January 18, 2025
divya2

 ಉಜಿರೆಯ ಶ್ರೀ ವಸಂತ ಭಂಡಾರಿ ಮತ್ತು ಶ್ರೀಮತಿ ಮೋಹಿನಿ ವಸಂತ ಭಂಡಾರಿಯವರ ಹಿರಿಯ ಮಗಳಾದ ದಿವ್ಯ ಉಜಿರೆ ಇವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇವರು ಶಾಲಾ ದಿನಗಳಿಂದಲೂ ಪ್ರತಿಭಾವಂತೆ. ನೃತ್ಯ ಮತ್ತು ಹಾಡುಗಾರಿಕೆಯಲ್ಲಿ ಜಿಲ್ಲಾ ಮಟ್ಟದಲ್ಲಿ,ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದರು. ಪತ್ರಿಕೋದ್ಯಮದಲ್ಲಿ ಪದವಿ ಪೂರೈಸಿದ ಇವರು ಮಂಗಳೂರಿನ ಆಕಾಶವಾಣಿಯಲ್ಲಿ ವಾಯ್ಸ್ ತರಬೇತಿ ಪಡೆದು ನಂತರ ಪ್ರಸಾರಭಾರತಿ ದೆಹಲಿಯಿಂದ ವಾಯ್ಸ್ ಆರ್ಟಿಕ್ಯುಲೇಶನ್ ಮತ್ತು ನರ್ಚರಿಂಗ್ ಇನ್ಷಿಯೇಟಿವ್  ತರಬೇತಿಯನ್ನೂ ಪಡೆದು ಕಳೆದ ನಾಲ್ಕು ವರ್ಷಗಳ ಕಾಲ ದಾಯ್ಜಿವರ್ಲ್ಡ್ ನಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಬೆಂಗಳೂರಿನ ಕಂಪೆನಿಯೊಂದರಲ್ಲಿ ಭಾಷಾ ಅನುವಾದ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾರೆ.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ ಪೂರೈಸಿ, ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು ಕಳೆದ ನಾಲ್ಕು ವರ್ಷಗಳಿಂದ ದೈಜಿವರ್ಲ್ಡ್ ನ ಉದ್ಯೋಗಿಯಾಗಿರುವ ದಿವ್ಯಾರವರಿಗೆ ನಮ್ಮ ಭಂಡಾರಿವಾರ್ತೆಯೊಂದಿಗೆ ಅವಿನಾಭಾವ ಸಂಬಂಧ. ನಮ್ಮ ಯಾವುದೇ ಕಾರ್ಯಕ್ರಮಗಳಿದ್ದರೂ ಭಾಗವಹಿಸುತ್ತಾ, ನಿರೂಪಣೆ ಮಾಡುತ್ತಾ, ಆಗಾಗ ಲೇಖನಗಳನ್ನು ಬರೆಯುತ್ತಾ, ಕನ್ನಡ ಭಾಷೆಯ ವರದಿಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸುತ್ತಾ, ಅವರಿಗೆ ದೊರೆತ ಸುದ್ದಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಭಂಡಾರಿವಾರ್ತೆಯ ಬೆಳವಣಿಗೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಾ ಬಂದಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದಿವ್ಯಾರಿಗೆ ಅವರ ತಂದೆ,ತಾಯಿ, ತಂಗಿ ನವ್ಯ ಭಂಡಾರಿ, ತಮ್ಮ ದೀಕ್ಷಿತ್ ಭಂಡಾರಿ, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಕುಟುಂಬಸ್ಥರು ಶುಭ ಹಾರೈಸುತ್ತಿದ್ದಾರೆ.

ಕುಮಾರಿ ದಿವ್ಯಾ ಉಜಿರೆಯವರಿಗೆ ಹುಟ್ಟು ಹಬ್ಬದ ಈ ಶುಭದಿನದಂದು ಶ್ರೀ ದೇವರು ಅವರ ಸಕಲ ಇಷ್ಠಾರ್ಥಗಳನ್ನೂ ನೆರವೇರಿಸಿ ಆಶೀರ್ವದಿಸಲಿ, ಭಂಡಾರಿವಾರ್ತೆಯೊಂದಿಗಿನ ನಿಮ್ಮ ಅನುಬಂಧ ಇನ್ನಷ್ಟು ಸದೃಡವಾಗಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಆಶಿಸುತ್ತಾ, ಭಂಡಾರಿವಾರ್ತೆ ತಂಡದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

 

Leave a Reply

Your email address will not be published. Required fields are marked *