January 18, 2025
society
ಭಂಡಾರಿ ಸಮುದಾಯದ ಬಂಧುಗಳು ಹಾಗೂ ಸದಸ್ಯರ ಹಣಕಾಸಿನ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ ಭಂಡಾರಿ ಸಮಾಜದ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಎಂದೇ ಗುರುತಿಸಲ್ಪಟ್ಟಿರುವ ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಕಳೆದ 22 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, 2018 ರ ಜನವರಿ 3 ರಂದು ಬೆಂದೂರ್ ವೆಲ್ ನ ಏಸ್ಸೆಲ್ ವಿಲ್ಕಾನ್ ಕಟ್ಟಡದಲ್ಲಿ ಹವಾನಿಯಂತ್ರಿತ ನೂತನ ಕಛೇರಿಗೆ ಸ್ಥಳಾಂತರಗೊಂಡಿರುವುದು ನಿಮಗೆಲ್ಲಾ ತಿಳಿದಿರುವ ವಿಷಯವೇ.ಇದುವರೆಗೆ ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಬ್ಯಾಂಕಿಂಗ್ ಸೇವೆಗಳಾದ ಹಣ ವರ್ಗಾವಣೆ, ಠೇವಣಿ, ಗೃಹ ಸಾಲ,ಆಭರಣ ಈಡು ಸಾಲ, ವಾಹನ ಖರೀದಿ ಸಾಲ ಇನ್ನು ಮುಂತಾದ ಸೇವೆಗಳು ಲಭ್ಯವಿದ್ದು ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದರು.ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸುವ ಉದ್ದೇಶದಿಂದ ಇ-ಸ್ಟ್ಯಾಂಪಿಂಗ್ (ಠಸೆ ಕಾಗದ ಪತ್ರ) ಸೇವೆಯನ್ನು ಪ್ರಾರಂಬಿಸಲಾಗಿದೆ.
ಮಾರ್ಚ್ 17, 2018 ರ ಶನಿವಾರ ಕಚ್ಚೂರು ಸೊಸೈಟಿಯ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ ಭಂಡಾರಿಯವರು ಇ-ಸ್ಟ್ಯಾಂಪಿಂಗ್ ಅನುಮತಿ ಪತ್ರವನ್ನು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀಯುತ ಪದ್ಮನಾಭ ರವರಿಗೆ ಹಸ್ತಾಂತರಿಸುವುದರೊಂದಿಗೆ ಈ ಸೇವೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಈ ಶುಭ ಸಂದರ್ಭದಲ್ಲಿ ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಸಹಕಾರಿ ಸಂಘದ ನಿರ್ದೇಶಕರುಗಳು ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯು ಹೀಗೆಯೇ ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದು, ಜನಸ್ನೇಹಿ ಸಂಸ್ಥೆಯಾಗಿ ಚಿರಕಾಲ ಉಳಿಯಲಿ, ಬೆಳೆಯಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಮನಃಪೂರ್ವಕವಾಗಿ ಶುಭ ಹಾರೈಸುತ್ತದೆ.

 

ವರದಿ: ಶ್ರೀ ಸತೀಶ್ ಭಂಡಾರಿ.

ನಿರ್ದೇಶಕರು.

ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.

ಮಂಗಳೂರು.

Leave a Reply

Your email address will not be published. Required fields are marked *