September 20, 2024

ಭಾರತ ಸರ್ಕಾರಿ ಉದ್ಯಮವಾದ ಒಎನ್‌ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ನಲ್ಲಿ ಗ್ರಾಜುಯೇಟ್‌ ಮತ್ತು ಟೆಕ್ನೀಷಿಯನ್ ಅಪ್ರೆಂಟಿಸ್ ಟ್ರೇನಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.

ಭಾರತ ಸರ್ಕಾರಿ ಉದ್ಯಮವಾದ ಒಎನ್‌ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ನಲ್ಲಿ ಗ್ರಾಜುಯೇಟ್‌ ಮತ್ತು ಟೆಕ್ನೀಷಿಯನ್ ಅಪ್ರೆಂಟಿಸ್ ಟ್ರೇನಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಟ್ರೇನಿ ಹುದ್ದೆಗಳಿಗೆ 2018, 2019, 2020ನೇ ಸಾಲಿನಲ್ಲಿ ಪಾಸ್‌ ಆದ ಇಂಜಿನಿಯರಿಂಗ್ ಪದವೀಧರರು ಮತ್ತು ಡಿಪ್ಲೊಮ ವಿದ್ಯಾರ್ಹತೆ ಉಳ್ಳವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಗ್ರಾಜುಯೇಟ್ ಅಪ್ರೆಂಟಿಸ್ ಟ್ರೇನಿ ವಿಭಾಗವಾರು ಹುದ್ದೆಗಳ ವಿವರ

ಕೆಮಿಕಲ್

8

ಇಲೆಕ್ಟ್ರಿಕಲ್ / ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್‌

3

ಇಲೆಕ್ಟ್ರಾನಿಕ್ಸ್ ಮತ್ತು ಕಂಮ್ಯೂನಿಕೇಷನ್ / ಇಲೆಕ್ಟ್ರಾನಿಕ್ಸ್‌ ಮತ್ತು ಇನ್‌ಸ್ಟ್ರುಮೆಂಟೇಶನ್‌ / ಇನ್‌ಸ್ಟ್ರುಮೆಂಟೇಶನ್

2

ಮೆಕ್ಯಾನಿಕಲ್


4

 


ಟೆಕ್ನೀಷಿಯನ್ ಅಪ್ರೆಂಟಿಶಿಪ್‌ ಟ್ರೇನಿ ವಿಭಾಗವಾರು ಹುದ್ದೆಗಳ ವಿವರ

ಕೆಮಿಕಲ್

1

ಇಲೆಕ್ಟ್ರಿಕಲ್ / ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್‌

3

ಮೆಕ್ಯಾನಿಕಲ್

4

ವಿದ್ಯಾರ್ಹತೆ

ಹುದ್ದೆಗಳಿಗೆ ಸಂಬಂಧಿಸಿದ ವಿಭಾಗದಲ್ಲಿ ಇಂಜಿನಿಯರಿಂಗ್ ಮತ್ತು ಡಿಪ್ಲೊಮ ಪಾಸ್‌ ಆಗಿರಬೇಕು.

ಗ್ರಾಜುಯೇಟ್ ಅಪ್ರೆಂಟಿಸ್ ಟ್ರೇನಿ ಹುದ್ದೆಗಳಿಗೆ ರೂ.10,000, ಟೆಕ್ನೀಷಿಯನ್ ಅಪ್ರೆಂಟಿಶಿಪ್ ಟ್ರೇನಿ ಹುದ್ದೆಗಳಿಗೆ ರೂ.8,000 ಸ್ಟ್ರೈಫಂಡ್ ನೀಡಲಾಗುತ್ತದೆ.

ಆಯ್ಕೆ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ ಲಿಸ್ಟ್‌ ಮಾಡಿ ಸಂದರ್ಶನಕ್ಕೆ ಆಹ್ವಾನಿಸಿ ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಮಾತ್ರ ನೇಮಿಸಿಕೊಳ್ಳಲಾಗುತ್ತದೆ. ನಂತರ ಸದರಿ ಹುದ್ದೆಗಳ ಮೇಲೆ ಅಭ್ಯರ್ಥಿಗೆ ಯಾವುದೇ ಹಕ್ಕು ಇರುವುದಿಲ್ಲ.

ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್‌ ವಿಳಾಸ www.ompl.co.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಈ ಕೆಳಗಿನ ನೋಟಿಫಿಕೇಶನ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿ ಓದಿ ತಿಳಿಯಿರಿ.

ನೋಟಿಫಿಕೇಶನ್‌

1 thought on “ಒಎನ್‌ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ನಲ್ಲಿ ಉದ್ಯೋಗಾವಕಾಶ

Leave a Reply

Your email address will not be published. Required fields are marked *