
ಕಾಲಸರ್ಪ ದೋಷದಿಂದ ಉಂಟಾಗುವ ತೊಡಕನ್ನು ಹೊಗಲಾಡಿಸಲು ನಾವು ಕೆಲವೊಂದು ಸುಲಭ ದಾರಿಯನ್ನು ಕಂಡುಕೊಳ್ಳಬಹುದು ಇದರಿಂದ ದೋಷ ದೂರವಾಗಿ ನಮಗೆ ಶುಭವಾಗಲಿದೆ.
ಕಾಲಸರ್ಪ ದೋಷಕ್ಕೆ ನಾಗಸಿಂಧೂರದಿಂದ ಇದೆ ಪರಿಹಾರ
ಪವಿತ್ರವೂ, ಆಕರ್ಷಣೆಯಿಂದ ಕಂಗೊಳಿಸುವ ನಾಗಸಿಂಧೂರವನ್ನು ಸ್ತ್ರೀಯರು, ಪುರುಷರು ಎಲ್ಲರೂ ಧರಿಸುವುದರಿಂದ ಶುಭಪ್ರದವಾಗಲಿದೆ. ಈ ನಾಗಸಿಂಧೂರದಲ್ಲಿ ಬಿಲ್ವ , ಸಮಿತ್ತುಗಳು, ಗಂಧದ ಚಕ್ಕೆಗಳು, ಸಂಜೀವಿನಿ ಚಕ್ಕೆ, ಭುಜಪತ್ರಿ, ರತ್ನಗಂಬಳಿ, ರುದ್ರಜಡೆ, ದೇವದಾರು ಸಮಿತ್ತುಗಳು, ಬಿಲ್ವದ ಕಾಯಿಗಳು, ಒಣಕೊಬ್ಬರಿ, ಕಗ್ಗಲಿ ಸಮಿತ್ತು… ಮುಂತಾದುವನ್ನು ಗೋವಿನ ತುಪ್ಪದಿಂದ ಹೋಮ ಮಾಡಿ, ನಾಗಸಿಂಧೂರವನ್ನು ಮಿಶ್ರಣ ಮಾಡುತ್ತಾರೆ.
ಈ ಸಿಂಧೂರವನ್ನು ಧರಿಸುವುದರಿಂದ ಶರೀರದಲ್ಲಿರುವ ಆಯಸ್ಕಾಂತ ಶಕ್ತಿ ಹೊರಹೋಗುವುದಿಲ್ಲ. ಜ್ಞಾಪಕಶಕ್ತಿ, ವರ್ಚಸ್ಸು ಕಂಡುಬರುತ್ತದೆ. ಇದನ್ನು ಹಣೆಯ ಮಧ್ಯದಲ್ಲಿ, ಕಂಠ ಭಾಗದಲ್ಲಿ ಧರಿಸಬೇಕು. ಇದರ ಧಾರಣೆಯಿಂದ ಸರ್ಪಗ್ರಹ ಭಾದೆ ಕಡಿಮೆಯಾಗಿ ಶುಭವಾಗಲಿದೆ.

ಪಂಚಭೂತ ಲಿಂಗಗಳಲ್ಲಿ ಶ್ರೀಕಾಳಹಸ್ತೀಶ್ವರ ಲಿಂಗ ಪ್ರಸಿದ್ಧವಾಗಿದೆ. ಇದೊಂದು ವಾಯು ಲಿಂಗವಾಗಿದೆ. ಇಲ್ಲಿ ಕಾಳಹಸ್ತೀಶ್ವರ ರಾಹುಕೇತು ಗ್ರಹ ಸ್ವರೂಪವಾಗಿದೆ. ಇಲ್ಲಿ ಕಾಳಹಸ್ತೀಶ್ವರನಿಗೆ 27 ನಕ್ಷತ್ರ, 9 ಗ್ರಹಗಳು ಕವಚವಾಗಿ ಅಲಂಕರಿಸಲಾಗಿದೆ.
ಯಜ್ಞ, ಹೋಮ, ಜಪ, ವ್ರತ ಇತರ ಶಾಂತಿ ಕ್ರಿಯೆಗಳನ್ನು ನಡೆಸಲು ಶಕ್ತಿ ಇಲ್ಲದವರು ಶಾಂತಿಗಾಗಿ ಶ್ರೀ ಕಾಳಹಸ್ತೀಶ್ವರನ ದರ್ಶನ ಮಾಡಿ ರಾಹುಕೇತು ಪೂಜೆ ಮಾಡಿಸಿದಲ್ಲಿ ದೋಷ ನಿವಾರಣೆಯಾಗಿ ಸತ್ಫಲಗಳನ್ನು ಹೊಂದುವರು.
ಶುಭವಾಗಲಿ
