ಧ್ಯಾನ-20
ಸುಖವೆಂದರೇನು? ಬಯಸಿದ್ದನ್ನು ಪಡೆಯುವುದೇ ಸುಖವೆಂದು ಕೆಲವರು ಹೇಳುತ್ತಾರೆ. ನಿಮಗೆ ಕಾರು ಬೇಕು,ಕಾರು ಕೊಳ್ಳುತ್ತೀರಿ,ನಿಮಗೆ ಸುಖವೆನಿಸುತ್ತದೆ.ನನಗೆ ಸೀರೆಯೋ ಬಟ್ಟೆಯೋ ಬೇಕು,ಯೂರೋಪಿಗೆ ಹೋಗಬೇಕು. ಇವು ಈಡೇರಿದರೆ ಸುಖವಾಗಿರುತ್ತೇನೆ.ನಾನು ಆಗಬೇಕೆಂದು ಬಯಸಿದ್ದು ಆದರೆ,ಬಯಸಿದ್ದು ನನಗೆ ಸಿಕ್ಕರೆ ಸುಖವಾಗಿರುತ್ತೇನೆ,ಇಲ್ಲದಿದ್ದರೆ ಅಸುಖಿಯಾಗುತ್ತೇನೆ.ನೀವು ಬಯಸಿದ್ದು ಸಿಗುವವರೆಗು ನೀವು ಸುಖಿ ಇಲ್ಲದಿದ್ದಾಗ ಅಸುಖಿ.ಕೇವಲ ಶ್ರೀಮಂತ ಬಡವರಿಗೆ ಸಂಬಂಧಿಸಿದ್ದಲ್ಲ ಇದು ನಮ್ಮೆಲ್ಲರಿಗು ಸಂಬಂಧಿಸಿದ್ದು.ಶ್ರೀಮಂತರೇ ಆಗಲಿ ಬಡವರೇ ಆಗಲಿ ತಮಗೆಂದು ತಮ್ಮ ಕುಟುಂಬಕ್ಕೆಂದು ತಮ್ಮ ಸಮಾಜಕ್ಕೆಂದು ಏನನ್ನೋ ಬಯಸುತ್ತಲೇ ಇರುತ್ತಾರೆ. ಅವರನ್ನು ತಡೆದರೆ ,ಅವರ ಬಯಕೆಗೆ ಅಡ್ಡಿಯುಂಟಾದರೆ ಅಸುಖಿಗಳಾಗುತ್ತಾರೆ.ನೀವು ಸಂತೋಷವಾಗಿದ್ದೀರಿ ಅಂದಕೂಡಲೇ ಸಂತೋಷ ಇಲ್ಲವಾಗಿರುತ್ತದೆ ನೀವು ಅದನ್ನು ಗಮನಿಸಿದ್ದೀರ?ಸುಖದ ಬೆನ್ನು ಹತ್ತಿಹೋಗಲು ಸಾಧ್ಯವಿಲ್ಲ. ಸಂತೋಷ ಹುಡುಕಬೇಕಾದ ಸಂಗತಿಯಲ್ಲ,ಅದು ಬರುತ್ತದೆ.ನೀವು ಅದನ್ನು ಹುಡುಕಿದರೆ ತಪ್ಪಿಸಿಕೊಳ್ಳುತ್ತದೆ.
ಮನಸ್ಸು ಎಂದೂ ಸಂತೋಷವನ್ನು ಕಂಡುಕೊಳ್ಳಲಾರದು. ಸಂತೋಷವೆಂಬುದು ಸಂವೇದನೆಯಂತೆ ಬೆನ್ನುಹತ್ತಿ ಕಂಡುಕೊಳ್ಳಬಹುದಾದದ್ದಲ್ಲ. ಸಂವೇದನೆಯನ್ನು ಅರಸಿ ಮತ್ತೆ ಮತ್ತೆ ಪಡೆಯಬಹುದು. ಆದರೆ ಅದನ್ನು ಪಡೆದಂತೆಲ್ಲ ಕಳೆದು ಹೋಗುತ್ತಲೇ ಇರುತ್ತದೆ. ಸಂತೋಷವನ್ನು ಮಾತ್ರ ಅರಸಿ ಪಡೆಯಲು ಸಾಧ್ಯವಿಲ್ಲ. ಸಂತೋಷದ ನೆನಪು ಸಂವೇದನೆ ಅಷ್ಟೇ. ಸಂತೋಷ ಸಂವೇದನೆ ಅಲ್ಲ.
ನಿಮಗೆ ಗೊತ್ತಿರುವುದು ಏನಿದ್ದರೂ ಗತಕಾಲವೇ ಹೊರತು ವರ್ತಮಾನವಲ್ಲ.ಗತಕಾಲವೆನ್ನುವುದೊಂದು ಸಂವೇದನೆ,ಒಂದು ಪ್ರತಿಕ್ರಿಯೆ,ಒಂದು ನೆನಪು. ನಾನು ಸಂತೋಷವಾಗಿದ್ದೇನೆ ಎಂದು ನೆನಪಿಸಿಕೊಳ್ಳುತ್ತೀರಿ.ನೆನಪಿಸುವು
ಸಂತೋಷವೆಂಬುದರ ನಿಜವಾದ ಅರ್ಥವನ್ನು ತಿಳಿದುಕೊಳ್ಳಲು ನಾವು ಸ್ವ-ಜ್ಞಾನದ ನದಿಯ ಅನ್ವೇಷಣೆಯಲ್ಲಿ ತೊಡಗಬೇಕು.ಈ ನದಿಗೆ ಮೂಲವಿದಿಯೇ? ಮೂಲದಿಂದ ಅಂತ್ಯದವರೆಗೂ ಪ್ರತಿಯೊಂದು ಹನಿಯು ನದಿಯಾಗಿಸಿರುತ್ತದೆ,ನದಿಯ ಮೂಲಕ್ಕೆ ಹೋಗಿ ಸಂತೋಷವನ್ನು ಪಡೆಯುತ್ತೇವೆ ಅನ್ನುವುದು ತಪ್ಪುಕಲ್ಪನೆ.ಈ ಸ್ವ-ಜ್ಞಾನದ ನದಿಯಲ್ಲಿ ನೀವು ಎಲ್ಲಿ ತೇಲುತ್ತಿದ್ದೀರೋ ಅಲ್ಲೇ ಸಂತೋಷವನ್ನು ಕಂಡುಕೊಳ್ಳಬೇಕು.
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
ಭಂಡಾರಿವಾರ್ತೆ: ವೆಂಕಟೇಶ ಭಂಡಾರಿ, ಕುಂದಾಪುರ.