January 18, 2025
Vanitha Shekhar Bhandary karkala
ಕಾರ್ಕಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಹಾಗೂ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಕಾರ್ಕಳ  ತಾಲೂಕು ಆಫೀಸ್ ರಸ್ತೆ ನಿವಾಸಿ ಶ್ರೀ ಶೇಖರ್  ಹೆಚ್. ಭಂಡಾರಿಯವರ  ಧರ್ಮಪತ್ನಿ  ಮತ್ತು ಕುಪ್ಪೆಪದವು ದಿವಂಗತ ಶ್ರೀ ಕೃಷ್ಣ ಭಂಡಾರಿ ಮತ್ತು ದಿವಂಗತ ಶ್ರೀಮತಿ  ಹೊನ್ನಮ್ಮ ಕೃಷ್ಣ ಭಂಡಾರಿ ದಂಪತಿಯ ಪುತ್ರಿ    ಶ್ರೀಮತಿ  ವನಿತಾ  ಶೇಖರ್ ಭಂಡಾರಿ (63 ವರ್ಷ)ಯವರು ಫೆಬ್ರವರಿ 26  ಬುಧವಾರದಂದು ಮುಂಜಾನೆ   ಹೃದಯಾಘಾತದಿಂದ ನಿಧನರಾದರು.
 
 
ಇವರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಸೇವಾ ಟ್ರಸ್ಟ್ ನ ಟ್ರಸ್ಟಿಯಾಗಿ 1993 ರಿಂದ 1998ರ ವರೆಗೆ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಪುತ್ರರಾದ ವೈಶಾಕ್ ಮತ್ತು ಶಶಾಂಕ್ ಬೆಂಗಳೂರುನಲ್ಲಿ  ಕರ್ತವ್ಯದಲ್ಲಿ  ಇದ್ದಾರೆ. ಇವರ ಸಹೋದರಾದ ಶ್ರೀ ಪ್ರಭಾಕರ್ ಭಂಡಾರಿ ಬೊಟ್ಯಾಡಿ , ಮಂಗಳೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ  ಶ್ರೀ ರಘವೀರ ಭಂಡಾರಿ, ಶ್ರೀ ಶರತ್ ಭಂಡಾರಿ  ಬೆಂಗಳೂರು , ಶ್ರೀ ಸತೀಶ್ ಭಂಡಾರಿ  ಕುಪ್ಪೆಪದವು ಮತ್ತು  ಸಹೋದರಿ ಶ್ರೀಮತಿ  ವಿಮಲಾ  ರಾಘವ ಭಂಡಾರಿ ಬೆಂಗಳೂರು  ಹಾಗೂ  ಕುಟುಂಬ ವರ್ಗದವರನ್ನು ಅಗಲಿದ್ದಾರೆ.
 
  ಇವರ ಅಂತ್ಯ  ಸಂಸ್ಕಾರದ ವಿಧಿ ವಿಧಾನಗಳು ಬುಧವಾರ ಸಾಯಂಕಾಲ ಸ್ವಗೃಹ ದಲ್ಲಿ ನಡೆಯಲಿದೆ. 
ಇವರ ಪತಿ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಅಗಲುವಿಕೆ  ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಭಗವಂತನಲ್ಲಿ  ಪ್ರಾರ್ಥಿಸುತ್ತದೆ.
 
 
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *