
ತಾರಬಲ, ಚಂದ್ರಬಲ, ಯೋನಿಕೂಟ, ನಾಡಿಕೂಟಗಳನ್ನು ನೋಡಿಕೊಂಡೇ ವಿವಾಹ ಮಾಡುವ ಒಂದು ಸಾಂಪ್ರದಾಯವಿದೆ. ಆದರೆ ಈ ಬಗ್ಗೆ ಇದುವೇ ಶಾಸ್ತ್ರಸಮ್ಮತವೆಂದು ಹೇಳಾಲಾಗುವುದಿಲ್ಲ. ಕೆಲವೊಮ್ಮೆ ಎಲ್ಲಾ ಕೂಟ, ಮೇಳಾ ಮೇಳಿ ನೋಡಿದರೂ, ದಾಂಪತ್ಯ ಜೀವನ ಮುರಿದುಬೀಳುತ್ತದೆ ಯಾ ಸಾಂಸರಿಕ ಸುಖಭಂಗವಾಗುತ್ತದೆ. ಈ ಜ್ಯೋತಿಷ್ಯ ಶಾಸ್ತ್ರದಲ್ಲಿ ಹುಡುಗಿಯ ಗುಣಾವಾಗುಣ, ಹುಡುಗನ ಗುಣಗಳ ಲೆಕ್ಕಚಾರ ಮಾತ್ರ ತಿಳಿದರೆ ಸಾಕು, ಮೇಳಾ ಮೇಳಿಯ ಅಗತ್ಯವಿಲ್ಲ. ಯಾಕೆಂದರೆ ಮಹಾಶಾಸ್ತ್ರಜ್ಞ, ವೇದಜ್ಞನೂ, ಜ್ಯೋತಿಷ್ಯಜ್ಞನೂ ಆಗಿದ್ದ ಮಾಂಡವ್ಯ ಮಹರ್ಷಿಯು, ಯಾರು ಹುಡುಗ ಹುಡುಗಿಯರಲ್ಲಿ ಪ್ರೇಮಾಂಕುರವಾಗುವುದೋ, ಅದೇ ಶುಭ ಮೂಹೂರ್ತ. ಅವರ ಸಮ್ಮಿಳನಾಕಾಂಕ್ಷೆಯನ್ನು ಇತರರು ತಡೆಯಕೂಡದೆಂದು ಹೇಳಿದ್ದಾರೆ. ಆದರೆ ಈ ಕೂಟ ಸಾಳಾವಳಿಯನ್ನು ವೈದಿಕ ವಿದ್ವಾಂಸರು ಜ್ಯೋತಿಷ್ಯ ಶಾಸ್ತ್ರಕ್ಕೆ ಸೇರಿಸಿ ಶಾಸ್ತ್ರ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ.
