January 18, 2025
108

      ಅಕ್ಟೋಬರ್ ತಿಂಗಳ 13 ಮತ್ತು14 ರಂದು ಬೆಂಗಳೂರಿನಲ್ಲಿ ನೆಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರೀತಿ ಭಂಡಾರಿ ದ್ವಿತೀಯ ಸ್ಥಾನ ಗಳಿಸಿದ್ದಾರೆ ಮತ್ತು ಲೀಕ್ಷಿತಾ ಭಂಡಾರಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
       ಸುರತ್ಕಲ್ ನ ಹೋಲಿ ಫ್ಯಾಮಿಲಿ ಸ್ಕೂಲ್ ನಲ್ಲಿ ಪ್ರೀತಿ ಭಂಡಾರಿ 9 ನೇ ತರಗತಿಯಲ್ಲಿ ಮತ್ತು ಲೀಕ್ಷಿತಾ ಭಂಡಾರಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಿತಿನ್. ಎನ್.ಸುವರ್ಣ ಇವರ ಮಾರ್ಗದರ್ಶನದಲ್ಲಿ ಕರಾಟೆ ಕಲಿಯುತ್ತಿರುವ ಇವರು ಮೂಲತಃ ಮಡಿಕೇರಿಯ ಕಡಗದಾಳು ನಿವಾಸಿಗಳಾಗಿದ್ದು, ಪ್ರಸ್ತುತ ಸುರತ್ಕಲ್ ನಲ್ಲಿ ವಾಸಿಸುತ್ತಿರುವ ಶ್ರೀ ಸಂತೋಷ್ ಭಂಡಾರಿ ಮತ್ತು ಶ್ರೀಮತಿ ಜ್ಯೋತಿ ಸಂತೋಷ್ ಭಂಡಾರಿ ಯವರ ಸುಪುತ್ರಿಯರು.
       ಇಂತಹ ಯುವಪ್ರತಿಭೆಗಳನ್ನು ಯಾವತ್ತೂ ಪ್ರೋತ್ಸಾಹಿಸುವ ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಕರಾಟೆಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ಇವರಿಗೆ ಶುಭ ಹಾರೈಸುತ್ತ, ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುವ ಲೀಕ್ಷಿತಾ ಭಂಡಾರಿ ಗೆದ್ದು ಬರಲಿ ಎಂದು ಸಮಸ್ತ ಭಂಡಾರಿ ಕುಟುಂಬದ ಪರವಾಗಿ ಶುಭ ಕೋರುತ್ತದೆ.
✍: ಭಾಸ್ಕರ ಭಂಡಾರಿ. ಸಿ.ಆರ್, ಶಿರಾಳಕೊಪ್ಪ ಭಂಡಾರಿ ವಾರ್ತೆ

 

2 thoughts on “ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರೀತಿ ಭಂಡಾರಿ ದ್ವಿತೀಯ ಸ್ಥಾನ ಮತ್ತು ಲೀಕ್ಷಿತಾ ಭಂಡಾರಿ ಪ್ರಥಮ ಸ್ಥಾನ

  1. thank you M/s. LIKHITHA & PREETHI on your success. Your hard work and love for karate is appreciated with recognition.

Leave a Reply

Your email address will not be published. Required fields are marked *