January 18, 2025
Kachuru Society 3

ಬಂಟ್ವಾಳ : ಕಚ್ಚೂರು ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ನೂತನ ಬಂಟ್ವಾಳ ಶಾಖೆಯನ್ನು ಸೊಸೈಟಿ ಅಧ್ಯಕ್ಷ ಚಂದ್ರಶೇಖರ್ ಕೆ. ಅವರು ಬಂಟ್ವಾಳ ಬೈಪಾಸ್ ಶ್ರೀ ವಿನಾಯಕ ಕಾಂಪ್ಲೆಕ್ ಪ್ರಥಮ ಮಹಡಿಯಲ್ಲಿ ಜ. 1 ರಂದು ದೀಪ ಬೆಳಗಿಸಿ ಉದ್ಘಾಟಿಸಿದರು.


ಬಳಿಕ ಚಂದ್ರಶೇಖರ್ ಕುಳಾಯಿ ಮಾತನಾಡಿ ಸೊಸೈಟಿಯು ಕಳೆದ 25 ವರ್ಷಗಳಿಂದ ಗ್ರಾಹಕರ ವಿಶ್ವಾಸಾರ್ಹ ಆರ್ಥಿಕ ಸೇವೆಯಲ್ಲಿ ತೊಡಗಿ ಕೊಂಡಿದ್ದು ಸತತ ಲಾಭಗಳಿಕೆ, ಎಲ್ಲಾ ಶಾಖೆಗಳು ಗಣಕೀಕೃತ ಲೆಕ್ಕಪತ್ರ ವ್ಯವಸ್ಥೆ ಹೊಂದಿರುವುದು.


ಮಂಗಳೂರು, ಸುರತ್ಕಲ್, ಉಡುಪಿ, ಬಂಟ್ವಾಳ ನಾಲ್ಕು ಶಾಖೆಗಳನ್ನು ಹೊಂದಿದೆ. ಸರಕಾರದ ಅಡಿಟ್‍ನಲ್ಲಿ ವರ್ಗೀಕರಣದಲ್ಲಿ ಸತತ `ಎ’ ವರ್ಗ ಪಡೆದ ಸಾಧನೆ ಮಾಡಿದೆ. ಸತತ ಲಾಭಗಳಿಕೆ, ಹಾಗೂ ಸದಸ್ಯರಿಗೆ ಗರಿಷ್ಠ ಪ್ರಮಾಣದ ಡಿವಿಡೆಂಡ್ ಸತತ ನೀಡುತ್ತ ಬಂದಿರುವುದು ಸಂಸ್ಥೆಯ ಪ್ರಗತಿಗೆ ಸಾಕ್ಷಿಯಾಗಿದೆ ಎಂದರು.


ಬಂಟ್ವಾಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಗೋಪಾಲ ಭಂಡಾರಿ ಟೇಪ್ ಕತ್ತರಿಸಿ ಶಾಖಾ ಕಟ್ಟಡ ಉದ್ಘಾಟಿಸಿದರು. ಅಮ್ಟಾಡಿ ಗ್ರಾ.ಪಂ. ಸದಸ್ಯ ಬಾಬು ಭಂಡಾರಿ ಅಜೆಕಲ ಭದ್ರತಾ ಕೋಶಕ್ಕೆ ನಿ„ ಸಮರ್ಪಣೆ ನಡೆಸಿದರು. ಬಂಟ್ವಾಳ ಪುರಸಭಾ ಸದಸ್ಯೆ ಶಶಿಕಲಾ ಪ್ರಭಾಕರ್ ಪ್ರಥಮ ಠೇವಣಿ ಪತ್ರವನ್ನು ಬಿಡುಗಡೆ ಮಾಡಿದರು.


ಉಪಾಧ್ಯಕ್ಷ ರಾಮ ಭಂಡಾರಿ ಹೆಚ್., ನಿರ್ದೇಶಕರಾದ ಭಾಸ್ಕರ್ ಕೆ. , ರಘುವೀರ ಭಂಡಾರಿ, ಸುಂದರ ಭಂಡಾರಿ ರಾಯಿ, ಹರೀಶ್ ಭಂಡಾರಿ, ರವೀಂದ್ರನಾಥ್ ಉಳ್ಳಾಲ್, ಬಿ.ಎಸ್. ಭಂಡಾರಿ, ಶಶಿಧರ ಕಾರ್ಕಳ, ಕುಮಾರ್ ಭಂಡಾರಿ, ಶೇಖರ್ ಹೆಚ್., ಕಟ್ಟಡ ಮಾಲಕ ಶ್ರೀನಿವಾಸ್, ಶಾಖಾ ವ್ಯವಸ್ಥಾಪಕಿ ಬಬಿತಾ, ಸಿಬ್ಬಂದಿಗಳಾದ ನಿಶ್ಮಿತಾ, ಸೋಹನ್ ಮತ್ತು ಸದಸ್ಯರು ಉಪಸ್ಥಿತರಿದ್ದರು.


ಬೆಳಗ್ಗೆ ಗಣಹೋಮ ಹಾಗೂ ಲಕ್ಷ್ಮೀ ಪೂಜೆಯೊಂದಿಗೆ ಸ್ಥಳಾಂತರಿತ ಶಾಖೆಯನ್ನು ಉದ್ಘಾಟಿಸಲಾಯಿತು.


ಮುಖ್ಯ ಕಾರ್ಯನಿರ್ವಹಣಾ„ಕಾರಿ ಪದ್ಮನಾಭ ಎಂ. ಪ್ರಸ್ತಾವನೆ ನೀಡಿದರು. ನಿರ್ದೇಶಕರಾದ ರಾಜಾ ಬಂಟ್ವಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ದಿವಾಕರ ಶಂಭೂರು ವಂದಿಸಿದರು.

ವರದಿ : ರಾಜಾ ಬಂಟ್ವಾಳ

Leave a Reply

Your email address will not be published. Required fields are marked *