January 18, 2025
Invitation 1

ಭಂಡಾರಿ ಸಮಾಜದ ಕುಲದೇವರಾದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವ ಪ್ರತಿ ವರ್ಷ ನಡೆಯುವಂತೆ ಈ ಬಾರಿಯೂ ಮೇ 8 ಆದಿತ್ಯವಾರದಂದು ಬಹಳ ವಿಜೃಂಭಣೆಯಿಂದ ಜರಗಲಿದೆ.

ಈ ಬಾರಿಯ ಉತ್ಸವ ಉಡುಪಿ ಮತ್ತು ಕುಂದಾಪುರ ಹಾಗೂ ಬೈಂದೂರು ವಲಯದ ಭಂಡಾರಿ ಸಮಾಜ ಬಂಧುಗಳ ನೇತೃತ್ವದಲ್ಲಿ ನಡೆಯಲಿದೆ. ಉತ್ಸವದ ಯಶಸ್ವಿಗಾಗಿ ದೇವಸ್ಥಾನದ ಆಡಳಿತ ಮಂಡಳಿ ,ಭಂಡಾರಿ ಮಹಾಮಂಡಲದ ಪದಾಧಿಕಾರಿಗಳು ಎಲ್ಲಾ ವಲಯಗಳ ಭಂಡಾರಿ ಬಂಧುಗಳ ಸಲಹೆ ಸಹಕಾರ ,ಉತ್ಸವದ ಯಶಸ್ವಿಗಾಗಿ ಶ್ರಮ ವಹಿಸುತ್ತಿದೆ.

ಬೆಳಿಗ್ಗೆ ಗಂಟೆ ನಾಲ್ಕರಿಂದ ಶ್ರೀ ನಾಗೇಶ್ವರ ದೇವರಿಗೆ ಮತ್ತು ಪರಿವಾರ ದೇವತೆಗಳಿಗೆ ಸೀಯಾಳ ಅಭಿಷೇಕ ,

ಏಳರಿಂದ ಶ್ರೀ ರುದ್ರ ದೇವರಿಗೆ ಫಲನ್ಯಾಸ ತೋರಣ ಪ್ರತಿಷ್ಠಾ ಪುಣ್ಯಾಹ ಶುದ್ಧಿ 49 ಕಲಶಾಧಿವಾಸ ಸಹಿತ ಆದಿವಾಸ ಹೋಮ, ಶತರುದ್ರಾಭಿಷೇಕ ಪ್ರಸನ್ನ ಪೂಜೆ ಆರಾಧನೆ , ಎಂಟರಿಂದ ಶ್ರೀ ಮಹಾಗಣಪತಿ ದೇವರಿಗೆ ನವಕ ಕಲಶ ಹನ್ನೆರಡು ನಾಳಿಕೇರ ಗಣಯಾಗ ಪೂರ್ವಕ ಪ್ರಸನ್ನ ಪೂಜೆ, ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ನವಕ ಕಲಶ ದುರ್ಗಾ ಹೋಮ ಪ್ರಸನ್ನ ಪೂಜೆ, ಹತ್ತರಿಂದ ಶ್ರೀ ನಾಗ ದೇವರ ಸನ್ನಿಧಾನದಲ್ಲಿ ಪಂಚಾಮೃತಾಭಿಷೇಕ, ಪೂರ್ವಕ ಪ್ರಾಯಶ್ಚಿತ್ತ ಆಶ್ಲೇಷ ಬಲಿ ಸೇವೆ, ಪ್ರಸನ್ನ ಪೂಜೆ, ಮಧ್ಯಾಹ್ನ ಗಂಟೆ ಹನ್ನೆರಡರಿಂದ ಶ್ರೀ ನಾಗೇಶ್ವರ ದೇವರಿಗೆ ವಿಶೇಷ ಪೂಜೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ.

ಗಂಟೆ 12:30 ರಿಂದ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ರಿಂದ ರಂಗಪೂಜೆ ದೀಪಾರಾಧನೆ ಪ್ರಸನ್ನ ಪೂಜೆ ಮಹಾ ಮಂತ್ರಾಕ್ಷತೆ ಪ್ರಸಾದ ವಿತರಣೆ ಮುಂತಾದ ವೈದಿಕ ಕಾರ್ಯಕ್ರಮ ಶ್ರೀ ನಾಗೇಶ್ವರನ ಸನ್ನಿಧಾನದಲ್ಲಿ ಜರಗಲಿದೆ.

ಮುಂಜಾನೆ ಗಂಟೆ ಒಂಬತ್ತರಿಂದ ಸಾಂಸ್ಕೃತಿಕ ಕಾರ್ಯಕ್ರಮ ಭಂಡಾರಿ ಸಮಾಜ ಬಂಧುಗಳಿಂದ
ಮನೋರಂಜನಾ ಕಾರ್ಯಕ್ರಮ ಸನ್ಮಾನ ಕಾರ್ಯಕ್ರಮವು ಹನ್ನೊಂದು ಗಂಟೆಯವರೆಗೆ ನಡೆಯಲಿದೆ ಪೂರ್ವಾಹ್ನ ಹನ್ನೊಂದು ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ .

ಅಪರಾಹ್ನ ಒಂದರಿಂದ ಸಂಜೆ ನಾಲ್ಕರವರೆಗೆ ಭಂಡಾರಿ ಸಮಾಜ ಬಂಧುಗಳಿಂದ ಸಾಂಸ್ಕೃತಿಕ ವೈಭವ ಮತ್ತು ಸನ್ಮಾನ ಕಾರ್ಯಕ್ರಮ ಜರಗಲಿದೆ.

ಸಂಜೆ ನಾಲ್ಕರಿಂದ ಸ್ವಾಗತ ಭಂಡಾರಿ ಮಹಿಳಾ ಮಂಡಳಿಯಿಂದ ಹಾಸ್ಯಮಯ ನಾಟಕ

ಸತ್ಯ ಸುಳ್ಳಾವಂದ್

ಸಮಾಜದ ಬಂಧುಗಳಿಂದ ಯಕ್ಷಗಾನ 

ಶಿವಪಂಚಾಕ್ಷರಿ ಮಹಿಮೆ

 ನಡೆಯಲಿದೆ.ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಂಡಾರಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿಶ್ರೀ ನಾಗೇಶ್ವರ ದೇವರ ಸನ್ನಿಧಾನಕ್ಕೆ ಆಗಮಿಸಿ ದೇವರ ಕೃಪಾಕಟಾಕ್ಷೆಗೆ ಪಾತ್ರರಾಗಬೇಕು ಎಂಬುದಾಗಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಭಕ್ತಿಪೂರ್ವಕ ಪ್ರಾರ್ಥಿಸುತ್ತದೆ.

Leave a Reply

Your email address will not be published. Required fields are marked *