ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ನೂತನ ಆಡಳಿತ ಮೋಕ್ತೆಸರರಾಗಿ ಬೆಂಗಳೂರಿನ ಉದ್ಯಮಿ ಶ್ರೀಯುತ ಲಕ್ಷ್ಮಣ ಕರಾವಳಿಯವರು ಆಯ್ಕೆಯಾಗಿರುತ್ತಾರೆ. ಕಾಡಬೆಟ್ಟು ವೆಂಕಪ್ಪ ಭಂಡಾರಿ ಮತ್ತು ಗಿರಿಜಾ ವೆಂಕಪ್ಪ ಭಂಡಾರಿಯವರ ಮಗನಾದ ಶ್ರೀ ಲಕ್ಷ್ಮಣ್ ಕರಾವಳಿಯವರು ಬೆಂಗಳೂರಿನಲ್ಲಿ ಕರಾವಳಿ ಇಂಟರ್ನೆಟ್ ಮತ್ತು ಕೇಬಲ್ ನೆಟ್ವರ್ಕ್ಸ್ ಎಂಬ ಉದ್ದಿಮೆ ಆರಂಭಿಸಿ, ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿ, ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸಿ, ನೂರಾರು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಿ, ಭಂಡಾರಿ ಸಮಾಜದ ಬಂಧುಗಳಿಗೆ ಆಪತ್ಕಾಲದಲ್ಲಿ ನೆರವಾಗಿ, ಧಾರ್ಮಿಕ ಉದ್ದೇಶಗಳಿಗಾಗಿ ಹೇರಳವಾಗಿ ದೇಣಿಗೆಯನ್ನು ನೀಡುತ್ತಾ, ಸಮಾಜ ಬಾಂಧವರಲ್ಲಿ ಲಕ್ಷ್ಮಣ್ ಕರಾವಳಿ ಎಂದೇ ಹೆಸರುವಾಸಿಯಾಗಿದ್ದಾರೆ.
ಕಚ್ಚೂರು ಶ್ರೀನಾಗೇಶ್ವರ ದೇವಸ್ಥಾನ ಸೇವಾಟ್ರಸ್ಟ್ (ರಿ) ಬಾರ್ಕೂರು
2023-25 ನೇ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳು
ಪ್ರ. ಕಾರ್ಯದರ್ಶಿ :
ಶ್ರೀ ಶ್ರೀಧರ್ ಭಂಡಾರಿ ಬಿರ್ತಿ
ಉಪಾಧ್ಯಕ್ಷರು :
ಶ್ರೀ ಸುರೇಶ್ ಭಂಡಾರಿ ಹಿರೇಬೆಟ್ಟು
ಶ್ರೀಮತಿ ವಾರಿಜ ವಾಸುದೇವ ಭಂಡಾರಿ ಕಪ್ಪೆಟ್ಟು
ಕೋಶಾಧಿಕಾರಿ :
ಶ್ರೀ ಎಚ್. ರಾಮ ಭಂಡಾರಿ ಬ್ರಹ್ಮಾವರ
ಜೊತೆ ಕಾರ್ಯದರ್ಶಿ :
ಶ್ರೀ ಪ್ರಕಾಶ್ ಭಂಡಾರಿ ಕುತ್ತೆತ್ತೂರು
ಜೊತೆ ಕೋಶಾಧಿಕಾರಿ :
ಶ್ರೀಮತಿ ಜ್ಯೋತಿ ಭಂಡಾರಿ ಬೈಕಾಡಿ
ಹೊಸ ಆಡಳಿತ ಮಂಡಳಿಯ ಆಡಳಿತಾವಧಿಯಲ್ಲಿ ನಮ್ಮ ಸಮಾಜದ ದೇವಸ್ಥಾನವು ಇನ್ನಷ್ಟು ಅಭಿವೃದ್ಧಿ ಹೊಂದಲಿ , ಇವರ ಧರ್ಮ ಕಾರ್ಯಗಳಿಗೆ ಶ್ರೀ ನಾಗೇಶ್ವರ ದೇವರ ಸದಾ ಅನುಗ್ರಹ ನೀಡಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರೈಸುತ್ತದೆ.