ಭಂಡಾರಿ ಸಮುದಾಯದ ಬಂಧುಗಳು ಹಾಗೂ ಸದಸ್ಯರ ಹಣಕಾಸಿನ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ ಭಂಡಾರಿ ಸಮಾಜದ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಎಂದೇ ಗುರುತಿಸಲ್ಪಟ್ಟಿರುವ ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ನ ಪ್ರದಾನ ಕಚೇರಿ/ಶಾಖೆಯು ಕಳೆದ 22 ವರ್ಷಗಳಿಂದ ಕಂಕನಾಡಿ ಬೆಂದೂರ್ ವೆಲ್ ಕುನಿಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದು, ಜ.3 ರಂದು ಬೆಂದೂರ್ ವೆಲ್ ನ ಏಸ್ಸೆಲ್ ವಿಲ್ಕಾನ್ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.
ಹವಾನಿಯಂತ್ರಿತ ನೂತನ ಕಚೇರಿಯ ಉದ್ಘಾಟನೆಯನ್ನು ಸೊಸೈಟಿಯ ಅಧ್ಯಕ್ಷ ಎಂ.ಪಿ.ಬಾಲಕೃಷ್ಣ ಭಂಡಾರಿ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚಂದ್ರಶೇಖರ್ ಕೆ, ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಎಂ, ನಿರ್ದೇಶಕರಾದ ಜಿ.ಎಸ್.ಸತೀಶ್, ಗೋಪಾಲ ಭಂಡಾರಿ, ರಘುವೀರ್ ಭಂಡಾರಿ, ರಾಜಾ ಬಂಟ್ವಾಳ, ರವೀಂದ್ರನಾಥ ಉಳ್ಳಾಲ, ಸತೀಶ್ ಭಂಡಾರಿ, ಕೃಷ್ಣಾನಂದ, ಶೇಖರ ಭಂಡಾರಿ ಕಾರ್ಕಳ, ಶೇಖರ್ ಎಚ್, ಶೇಖರ ಭಂಡಾರಿ ಉಡುಪಿ, ಹರೀಶ್ ಭಂಡಾರಿ, ಸುಂದರ ಭಂಡಾರಿ ರಾಯಿ, ಭಾಸ್ಕರ ಭಂಡಾರಿ ಸುರತ್ಕಲ್, ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಕುಮಾರ್ ಕಟ್ಲ, ಮಾಜಿ ಅಧ್ಯಕ್ಷರಾದ ನಿರ್ಮಲ್ ಕುಮಾರ್, ರಾಜು ಭಂಡಾರಿ ಪಂಗಾಳ, ಸುಧಾಕರ ಕಲ್ಬಾವಿ, ಮಾಜಿ ನಿರ್ದೇಶಕರಾದ ದಿನೇಶ್ ಕುಮಾರ್ ಹಳೆಯಂಗಡಿ, ಎ.ಕೆ.ಭಂಡಾರಿ, ಪಾಂಡುರಂಗ ಭಂಡಾರಿ, ಅಶೋಕ್ ಜಿ, ಎಂ.ನಾಗೇಶ್ ಮತ್ತು ನ್ಯಾಯವಾದಿ ಶ್ರೀ ಮನೋರಾಜ್ ರಾಜೀವ್ ಉಪಸ್ಥಿತರಿದ್ದರು.
ವರದಿ:ಸತೀಶ್ ಭಂಡಾರಿ. ಪುತ್ತೂರು.
ನಿರ್ದೇಶಕರು. ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ. ಲಿ.