January 18, 2025
55

ಧ್ಯಾನ-16 

ನಾವು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಬೇಕಾದರೆ ಪದಗಳಿಗೆ ಸಿಕ್ಕಿಬೀಳದಿರುವುದು ಮುಖ್ಯ. ಏಕೆಂದರೆ “ದೇವರು” ಎಂಬ ಪದ ನಿಮ್ಮ ಮಟ್ಟಿಗೆ ಒಂದು ಅರ್ಥವನ್ನು ಹೊಂದಿರಬಹುದು.ನನ್ನ ಮಟ್ಟಿಗೆ ಆ ಪದಕ್ಕೆ ಇನ್ನೊಂದು ಅರ್ಥ ಇರಬಹುದು ಅಥವಾ ಅರ್ಥವೇ ಇಲ್ಲದಿರಲೂಬಹುದು .ಆದ್ದರಿಂದ ನಮ್ಮಲ್ಲಿ ಪರಸ್ಪರ ಅರ್ಥ ಮಾಡಿಕೊಳ್ಳುವ ಉದ್ದೇಶ, ಪದಗಳನ್ನು ಮೀರಿಹೋಗುವ ಉದ್ದೇಶಗಳು ಇರದಿದ್ದರೆ ಸಂಪರ್ಕವೇ ಸಾಧ್ಯವಿಲ್ಲ. “ಸ್ವತಂತ್ರ” ಎಂಬ ಪದ ಯಾವುದರಿಂದಲೋ ಸ್ವತಂತ್ರವಾಗಿರುವುದು,ಎಂಬ ಅರ್ಥವನ್ನು ಕೊಡುತ್ತದೆ ಅಲ್ಲವೇ? ದುರಾಸೆ,ಅಸೂಯೆ, ರಾಷ್ಟ್ರೀಯತೆ,ಕೋಪ,ಇದು,ಅದು,ಇತ್ಯಾದಿಗಳಿಂದ ಮುಕ್ತನಾಗಿರುವುದು ಎಂಬ ಅರ್ಥ ಆ ಪದಕ್ಕೆ ಇದೆ.ಆದರೆ “ಸ್ವತಂತ್ರ” ಎಂಬ ಪದಕ್ಕೆ ಸ್ವತಂತ್ರವಾಗಿ ಇರುವುದು ಎಂಬ ಇನ್ನೊಂದು ಅರ್ಥವೂ ಇದೆ.ಅದು ಮುಖ್ಯ ಎಂದು ತಿಳಿದ್ದೇನೆ.

ಪದಗಳಿಲ್ಲದ ಆಲೋಚನೆ ಇದೆಯೇ?ನಮ್ಮ ಮನಸ್ಸಿನಲ್ಲಿ ಪದಗಳು ಕಿಕ್ಕಿರಿದು ಇರುವಾಗ ನಮಗೆ ಪರಿಚಿತವಾಗಿರುವಂತ ಆಲೋಚನೆಗಳಿರುವುದಿಲ್ಲ.ಪದಗಳಿಲ್ಲದ,ಸಂಕೇತ, ಸಂಜ್ಞೆಗಳಿಲ್ಲದ,ಸೀಮೆಗಳಿಲ್ಲದ,ಮಿತಿ ಇಲ್ಲದ ಕ್ರಿಯೆಯಾಗಿರುತ್ತದೆ.ಅದಕ್ಕೆ ಮಿತಿ ಇಲ್ಲ. ಪದವೇ ಆಲೋಚನೆಯ ಮಿತಿ.

ನಮ್ಮ ಮನಸ್ಸಿನಲ್ಲಿರುವ ಪದವೇ ನಮ್ಮ ಆಲೋಚನೆಯ ಗಡಿರೇಖೆಯಾಗುತ್ತದೆ.ಸೀಮೆಯಾಗುತ್ತದೆ.ಪದಗಳೊಡನೆ ವ್ಯವಹರಿಸದ ಮನಸ್ಸು ಆಸೀಮವಾಗಿ,ಮಿತಿಗಳಿಲ್ಲದ್ದಾಗಿ ಬಂಧನ ಇಲ್ಲದ್ದಾಗಿ ಇರುತ್ತದೆ. ಈಗ ಪ್ರೀತಿ ಎಂಬ ಪದವನ್ನೇ ತೆಗೆದುಕೊಂಡು ನಿಮ್ಮಲ್ಲಿ ಎಚ್ಚರಗೊಳ್ಲುವ ಸಂಗತಿಗಳನ್ನು ಗಮನಿಸಿ.ನಾನು ಪ್ರೀತಿ ಎಂಬ ಪದವನ್ನು ನುಡಿಯುತ್ತಿದ್ದಂತೆ ನಿಮ್ಮ ಮುಖದ ಮೇಲೆ ಮುಗುಳ್ನಗೆ ಮೂಡುತ್ತಿದೆ.ನಮ್ಮಲ್ಲಿ ಎಲ್ಲಾ ಬಗೆಯ ಧಾರ್ಮಿಕ, ಲೌಕಿಕ, ದೈಹಿಕ, ಆಧ್ಯಾತ್ಮಿಕ, ಕಲುಷಿತ, ಪರಿಶುದ್ಧ, ಅನಂತ ಇತ್ಯಾದಿ ಭಾವನೆ,ಐಡಿಯಾಗಳೆಲ್ಲ ಹುಟ್ಟುವುದಕ್ಕೆ ನಿಮ್ಮ ಮನಸ್ಸು ಪ್ರೀತಿ ಎಂಬ ಪದದಿಂದಲೂ,ಆ ಪದದ ಅರ್ಥ ಸೂಚನೆಗಕಳಿಂದಲೂ ಮುಕ್ತವಾಗಿರಬೇಕು.

ಮನಸ್ಸು ಸೃಷ್ಟಿಯಾಗಿರುವುದೇ ಪದಗಳಿಂದ. ಪದಗಳ ಜೊತೆಗೆ ಇನ್ನೂ ಹಲವು ಸಂಗತಿಗಳು ಮನಸ್ಸನ್ನು ನಿರ್ಮಿಸುತ್ತವೆ.ನಿಮ್ಮ ಮನಸ್ಸು ಅಸೂಯೆ ಎಂಬ ಪದದಿಂದ ಮುಕ್ತವಾಗಿರಬಲ್ಲುದೇ? ..ಪ್ರಯೋಗ ಮಾಡಿ ನೋಡಿ.ಆಗ ದೇವರು,ಸತ್ಯ, ದ್ವೇಷ, ಅಸೂಯೆ ಎಂಬಂಥ ಪದಗಳೆಲ್ಲ ನಿಮ್ಮ ಮನಸ್ಸಿನ ಮೇಲೆ ಎಷ್ಟು ಅಗಾಧವಾದ ಪರಿಣಾಮ ಬೀರುತ್ತವೆ ಎಂದು ನಿಮಗೆ ತಿಳಿಯುತ್ತದೆ.ನ್ಯುರೊಲಾಜಿಕಲ್ ಆಗಿ, ಸೈಕಲಾಜಿಕಲ್ ಆಗಿ ಈ ಪದಗಳಿಂದ ಮನಸ್ಸು ಮುಕ್ತವಾಗಿ ಇರಬಲ್ಲುದೇ?.. ಹಾಗೆ ಮುಕ್ತವಾಗಿದ್ದರೆ ಅದು ಅಸೂಯೆ ವಾಸ್ತವವನ್ನು ಕಾಣಲಾರದು.ಗುರುತಿಸುವ ಕೆಲಸವನ್ನು ಸಹ ಪದಗಳೇ ನಿರ್ವಹಿಸುತ್ತವೆ.ಭಾವವೊಂದನ್ನು ಪದದ ಮುಖಾಂತರ ಗುರುತಿಸಿದಾಗ ಆ ಭಾವಕ್ಕೆ ನಾವೇ ಸಾತತ್ಯವನ್ನು ನೀಡಿರುತ್ತೇವೆ.ನಾವು ಪದಗಳನ್ನು ಮೀರಿ ಸತ್ಯವನ್ನು ಕಾಣುವ ಕೆಲಸ ಮಾಡಬೇಕು, ಆಗ ಶುದ್ಧವಾದ ಮನಸ್ಸು ಕಾಣಬಹುದು.

ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
✍🏻: ವೆಂಕಟೇಶ ಭಂಡಾರಿ ಕುಂದಾಪುರ

Leave a Reply

Your email address will not be published. Required fields are marked *