
ಮಂಗಳೂರು: ಆಗಸ್ಟ್ 04 ರಂದು, ಮಂಗಳೂರಿನಲ್ಲಿ ನಡೆದ ಉತ್ತರ ವಲಯ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ 9ನೇ ತರಗತಿಯ ಪ್ರೀತಿ ಭಂಡಾರಿ ಹಾಗೂ 7ನೇ ತರಗತಿಯ ಲೀಕ್ಷಿತಾ ಭಂಡಾರಿ ಪ್ರಥಮ ಸ್ಥಾನ ಪಡೆದಿದ್ದು, ಆಗಸ್ಟ್ 22 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.


ಮೂಲತಃ ಮಡಿಕೇರಿಯ ಕಡಗದಾಳು ನಿವಾಸಿಗಳಾದ, ಪ್ರಸ್ತುತ ಸುರತ್ಕಲ್ ನಲ್ಲಿ ವಾಸಿಸುತ್ತಿರುವ ಸಂತೋಷ್ ಭಂಡಾರಿ ಮತ್ತು ಜ್ಯೋತಿ ಸಂತೋಷ್ ದಂಪತಿಯ ಪುತ್ರಿಯರಾಗಿರುವ ಇವರು, ಸುರತ್ಕಲ್ ನ ಹೋಲಿ ಫ್ಯಾಮಿಲಿ ಶಾಲೆಯ ವಿದ್ಯಾರ್ಥಿನಿಯರಾಗಿದ್ದಾರೆ. ಇವರಿಬ್ಬರು ನಿತಿನ್. ಎನ್. ಸುವರ್ಣ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.
ವರದಿ: ಎಸ್.ಕೆ.ಬಂಗಾಡಿ, ಸಂಪಾದಕರು, ಭಂಡಾರಿ ವಾರ್ತೆ