ಮಂಗಳೂರು- ಕಚ್ಚೂರು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಯ 2020-21ನೇ ಸಾಲಿನ ಅಭಿವೃದ್ದಿ ಸಾಧನೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ “ಸಾಧನಾ ಪ್ರಶಸ್ತಿ2021-22” ಪಡೆದಿರುತ್ತದೆ.
ಡಿಸೆಂಬರ್ 14 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಮಹಾಸಭೆಯಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಚ್ಚೂರು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಯ ಪರವಾಗಿ ಅಧ್ಯಕ್ಷ ಶ್ರೀ ಚಂದ್ರಶೇಖರ. ಕೆ ಹಾಗೂ ಪ್ರದಾನ ವ್ಯವಸ್ಥಾಪಕರಾದ ಪದ್ಮನಾಭ. ಎಂ ಸನ್ಮಾನ ಸ್ವೀಕರಿಸಿ ಪ್ರಶಸ್ತಿ ಪಡೆದರು.
ಸೊಸೈಟಿ ಯು ಸತತವಾಗಿ ಲಾಭ ಗಳಿಸಿ ಆಡಿಟ್ ವರ್ಗೀಕರಣ ದಲ್ಲಿ ಸತತ “ಏ”ವರ್ಗ ಪಡೆಯುತಿದ್ದು ಸತತವಾಗಿ ಡಿವಿಡೆಂಡ್ ನೀಡುತ್ತಿದೆ. ಹಾಲಿ ವರ್ಷದಲ್ಲಿ ಕೂಡಾ ಶೇ 20 % ಡಿವಿಡೆಂಟ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.
ಸೊಸೈಟಿಗೆ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಪ್ರಶಸ್ತಿ ಸಿಕ್ಕಿರುವುದು ನಮ್ಮ ಸಮಾಜಕ್ಕೊಂದು ಹೆಮ್ಮೆಯ ವಿಷಯ.
ಸಂಸ್ಥೆಯ ಸರ್ವೊತೋಮುಖ ಅಭಿವೃದ್ಧಿಗೆ ಕಾರಣರಾದ ಕಚ್ಚೂರು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ ಸಿಬ್ಬಂದಿವರ್ಗ ಸದಸ್ಯರು ಗ್ರಾಹಕರಿಗೆ ಸಂದ ಗೌರವ.
ಸಂಸ್ಥೆಯು 2020 – 21ರಲ್ಲಿ ಸುಮಾರು 66.76 ಕೋಟಿ ವ್ಯವಹಾರ ನಡೆಸಿ ರೂ.12.12 ಕೋಟಿ ಠೇವಣಿ ಹಾಗೂ ರೂ.10.33 ಕೋಟಿ ಸಾಲ ಸೌಲಭ್ಯ ದೊಂದಿಗೆ ರೂ. 25.35 ಲಕ್ಷ ಲಾಭ ಗಳಿಸಿದೆ.
1995 ರಲ್ಲಿ ಆರಂಭ ವಾದ ಸಂಸ್ಥೆಯು 25 ವರ್ಷ ಪೂರೈಸಿ ಯಶಸ್ವಿ ಬ್ಯಾಂಕಿಂಗ್ ಸೇವೆ ನೀಡುತ್ತಾ ಬರುತ್ತಿದೆ.
ಸ್ಥಾಪಕ ಅಧ್ಯಕ್ಷರಾಗಿ ಕೆ. ಎಸ್ ಪ್ರಕಾಶ್ ಕುಮಾರ್ ಸೇರಿದಂತೆ , ಸುಧಾಕರ ಕಲ್ಬಾವಿ ,ಬಿ . ಎಸ್ ಸತೀಶ್, ಪಾಂಗಾಳ ರಾಜು ಭಂಡಾರಿ , ಎಂ ಪಿ ಬಾಲಕೃಷ್ಣ ಭಂಡಾರಿ , ನಿರ್ಮಲ್ ಕುಮಾರ್ , ಪದ್ಮನಾಭ ಕೆ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಚಂದ್ರಶೇಖರ್ ಕುಳಾಯಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ .
ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಯು ಇನ್ನಷ್ಟು ಸಾಧನೆ ಮಾಡಲಿ ಆ ಮೂಲಕ ನಮ್ಮ ಸಮಾಜದ ಒಂದು ಶ್ರೇಷ್ಠ ಹಣಕಾಸು ಸಂಸ್ಥೆಯಾಗಿ ಹೊರಹೊಮ್ಮಲಿ, ಇಂತಹ ಹತ್ತು ಹಲವು ಪ್ರಶಸ್ತಿಗಳು ಒಲಿದು ಬರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸಿಕೊಂಡು ಈ ಸಂದರ್ಭದಲ್ಲಿ ಅಭಿನಂದಿಸುತ್ತದೆ.
-ಭಂಡಾರಿ ವಾರ್ತೆ