳಲು  ಸಾಧ್ಯವಿಲ್ಲ. ಇದೆ ಗುಣದ ಸೌಂದರ್ಯ, ಗುಣ ಯಾಂತ್ರಿಕವಾದದ್ದಲ್ಲ.
      ಅನೇಕ ಜಾತಿ,ಧರ್ಮ, ಮೂಢನಂಬಿಕೆ, ಭಯಗಳಿಗೆ ಒಗ್ಗಿಹೋಗಿರುವ, ರೂಢಿಗತವಾದ ಮನಸ್ಸು ತನ್ನನ್ನು ತಾನುಬಿಡಿಸಿಕೊಂಡು ಹೊಸ ಮನಸ್ಸು ಆಗುವುದುಸಾಧ್ಯವೇ? ಇದೇ ನಿಜವಾದ ಸಮಸ್ಯೆ. ಅಧಿಕಾರ ಎಂಬ ಮಾತನ್ನು ಇಲ್ಲಿಕಾನೂನಿನ ಅರ್ಥದಲ್ಲಿ ಬಳಸುತ್ತಿಲ್ಲ, ಸಂಪ್ರದಾಯದ ಅಧಿಕಾರ, ಜ್ಞಾನದ ಅಧಿಕಾರ, ಅನುಭವದ ಅಧಿಕಾರ, ಎಂಬ ಅರ್ಥದಲ್ಲಿಬಳಸುತ್ತಿದ್ದೇನೆ. ನಮ್ಮ ಮನಸ್ಸು ಯಾವಾಗಲೂಸುರಕ್ಷತೆಯನ್ನು ಹುಡುಕುತ್ತಿರುತ್ತದೆ. ತಳಮಳಕ್ಕೆ ಒಳಗಾಗದೆ, ನೆಮ್ಮದಿಯಾಗಿರಲು ಒಂದು ತಾಣವನ್ನು ಬಯಸುತ್ತಿರುತ್ತದೆ. ಅಧಿಕಾರ ಅಂಥ ಸುರಕ್ಷಿತ ತಾಣವನ್ನುಒದಗಿಸುತ್ತದೆ‌. ಇದು ತನ್ನಷ್ಟಕ್ಕೇ ತಾನೇಒಪ್ಪಿಕೊಂಡ ವಿಚಾರದ ಅಧಿಕಾರವಾಗಿರಬಹುದು, ಅಥವಾದೇವರನ್ನು ಕುರಿತ ಧಾರ್ಮಿಕ ವಿಚಾರವೇಅಧಿಕಾರವಾಗಿರಬಹುದು, ಯಾವ ವಿಚಾರವೂ ಧಾರ್ಮಿಕಮನುಷ್ಯನಿಗೆ ನಿಜವಾದುದ್ದಲ್ಲ, ವಾಸ್ತವದುದ್ದಲ್ಲ. ನೀವು ದೇವರನ್ನು ನಂಬಬಹುದು, ಆದರೂ ಅದು ಕೇವಲಕಲ್ಪನೆ. “ದೇವರನ್ನು ಕಾಣಬೇಕಾದರೆ ಕಲ್ಪನೆಯನ್ನು ಪೂರ್ಣವಾಗಿ ನಾಶಮಾಡಬೇಕು”. ಯಾಕೆಂದರೆ ಹಳೆಯ ಮನಸ್ಸು ಭೀತಮನಸ್ಸು. ಆಸೆ ತುಂಬಿದ ಮನಸ್ಸು, ಸಾಯುವಬಗ್ಗೆ, ಬದುಕುವ ಬಗ್ಗೆ, ಸಂಬಂಧಗಳಬಗ್ಗೆ ಕಳವಳ ತುಂಬಿದ ಮನಸ್ಸು. ಗೊತ್ತಿದ್ದೋ ಇಲ್ಲದೆಯೋ ಸದಾ ಶಾಶ್ವತವನ್ನು, ಸುರಕ್ಷತೆಯನ್ನುಬಯಸುವ ಮನಸ್ಸು ಸಿದ್ಧ ಅಧಿಕಾರದತ್ತಾವಾಲುತ್ತದೆ. (ಇಲ್ಲಿ ಅಧಿಕಾರ ಅನ್ನುವಪದ ಪೂರ್ವಗ್ರಹವಾಗಿ ಕಾಡುವ ನಮ್ಮ ಹಳೆಯಜ್ಞಾನ ಮತ್ತು ನಮ್ಮ ಸಿದ್ದಾಂತಗಳಅತಿಯಾದ ಅಭಿಮಾನ, ಅದು ನನ್ನುದುಅನ್ನುವ ಅಧಿಕಾರಯುತ ನಿಲುವನ್ನು ಸೂಚಿಸುತ್ತದೆ.)
(ಮುಂದುವರೆಯುವುದು)
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
: ಕಣಬ್ರಹ್ಮವೆಂಕಿ (ವೆಂಕಟೇಶ ಭಂಡಾರಿ), ಭಂಡಾರಿ ವಾರ್ತೆ

0 thoughts on “ಅಧಿಕಾರದಲ್ಲಿ ಗುಣವಿಲ್ಲ, ಹಳೆಯ ಮನಸ್ಸು ಅಧಿಕಾರಕ್ಕೆ ಬದ್ಧವಾದದ್ದು – (ಧ್ಯಾನ-3)

  1. ಮನುಷ್ಯ ಮಾನವನಾಗಬೇಕು…
    ಮನುಷ್ಯ ಮಾನವಂತನಾಗಬೇಕು….ಈ ನಿಟ್ಟಿನಲ್ಲಿ ಜಿಡ್ಡು ಪ್ರವಚನ ದಾರಿದೀಪ.ಮುಂದುವರೆಯಲಿ….

Leave a Reply

Your email address will not be published. Required fields are marked *